ಇದು ಲಾಕ್​ಡೌನ್​ ಬಜ್ಜಿ! ಕ್ರೀಂ ಬಿಸ್ಕೆಟ್​ ಮಿಕ್ಸಿಂಗ್​, ಅಬ್ಬಬ್ಬೋ ಎಂದ ನೆಟ್ಟಿಗರು...

bajji
Published on

ಲಾಕ್​ಡೌನ್​ ಎಂದರೆ ಅದು ಅನೇಕ ಮಂದಿಯ ಪಾಲಿಗೆ ಸಂಶೋಧನೆಯ ದಿನಗಳೂ ಆಗಿವೆ. ಅದರಲ್ಲಿಯೂ ಅಡುಗೆಯಲ್ಲಂತೂ ವಿಧವಿಧ ಭಕ್ಷ್ಯಗಳು, ಹೆಸರೇ ಇಲ್ಲದ ಖಾದ್ಯಗಳನ್ನು ಅನೇಕ ಮಂದಿ ಮಾಡಿದ್ದಾರೆ.

ಅಂಥದ್ದೇ ಒಂದು ಖಾದ್ಯ, ಆದರೆ ತುಂಬಾ ವಿಚಿತ್ರ ಎನಿಸುವ ತಿನಿಸು ಇದೀಗ ಭಾರಿ ವೈರಲ್​ ಆಗಿದೆ. ಅದೇ ಓರಿಯೋ ಬಜ್ಜಿ!

ಅನೇಕ ಬಗೆಯ ತರಕಾರಿ, ಮೆಣಸು ಇತ್ಯಾದಿಗಳನ್ನು ಬಳಸಿ ಬಜ್ಜಿ ಮಾಡುವುದನ್ನು ಎಲ್ಲರೂ ಕೇಳಿರುತ್ತೇವೆ. ಆದರೆ ಇದು ಹಿಂದೆಂದೂ ಕೇಳಿರದ ಬಜ್ಜಿ. ಓರಿಯೋ ಬಿಸ್ಕೆಟ್​ ಬಜ್ಜಿಗೆ ಹಾಕಿ ಇದನ್ನು ಮಾಡಲಾಗಿದೆಯಂತೆ!

ಲಾಕ್‌ಡೌನ್ ಸಮಯದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು ಇಂಥದ್ದೊಂದು ಬಜ್ಜಿ "ಅನ್ವೇಷಣೆ" ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಓರಿಯೋ ಬಿಸ್ಕೆಟ್​ ಬಳಸಿ ಜ್ಯೂಸ್​ ಮಾಡುವುದು ಇದೀಗ ಜನಪ್ರಿಯವಾಗಿದೆ. ಆದರೆ ಬಜ್ಜಿಯಲ್ಲಿಯೂ ಇದನ್ನು ಬಳಕೆ ಮಾಡಿರುವುದು ವಿಶೇಷವಾಗಿದೆ.

ಆದರೆ ಇದರ ಫೋಟೋ ಶೇರ್​ ಮಾಡಿದವರೆಲ್ಲಾ, ಇದರ ವಿರುದ್ಧವೇ ಕಮೆಂಟ್​ ಮಾಡಿದ್ದಾರೆ. ನೋಡಲು ಅಸಹ್ಯ ಎನಿಸುವುದು ಮಾತ್ರವಲ್ಲದೇ, ಬಾಯಲ್ಲಿ ನೀರೂರಿಸುವ ಬಜ್ಜಿಗೆ ಇಂಥ ಅವಸ್ಥೆ ಬಂದಿರುವುದನ್ನು ನೋಡಲಾರೆವು ಎಂದು ಅನೇಕ ಮಂದಿ ಕಮೆಂಟ್​ನಲ್ಲಿ ಹೇಳಿದ್ದಾರೆ.

ಖಾರ ಖಾರ ಎನಿಸಬೇಕಿರುವ ಬಜ್ಜಿಗೆ ಕ್ರೀಂ ಸೇರಿಸಿದರೆ ಅದು ಎಷ್ಟು ಕೆಟ್ಟದ್ದಾಗಿರಬಹುದು ಎಂದೂ ಹಲವರು ಹೇಳಿದ್ದರೆ, ಇದು ಅಮಾನವೀಯ ಎಂದು ಹಲವರು ಬಣ್ಣಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net