More

    ಕೆಮಿಕಲ್ ಬಳಸದೆ ಮನೆಯಲ್ಲೇ ಬಂಗು ಸಮಸ್ಯೆ ನಿವಾರಿಸಿಕೊಳ್ಳಿ

    ಬೆಂಗಳೂರು: ಗರ್ಭಿಣಿಯರಲ್ಲಿ ಮತ್ತು ನಲವತ್ತರ ಆಸುಪಾಸಿನಲ್ಲಿರುವ ಹೆಣ್ಣುಮಕ್ಕಳಲ್ಲಿ ಕೆನ್ನೆ ಮತ್ತು ಮೂಗಿನ ಮೇಲೆ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ ಇದಕ್ಕೆ ಬಂಗು ಎನ್ನುತ್ತೇವೆ. ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಮಯ ಅಥವಾ ನಿಂತ ಮೇಲೆ ಬಂಗು ಉಂಟಾಗುವುದು ಸಹಜ. ಕೆಲವರಲ್ಲಿ ಇದು ತನ್ನಿಂದ ತಾನೇ ಹೊರಟುಹೋಗುತ್ತವೆ. ಉರಿ, ನವೆ ಯಾವುದೂ ಇರುವುದಿಲ್ಲ.

    ಪರಿಹಾರ
    ಇಂತಹ ಕಪ್ಪು ಕಲೆಗೆ ಕೆಂಪು ಶ್ರೀಗಂಧ ಮತ್ತು ಕಸ್ತೂರಿ ಅರಿಶಿಣವನ್ನು ಹಾಲಿನಲ್ಲಿ ತೇಯ್ದು ಲೇಪಿಸಬೇಕು. ಹೆಚ್ಚು ಬಿಸಿಲಿನಲ್ಲಿ ತಿರುಗಬಾರದು. ಒಂದು ವೇಳೆ ತಿರುಗಾಡಿದರೆ ಕೊಡೆ ಹಿಡಿದೇ ಓಡಾಡಿ. ಕಸ್ತೂರಿ ಅರಿಶಿಣ, ರಕ್ತಚಂದನವನ್ನು ಬೆಣ್ಣೆಯಲ್ಲಿ ಅರೆದು ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೊಮ್ಮೆಯಾದರೂ ಕಲೆಯ ಜಾಗದಲ್ಲಿ ಲೇಪಿಸಿಕೊಳ್ಳಿ, ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ. ಮುಖ ತೊಳೆಯಲು ಹೆಚ್ಚು ಕ್ಷಾರಯುಕ್ತ ಸಾಬೂನು ಬೇಡ. ಕಡಲೆಹಿಟ್ಟನ್ನು ಬಳಸಿದರೆ ಒಳ್ಳೆಯದು. ಮುಖಕ್ಕೆ ಸದ್ಯ ಯಾವುದೇ ಕ್ರೀಂ ಹಚ್ಚಿಕೊಳ್ಳುವುದು ಬೇಡ. ಏಕೆಂದರೆ ಕ್ರೀಂನಲ್ಲಿ ರಾಸಾಯನಿಕ ಅಂಶಗಳಿಂದ ಆಗುವ ಪ್ರಕ್ರಿಯೆಗಳಿಂದ ಮತ್ತೆ ಚರ್ಮದ ಬಣ್ಣ ಬದಲಾಗಬಹುದು. ಆಹಾರದಲ್ಲಿ ಹೆಚ್ಚು ತರಕಾರಿ, ಸೊಪ್ಪು ಬಳಸಿ. ಸೋಗದ ಬೇರನ್ನು ಕುಟ್ಟಿ ಪುಡಿ ಮಾಡಿ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಕುಡಿಯಿರಿ. ಚಿಂತಿಸಬೇಡಿ. ನಿದ್ರೆ ಚೆನ್ನಾಗಿ ಮಾಡಿ.

    ಬಿಳಿ ಕೂದಲು ಕಪ್ಪಾಗಲು ಮನೆಯಲ್ಲಿ ಈ ಪುಡಿ ಇದ್ದರೆ ಸಾಕು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts