

ಬೆಂಗಳೂರು: ಮಳೆಗಾಲದಲ್ಲಿ ವಾತಾವರಣ ಎಲ್ಲೆಡೆ ಆಹ್ಲಾದಕರವಾಗಿರುತ್ತದೆ. ಹಚ್ಚ ಹಸಿರಿನ ಪ್ರಕೃತಿಯ ನೋಟ, ಮಸಾಲೆಯುಕ್ತ ಆಹಾರ ಸೇವನೆ ಎಲ್ಲರನ್ನೂ ಆಕರ್ಷಿಸುತ್ತದೆ. ಪ್ರಯಾಣಿಸಲು ಇಷ್ಟಪಡುವ ಜನರು ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸುತ್ತಾರೆ. ಆದರೆ ಈ ಋತುವಿನಲ್ಲಿ ಹಲವು ರೀತಿಯ ಸಮಸ್ಯೆಗಳೂ ಉದ್ಭವಿಸಬಹುದು. ಅದರಲ್ಲಿ ಒಂದೆಂದರೆ ಮಳೆಯಲ್ಲಿ ತೊಯ್ದ ಬಟ್ಟೆಗಳು ದುರ್ವಾಸನೆ ಬರುವುದು.
ಇತ್ತೀಚಿನ ದಿನಗಳಲ್ಲಿ, ಚೆನ್ನಾಗಿ ತೊಳೆದ ಬಟ್ಟೆಗಳೂ ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಬಟ್ಟೆಗಳನ್ನು ಧರಿಸಲು ಕಷ್ಟವಾಗುತ್ತದೆ. ಅದರಲ್ಲೂ ಮಾನ್ಸೂನ್ ಸಮಯದಲ್ಲಿ ಬಟ್ಟೆಗಳು ಚೆನ್ನಾಗಿ ಒಣಗುವುದಿಲ್ಲ. ಆಗ ಬಟ್ಟೆ ಕೊಳಕು ವಾಸನೆಯನ್ನು ಬರುತ್ತದೆ. ಹಾಗಾದರೆ ಈ ಸಮಸ್ಯೆಯನ್ನು ಹೇಗೆ ಎದುರಿಸುವುದು?, ಬಟ್ಟೆಯಿಂದ ವಾಸನೆಯನ್ನು ತೊಡೆದುಹಾಕುವುದು ಹೇಗೆಂದು ತಿಳಿಯೋಣ ಬನ್ನಿ...
*ತೊಳೆದ ಬಟ್ಟೆಯಿಂದ ಕೊಳಕು ವಾಸನೆ ಬರುತ್ತಿದ್ದರೆ, ಕಬೋರ್ಡಿನಲ್ಲಿ ಇಡುವ ಮೊದಲು ಬಟ್ಟೆಯ ಮಧ್ಯದಲ್ಲಿ ಕರ್ಪೂರವನ್ನು ಹಾಕಿ. ಹೀಗೆ ಮಾಡುವುದರಿಂದ ಬಟ್ಟೆಯಿಂದ ಬರುವ ದುರ್ವಾಸನೆ ದೂರವಾಗುತ್ತದೆ.
*ಬಟ್ಟೆಗಳು ದುರ್ವಾಸನೆ ಬೀರುವುದು ಮಾತ್ರವಲ್ಲದೆ, ಫಂಗಲ್ ಸೋಂಕಿನ ಅಪಾಯವೂ ಇದೆ. ಆದ್ದರಿಂದ ಈ ಸಮಸ್ಯೆಯನ್ನು ತಪ್ಪಿಸಲು ಬೇವಿನ ಎಲೆಗಳನ್ನು ಬಟ್ಟೆಯಲ್ಲಿ ಇಟ್ಟುಕೊಳ್ಳಿ. ಇದು ಬಟ್ಟೆಯಿಂದ ವಾಸನೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಸೋಂಕನ್ನು ತಡೆಯುತ್ತದೆ.
*ಬಟ್ಟೆಯಿಂದ ವಾಸನೆಯನ್ನು ತೆಗೆದುಹಾಕಲು ಕಾಫಿ ಬೀಜಗಳನ್ನು ಬಳಸಿ. ಇದಕ್ಕಾಗಿ ಕಾಫಿ ಬೀಜಗಳನ್ನು ನೆಟ್‌ನಲ್ಲಿ ಹಾಕಿ ಕಬೋರ್ಡ್‌ನಲ್ಲಿ ಇರಿಸಿ. ಕಾಫಿ ಬೀಜಗಳನ್ನು ಬೀರುಗಳಲ್ಲಿ ಕೆಲವು ದಿನಗಳವರೆಗೆ ಇಡುವುದರಿಂದ, ಬಟ್ಟೆಯಿಂದ ಬರುವ ದುರ್ವಾಸನೆಯನ್ನು ತೆಗೆದುಹಾಕಬಹುದು.