ಈ ಗುಣಗಳನ್ನು ಹೊಂದಿರುವ ಜನರು ತಮ್ಮ ಜೀವನದುದ್ದಕ್ಕೂ ಶ್ರೀಮಂತರಾಗಿರುತ್ತಾರೆ..ಯಾಕೆ ಗೊತ್ತಾ?Chanakya Niti

Chanakya Niti
Published on

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅವರು ಅನೇಕ ನೀತಿಗಳನ್ನು ರೂಪಿಸಿದರು, ಇಂದು ಅದನ್ನು ನಾವೆಲ್ಲರೂ ಚಾಣಕ್ಯ ನೀತಿ ಎಂದು ಕರೆಯುತ್ತಿದ್ದೇವೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಒಬ್ಬ ವ್ಯಕ್ತಿಯು ಈ ಗುಣಗಳನ್ನು ಹೊಂದಿದ್ದರೆ, ಅವರು ಜೀವನದಲ್ಲಿ ಯಶಸ್ವಿಯಾಗುವುದನ್ನು ಮತ್ತು ಶ್ರೀಮಂತರಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಈ ಗುಣಗಳು ಒಬ್ಬ ವ್ಯಕ್ತಿಯ ಹಣೆಬರಹವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಹಾಗಾದರೆ ಆ ಗುಣಗಳು ಯಾವವು ಗೊತ್ತಾ? ಬನ್ನಿ ತಿಳಿಯೋಣ.

1. ಕಠಿಣ ಪರಿಶ್ರಮ

ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಗೆ ಕಠಿಣ ಪರಿಶ್ರಮದ ಗುಣವಿದ್ದರೆ, ಅವನು ದುರಾದೃಷ್ಟವನ್ನು ಸಹ ಜಯಿಸಬಹುದು. ಅಲ್ಲದೆ ಒಬ್ಬ ವ್ಯಕ್ತಿಯು ಕಷ್ಟಪಟ್ಟು ಕೆಲಸ ಮಾಡಿದರೆ, ಅವನು ಯಾವಾಗಲೂ ಇತರ ಜನರಿಗಿಂತ ಮುಂದೆ ಇರುತ್ತಾನೆ. ಕಷ್ಟಪಟ್ಟು ದುಡಿಯುವ ಜನರ ಒಂದು ಗುಣವೆಂದರೆ ಅವರು ಜೀವನದಲ್ಲಿ ಎಲ್ಲವನ್ನೂ ತಾವಾಗಿಯೇ ಸಾಧಿಸಬಹುದು. ಈ ಜನರಿಗೆ ಹಣದ ಕೊರತೆಯೂ ಇಲ್ಲ, ಯಾವುದಕ್ಕೂ ಕೊರತೆಯೂ ಇಲ್ಲ.

2.ನಮ್ರತೆ

ಒಬ್ಬ ವ್ಯಕ್ತಿಯು ವಿನಮ್ರತೆಯ ಗುಣವನ್ನು ಹೊಂದಿರಬೇಕು. ಯಾರೇ ಆಗಿರಲಿ ವಿನಮ್ರನಾಗಿದ್ದರೆ ಮತ್ತು ಮಧುರವಾದ ಮಾತಿನ ಗುಣವನ್ನು ಹೊಂದಿದ್ದರೆ, ಅವನು ಜೀವನದಲ್ಲಿ ಯಶಸ್ವಿಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನಿಮ್ಮೊಳಗೆ ಆ ಗುಣವಿದ್ದಾಗ, ನಿಮ್ಮ ಎಲ್ಲಾ ಕೆಲಸಗಳು ಸರಾಗವಾಗಿ ಮುಗಿಯುತ್ತವೆ ಎಂದು ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ.

3. ದಾನದ ಗುಣ

ಒಬ್ಬ ವ್ಯಕ್ತಿಯು ಹೊಂದಿರಲೇ ಬೇಕಾದ ಒಂದು ಗುಣವಿದ್ದರೆ ಅದು ದಾನದ ಗುಣ. ದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದೆ. ಚಾಣಕ್ಯ ನೀತಿಯ ಪ್ರಕಾರ, ದಾನ ಮಾಡುವ ವ್ಯಕ್ತಿಯು ಜೀವನದಲ್ಲಿ ಯಾವಾಗಲೂ ಪ್ರಗತಿ ಹೊಂದುತ್ತಾನೆ ಮತ್ತು ಮುಂದೆ ಬರುತ್ತಾನೆ. ದಾನ ಮಾಡುವ ಯಾರ ಬಳಿಯೂ ಎಂದಿಗೂ ಹಣದ ಕೊರತೆಯಾಗುವುದಿಲ್ಲ. ಅಂತಹ ಜನರ ಹಣ ಯಾವಾಗಲೂ ಹೆಚ್ಚುತ್ತಲೇ ಇರುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net