ಗಣೇಶ ಚತುರ್ಥಿಯ ಸಂಭ್ರಮವು ಭಾರತದಾದ್ಯಂತ, ವಿಶೇಷವಾಗಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಭಕ್ತಿಯಿಂದ ಆಚರಿಸಲ್ಪಡುವ ಒಂದು ವಿಶೇಷ ಉತ್ಸವವಾಗಿದೆ. ಈ ಹಬ್ಬವು ಗಣಪತಿಯ ಜನ್ಮದಿನವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಆಚರಿಸಲಾಗುತ್ತದೆ. ಈ ಹಬ್ಬದ ಸಂಭ್ರಮ ಮುಗಿದ ಮೇಲೆ ಗಣೇಶ ವಿಸರ್ಜನೆ ಮಾಡಲಾಗುತ್ತದೆ. ಈ ವೇಳೆ ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಕೂಡಾ ಅಗತ್ಯವಾಗಿದೆ. ನಾವು ಈ ಕುರಿತಾಗಿ ಇಂದು ತಿಳಿದುಕೊಳ್ಳಲಿದ್ದೇವೆ.