ಮನೆಯಲ್ಲೇ ಮಾಡಿ ರೆಸ್ಟೋರೆಂಟ್​ ಶೈಲಿಯ ಪನ್ನೀರ್​ ಟಿಕ್ಕಾ; ತಿಂದರೆ ಒನ್​ ಮೋರ್​ ಒನ್​ ಮೋರ್​ ಅಂತಿರಾ!

paneer tikka recipe in kannada
Published on

Easy Paneer Tikka Recipe | Restaurant Style | Easy & Quick Instant Food Recipe

ಬೇಕಾಗುವ ಪದಾರ್ಥಗಳು

ಪನ್ನೀರು - 200 ಗ್ರಾಂ
ಮೊಸರು - 1/2 ಕಪ್​
ಶುಂಠಿಬೆಳುಳ್ಳಿ ಪೇಸ್ಟ್​ - 1ಚಮಚ
ಅಚ್ಚಖಾರದ ಪುಡಿ - 2 ಚಮಚ
ಅರಿಶಿನ - 1/2 ಚಮಚ
ಗರಂ ಮಸಾಲ - 1/2 ಚಮಚ
ಜೀರಿಗೆ ಪುಡಿ -1/2 ಚಮಚ
ಚಾಟ್​ ಮಸಾಲ - 1/2 ಚಮಚ
ಪೆಪ್ಪರ್​ - 1/2 ಚಮಚ
ನಿಂಬೆಹಣ್ಣಿನ ರಸ - 1 ಚಮಚ
ಕಸ್ತೂರಿ ಮೆಂತ್ಯೆ - 1/2 ಚಮಚ
ಕಡ್ಲೆಹಿಟ್ಟು - 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಮೊದಲಿಗೆ ಒಂದು ಸಣ್ಣ ತಪ್ಪಲೆಗೆ ಅರ್ಧ ಕಪ್​ ಮೊಸರು, ಶುಂಠಿ ಬೆಳುಳ್ಳಿ ಪೇಸ್ಟ್​, ಖಾರದ ಪುಡಿ, ಅರಿಶಿನ, ಗರಂ ಮಸಾಲ, ಜೀರಿಗೆ ಪುಡಿ, ಚಾಟ್​ ಮಸಾಲ, ಪೆಪ್ಪರ್, ​ನಿಂಬೆಹಣ್ಣಿನ ರಸ, ಕಸ್ತೂರಿ ಮೆಂತ್ಯೆ, ಕಡ್ಲೆಹಿಟ್ಟು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮತ್ತೊಂದೆಡೆ ಪನ್ನಿರನ್ನು ತುಂಡು ತುಂಡಾಗಿ ಚೌಕಾಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ತದನಂತರ ಈ ಮೇಲಿನ ಮಸಾಲೆ ಮಿಶ್ರಣಕ್ಕೆ ತುಂಡು ಮಾಡಿಟ್ಟುಕೊಂಡಿರುವ ಪನ್ನೀರನ್ನು ಹಾಕಿ ಸರಿಯಾಗಿ ಕಲಸಿ. ಪನ್ನೀರ್​ ಮಸಾಲೆಯೊಂದಿಗೆ ಸರಿಯಾಗಿ ಮಿಕ್ಸ್​ ಆಗಬೇಕು. ಹೀಗೆ ಮಾಡಿದ ನಂತರ ಆ ತಪ್ಪಲೆಯನ್ನು ಒಂದು ಮುಚ್ಚಳ ಅಥವಾ ತಟ್ಟೆಯಿಂದ ಮುಚ್ಚಿಡಿ. ಹೀಗೆ 10 ರಿಂದ 15 ನಿಮಿಷಗಳ ಕಾಲ ಮುಚ್ಚಿಡಬೇಕು. ತದನಂತರ ಗ್ಯಾಸಿನ ಮೇಲೆ ದೋಸೆ ಕಾವಲಿಯನ್ನು ಇಟ್ಟು ಬಿಸಿ ಮಾಡಿಕೊಳ್ಳಿ. ಅದಕ್ಕೆ ಎಣ್ಣೆ ಸವರಿ ಈ ಪನ್ನೀರ್​ ತುಂಡುಗಳನ್ನು ಒಂದೊದಾಗಿ ಇಡಿ. ಪನ್ನೀರನ್ನು ಎರಡೂ ಬದಿಗಳಲ್ಲಿ ಬೇಯುವ ಹಾಗೆ ದೋಸೆಯಂತೆ ಒಮ್ಮೆ ಮಗಚಿ ಹಾಕಿ. ಹೀಗೆ ಮಾಡುವುದರಿಂದ ಪನ್ನೀರ್​ ಚೆನ್ನಾಗಿ ಫ್ರೈ ಆಗಿ ಟಿಕ್ಕಾ ರೆಡಿಯಾಗುತ್ತೆ. ಫ್ರೈ ಆದ ಪನ್ನೀರ್​ ಟಿಕ್ಕಾವನ್ನು ಟೊಮ್ಯಾಟೋ ಕೆಚಪ್​ ಅಥವಾ ಮಯೋನಿಸ್​ ಜತೆ ಬೆರೆಸಿ ತಿನ್ನುತ್ತಾ ಇದ್ರೆ ಖಂಡಿತಾ ನೀವು ಒನ್​ ಮೋರ್​ ಒನ್​ ಮೋರ್​ ಅಂತಿರಾ…

ಸರಳ ಟಿಪ್ಸ್​: ಈ ಟಿಕ್ಕಾ ಮಾಡುವಾಗ ನಿಮ್ಮ ಬಳಿ ಈ ಮೇಲೆ ಹೇಳಿರುವ ಕಸ್ತೂರಿ ಮೆಂತ್ಯೆ, ಚಾಟ್​ ಮಸಾಲ, ಕಡ್ಲೆಹಿಟ್ಟು ಇಲ್ಲದಿದ್ದರೂ ಕೇವಲ ಉಳಿದ ಪದಾರ್ಥಗಳನ್ನೇ ಬಳಸಿ ಮಾಡಬಹುದು. ಒಂದು ವೇಳೆ ದೋಸೆ ಕಾವಲಿಯಲ್ಲಿ ಮಾಡಲು ಇಷ್ಟವಿಲ್ಲವಾದಲ್ಲಿ ಸ್ಟಿಕ್​ಗೆ ಪನ್ನೀರ್​ ತುಂಡುಗಳನ್ನು ಹಾಕಿ ಗ್ರಿಲ್​ ಮಾಡಿಕೊಳ್ಳಬಹುದು. ಪನ್ನೀರ್​ ಜತೆ ಸ್ವಲ್ಪ ಈರುಳ್ಳಿ ಹಾಗೂ ದಪ್ಪ ಮೆಣಸಿನಕಾಯಿಯ ತುಂಡುಗಳನ್ನು ಬೆರೆಸಿದರೆ ಬಹಳ ರುಚಿಯಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net