ಹೆಚ್ಚು ವಿಡಿಯೋ ಗೇಮ್ಸ್​ ಆಡುತ್ತೀರಾ? ನಿಮ್ಮ ಎದೆಬಡಿತ ಏರುಪೇರಾಗಬಹುದು, ಎಚ್ಚರಿಕೆ!

videogames
Published on

ನವದೆಹಲಿ: ನೀವು ಅಥವಾ ನಿಮ್ಮ ಮಕ್ಕಳು ಲೆಕ್ಕಕ್ಕಿಂತ ಹೆಚ್ಚು ವಿಡಿಯೋ ಗೇಮ್ಸ್​ ಆಡುತ್ತೀರಾ? ಹುಷಾರು! ನಿಮ್ಮ ಎದೆಬಡಿತ ಏರುಪೇರಾಗಬಹುದು. ಹೊಸ ಅಧ್ಯಯನದ ಪ್ರಕಾರ ಎದೆಬಡಿತದ ಏರುಪೇರಿನಿಂದ ವಿಡಿಯೋ ಗೇಮ್ಸ್​ ಆಡುವಾಗ ಮಕ್ಕಳು ಪ್ರಜ್ಞೆ ಕೂಡ ತಪ್ಪಬಹುದು.

ಹಾರ್ಟ್ ರಿದಮ್ ಸೊಸೈಟಿ ಪ್ರಕಟಿಸುವ ಹಾರ್ಟ್ ರಿದಮ್ ಜರ್ನಲ್​ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ ವಿಡಿಯೋ ಗೇಮ್ಸ್ ಆಡುವ ಮಕ್ಕಳಲ್ಲಿ ಕಾರ್ಡಿಯಾಕ್ ಆರ್ಹೆತ್ಮಿಯಾ ಹೆಚ್ಚಾಗುವ ಸಾದ್ಯತೆ ಇದೆ. ಈ ವಿಷಯವನ್ನು ಹಿಂದೆ ಗುರುತಿಸಲಾಗಿರಲಿಲ್ಲ. ವಿಡಿಯೋ ಗೇಮ್​ಗಳನ್ನು ಆಡುವಾಗ ಪ್ರಜ್ಞೆ ಕಳೆದುಕೊಳ್ಳುವುದು ಅಪರೂಪ. ಆದರೆ ಇದರಲ್ಲಿ ಒಂದು ಪ್ಯಾಟರ್ನ್​ ಅನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

ವಿಡಿಯೋ ಗೇಮ್ಸ್​ ಕೆಲವು ಮಕ್ಕಳಲ್ಲಿ ಏರುಪೇರಾದ ಎದೆಬಡಿತಕ್ಕೆ ಕಾರಣ ಆಗಬಹಹುದು. ಇದು ಗಂಭೀರ ಆರೋಗ್ಯ ಸಮಸ್ಯೆ ಆಗಿದೆ. ಇದನ್ನು ಸರಿಯಾದ ಸಮಯದಲ್ಲಿ ಗುರುತಿಸದೇ ಹೋದರೆ ಪ್ರಾಣಕ್ಕೂ ಅಪಾಯವಿದೆ. ವಿಡಿಯೋ ಗೇಮಿಂಗ್ ಮಾಡುವಾಗ ಹಠಾತ್ತನೆ ಪ್ರಜ್ಞೆಯನ್ನು ಕಳೆದುಕೊಳ್ಳುವ ಮಕ್ಕಳನ್ನು ಹೃದಯ ತಜ್ಞರಿಂದ ಪರೀಕ್ಷೆಗೆ ಒಳಪಡಿಸಬೇಕು. ಇದು ಗಂಭೀರ ಹೃದಯ ಸಂಬಂಧಿ ಸಮಸ್ಯೆಯ ಮೊದಲ ಚಿಹ್ನೆಯಾಗಿರಬಹುದು' ಎಂದು ಪ್ರಮುಖ ಸಂಶೋಧಕ ಕ್ಲೇರ್ ಎಂ. ಲಾಲಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net