

ನವದೆಹಲಿ: ಭಾರತದಲ್ಲಿ ಐಫೋನ್ಗಳಿಗೆ ಭಾರೀ ಬೇಡಿಕೆಯಿದೆ. ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿ ಆ್ಯಪಲ್ ಭಾರತದಲ್ಲಿ ಪ್ರಾರಂಬವಾಗಲಿದೆ ಎಂದು Apple Inc ಸಂಸ್ಥೆ ವರದಿ ಮಾಡಿದೆ. ಮುಂದಿನ ಪೀಳಿಗೆಯ ಐಫೋನ್ 15 ತಮಿಳುನಾಡಿನಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುತ್ತಿದೆ. ಈ ಮೂಲಕ ಭಾರತದಲ್ಲಿ ಕಾರ್ಯಾಚರಣೆಗಳು ಮತ್ತು ಚೀನಾದಲ್ಲಿನ ಮುಖ್ಯ ಉತ್ಪಾದನಾ ನೆಲೆಯ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡುವ ಪ್ರಯತ್ನದಲ್ಲಿದೆ.
Apple Inc. ನ ಮುಂದಿನ ಪೀಳಿಗೆಯ ಐಫೋನ್ 15 ತಮಿಳುನಾಡಿನಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುತ್ತಿದೆ. ಈ ಮೂಲಕ ಭಾರತದಲ್ಲಿ ಕಾರ್ಯಾಚರಣೆಗಳು ಮತ್ತು ಚೀನಾದಲ್ಲಿನ ಮುಖ್ಯ ಉತ್ಪಾದನಾ ನೆಲೆಯ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡುವ ಪ್ರಯತ್ನದಲ್ಲಿದೆ.
ಅಮೆರಿಕ ಮತ್ತು ಚೀನಾ ನಡುವಿನ ಉದ್ವಿಗ್ನತೆಯಿಂದ ವ್ಯಾಪಾರಕ್ಕೆ ಹೊಡೆತ ಬೀಳಬಹುದು, ಹಾಗೂ ತನ್ನ ಪ್ರಮುಖ ಉತ್ಪನ್ನಗಳಿಗೆ ಪೂರೈಕೆ ಸರಪಳಿಯನ್ನು ಅಪಾಯಕ್ಕೆ ತಳ್ಳುತ್ತದೆ ಅನ್ನೋ ಕಾರಣದಿಂದ ಕ್ಯುಪರ್ಟಿನೊ, ಕ್ಯಾಲಿಫೋರ್ನಿಯಾ ಮೂಲದ ಸಂಸ್ಥೆಯು ತನ್ನ ಉತ್ಪಾದನೆಯನ್ನು ಚೀನಾದಿಂದ ಬೇರೆ ಕಡೆ ಸ್ಥಳಾಂತರಿಸಲು ಹಲವು ವರ್ಷಗಳಿಂದ ಪ್ಲ್ಯಾನ್ ಮಾಡ್ತಿದೆ.
ತಮಿಳುನಾಡಿನ ಶ್ರೀಪೆರಂಬದೂರಿನ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಸ್ಥಾವರವು ಚೀನಾದ ಕಾರ್ಖಾನೆಗಳಿಂದ ಸಾಗಿಸಲು ಪ್ರಾರಂಭಿಸಿದ ಕೆಲವೇ ವಾರಗಳ ನಂತರ ಹೊಸ ಸಾಧನಗಳನ್ನು ತಲುಪಿಸಲು ತಯಾರಿ ನಡೆಸುತ್ತಿದೆ. ಇದಕ್ಕೆ ಕಾರಣ ಕಂಪನಿಯು ಭಾರತದಿಂದ ಬರುವ ಹೊಸ ಐಫೋನ್‌ಗಳ ಪರಿಮಾಣವನ್ನು ತ್ವರಿತವಾಗಿ ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಐಫೋನ್, ಸೆಪ್ಟೆಂಬರ್ 12 ರಂದು ಘೋಷಿಸಲ್ಪಡುವ ಸಾಧ್ಯತೆಯಿದ್ದು, ಇದು ಕಳೆದ ಮೂರು ವರ್ಷಗಳಲ್ಲಿ ಸಾಧನಕ್ಕೆ ದೊಡ್ಡ ಅಪ್‌ಡೇಟ್ ಆಗಲಿದೆ ಎಂದು ಭರವಸೆ ನೀಡಿದೆ. ಕ್ಯಾಮೆರಾ ಸಿಸ್ಟಮ್‌ಗೆ ಪ್ರಮುಖ ನವೀಕರಣಗಳನ್ನು ಒಳಗೊಂಡಿರುತ್ತದೆ ಮತ್ತು ಪ್ರೋ ಮಾದರಿಗಳು ಸುಧಾರಿತ 3- ನ್ಯಾನೋಮೀಟರ್ ಪ್ರೊಸೆಸರ್ ಅನ್ನು ಪಡೆಯುತ್ತವೆ ಎಮದೂ ಹೇಳಲಾಗಿದೆ.