

ನವದೆಹಲಿ: ರೈಲು ಚಲಿಸುವಾಗ ಹತ್ತಬಾರದು, ಹಳಿಗಳ ಮೇಲೆ ಇಳಿಯಬಾರದು ಎಂಬಿತ್ಯಾದಿ ನಿಯಮಗಳ ಬಗ್ಗೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಜಾಗೃತಿ ಮೂಡಿಸುತ್ತಲೇ ಇರುತ್ತದೆ. ಆದರೆ ಅನಾಗರಿಕರಂತೆ ವರ್ತಿಸುವ ಹಲವು ಪ್ರಯಾಣಿಕರು ಇದಾವುದನ್ನೂ ಲೆಕ್ಕಿಸದೆ ಜೀವ ಪಣಕ್ಕಿಟ್ಟು ರೈಲು ನಿಲ್ದಾಣಗಳಲ್ಲಿ ವರ್ತಿಸುವುದನ್ನು ಕಾಣಬಹುದು. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋ ಸಾಕ್ಷಿ.
ಇದನ್ನೂ ಓದಿ: ಲಿಟಲ್ ಚಾಂಪಿಯನ್.. ಅಭಿಮಾನಿಗೆ ಸಮಂತಾ ಪ್ರಶಂಸೆ!
ಇಂಡಿಯನ್ ಟೆಕ್ ಅಂಡ್ ಇನ್ಫ್ರಾ ಇನ್ಸ್ಟಾದಲ್ಲಿ ಈ ವೈರಲ್ ವೀಡಿಯೋವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಚಲಿಸುವ ರೈಲನ್ನು ಹತ್ತಲು ಕುಟುಂಬವೊಂದು ರೈಲುಹಳಿಗಳ ಮೇಲೆ ಇಳಿದಿರುವುದನ್ನು ಕಾಣಬಹುದು. ವ್ಯಕ್ತಿಯೊಬ್ಬ ಮೊದಲು ಮಹಿಳೆಗೆ ರೈಲು ಹತ್ತಲು ಸಹಾಯ ಮಾಡುತ್ತಾನೆ. ಆಕೆಯನ್ನು ಜೋರಾಗಿ ರೈಲಿನ ಒಳಗೆ ತಳ್ಳುತ್ತಾನೆ. ನಂತರ, ದೊಡ್ಡ ಲ್ಯಾಗೇಜ್ಬ್ಯಾಗ್ನೊಂದಿಗೆ ಆತ ರೈಲಿನ ಕೊನೆಯ ಮೆಟ್ಟಿಲಿನಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿರುವುದು ಕಂಡುಬರುತ್ತಿದೆ.
ನಿಲ್ದಾಣದಿಂದ ಹೊರಡುತ್ತಿರುವ ರೈಲಿನಲ್ಲಿ ಇಂತಹ ದುಸ್ಸಾಹಸಕ್ಕೆ ಪ್ರಯಾಣಿಕರು ಇಳಿದಿದ್ದಾರೆ. ಬಾಗಿಲಿನ ಮೆಟ್ಟಿಲ ಮೇಲೆ ಅವರು ನೇತಾಡುತ್ತ ಪ್ರಯಾಣಿಸುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಆಗಿದೆ. ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವ ವಿಡಿಯೋ ಕಂಡು ನೆಟ್ಟಿಗರು ‘ದಯವಿಟ್ಟು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ’ ಎಂದು ಕಾಮೆಂಟ್ ಮಾಡಿದ್ದಾರೆ.