

ಸಿಹಿಗೆಣಸಿನ ಚಾಟ್ ಚಳಿಗಾಲದಲ್ಲಿ ರುಚಿಕರವಾಗಿರುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ನಂಬಲಾಗಿದೆ. ಏಕೆಂದರೆ ಸಿಹಿ ಗೆಣಸು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸಾಮಾನ್ಯವಾಗಿ ಜನರು ಹೊರಗೆ ಹೋಗಿ ರುಚಿಕರವಾದ ಚಾಟ್ ತಿನ್ನಲು ಇಷ್ಟಪಡುತ್ತಾರೆ.(Recipe)
ಈಗ ವಿಪರೀತ ಚಳಿಯಿಂದ ಜನ ಹೊರಗೆ ಹೋಗೋದು ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮನೆಯಲ್ಲಿಯೇ ಕುಳಿತು ಸಿಹಿ ಗೆಣಸು ಚಾಟ್ ತಿನ್ನಬೇಕೆ. ಹಾಗಾದರೆ ಖ್ಯಾತ ಶೆಫ್ ಕುನಾಲ್ ಕಪೂರ್ ಅವರ ವಿಶೇಷ ಸಿಹಿಗೆಣಸಿನ ಚಾಟ್ ರೆಸಿಪಿಯನ್ನು ಇಲ್ಲಿ ತಿಳಿಸಲಾಗಿದೆ. ಸಿಹಿಗೆಣಸನ್ನು ಉಪ್ಪಿನಲ್ಲಿ ಹುರಿದು ರುಚಿಕರವಾದ ಚಾಟ್ ಮಾಡುವುದು ಹೇಗೆ ಎಂದು ಅವರು ಮಾಡಿರುವ ವಿಧಾನ ಹೀಗಿದೆ.
ಮೊದಲು ನೀವು ಉಪ್ಪನ್ನು ತೆಗೆದುಕೊಂಡು ಬಾಣಲೆಯಲ್ಲಿ ಹಾಕಬೇಕು. ಈಗ ಅದರ ಒಳಗೆ ತೊಳೆದು ಒಣಗಿಸಿದ ಸಿಹಿ ಗೆಣಸುಗಳನ್ನು ಹಾಕಬೇಕು. ಈಗ ಅವುಗಳನ್ನು ಉಪ್ಪಿನೊಂದಿಗೆ ಚೆನ್ನಾಗಿ ಮುಚ್ಚಿ ಹೈ ಫ್ಲೇಮ್ನಲ್ಲಿ 15 ನಿಮಿಷಗಳ ಕಾಲ ಮತ್ತು ನಂತರ ಲೋ ಫ್ಲೇಮ್ ಉರಿಯಲ್ಲಿ 15 ರಿಂದ 20 ನಿಮಿಷಗಳ ಕಾಲ ಬೇಯಿಸಿ. ನಂತರ ಗ್ಯಾಸ್ ಸ್ವಿಚ್ ಆಫ್ ಇಕ್ಕಳದ ಸಹಾಯದಿಂದ ಗೆಣಸನ್ನು ಹೊರತೆಗೆಯಿರಿ.
ಈಗ ನೀವು ಸಿಹಿಗೆಣಸಿನ ಮೇಲಿರುವ ಉಪ್ಪನ್ನು ಬಟ್ಟೆಯ ಸಹಾಯದಿಂದ ಸ್ವಚ್ಛಗೊಳಿಸಬೇಕು. ಗೆಣಸು ತಣ್ಣಗಾದ ಬಳಿಕ ನೀವು ಚಾಕುವಿನಿಂದ ಅದರ ಸಿಪ್ಪೆಯನ್ನು ತೆಗೆದು ರೌಂಡ್ ಆಕಾರದಲ್ಲಿ ಕತ್ತರಿಸಿ. ಈಗ ಒಂದು ಬಟ್ಟಲಿನಲ್ಲಿ ಕತ್ತರಿಸಿದ ಗೆಣಸು ತೆಗೆದುಕೊಂಡು ಹುರಿದು ಮಾಡಿರುವ ಜೀರಿಗೆ ಪುಡಿ ಹಾಕಿ, ಬಳಿಕ ಚಿಲ್ಲಿ ಪೌಡರ್, ಚಾಟ್ ಮಸಾಲಾ, ಸಾಮಾನ್ಯ ಉಪ್ಪಿನೊಂದಿಗೆ ಕಪ್ಪು ಉಪ್ಪು, ನಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಬಳಿ ಇದ್ದರೆ 3 ರಿಂದ 4 ಚಮಚ ಹುಣಸೆಹಣ್ಣಿನ ಚಟ್ನಿ ಸೇರಿಸಿ ಇದು ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.