ಅತಿಯಾಗಿ ಮಾವಿನ ಹಣ್ಣು ತಿನ್ನಬಾರದು ಏಕೆ ಗೊತ್ತಾ?

26BGMYSMANGO
Published on

ಬೆಂಗಳೂರು: ಮಾವಿನ ಹಣ್ಣನ್ನು ತಿನ್ನಲು ಮಾವು ಪ್ರಿಯರು ವರ್ಷವಿಡೀ ಕಾಯುತ್ತಾರೆ. ಮಾವನ್ನು 'ಹಣ್ಣುಗಳ ರಾಜ' ಎಂದೂ ಕರೆಯಲಾಗುತ್ತದೆ. ಮಾವಿನಹಣ್ಣಿನಿಂದ ವೈವಿಧ್ಯಮಯ ಭಕ್ಷ್ಯಗಳನ್ನು ಕೂಡ ತಯಾರಿಸಬಹುದು. ಮಾವಿನ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಈ ಹಣ್ಣು ಅತಿಯಾಗಿ ಸೇವಿಸುವುದರಿಂದ ಕೆಲವು ಅಡ್ಡ ಪರಿಣಾಮಗಳೂ ಇವೆ. ಹಾಗಾದರೆ ಈ ಹಣ್ಣನ್ನು ಅತಿಯಾಗಿ ತಿನ್ನುವುದರಿಂದ ಆಗುವ ಅನಾನುಕೂಲತೆಗಳೇನು?. ತಿಳಿಯೋಣ ಬನ್ನಿ...

ಅಧಿಕ ಪ್ರಮಾಣದ ಸಕ್ಕರೆ
ಮಾವಿನಹಣ್ಣುಗಳು ಹುಳಿ-ಸಿಹಿ ರುಚಿಗೆ ಜನಪ್ರಿಯವಾಗಿವೆ. ಆದರೆ ಅವು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಹೊಂದಿರುತ್ತವೆ. ಆದ್ದರಿಂದ ಇದು ಮಧುಮೇಹ ಹೊಂದಿರುವ ಜನರಿಗೆ ಹಾನಿಕಾರಕ. ಮಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಅದಕ್ಕಾಗಿಯೇ ಮಧುಮೇಹ ರೋಗಿಗಳು ಮಾವಿನಹಣ್ಣು ತಿನ್ನುವ ಮೊದಲು ತಮ್ಮ ವೈದ್ಯರ ಬಳಿ ಕೇಳಬೇಕು.

ಅತಿಸಾರದ ಸಾಧ್ಯತೆ
ಹೆಚ್ಚಿನ ಪ್ರಮಾಣದ ಮಾವಿನಹಣ್ಣುಗಳನ್ನು ತಿನ್ನುವುದರಿಂದ ಅವುಗಳಲ್ಲಿರುವ ಹೆಚ್ಚಿನ ಫೈಬರ್ ಅಂಶದಿಂದಾಗಿ ಕರುಳನ್ನು ಕೆರಳಿಸಬಹುದು. ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವ ಯಾವುದೇ ಹಣ್ಣುಗಳು ಅತಿಸಾರಕ್ಕೆ ಕಾರಣವಾಗಬಹುದು. ಆದ್ದರಿಂದ, ಹೆಚ್ಚು ಮಾವಿನ ಹಣ್ಣುಗಳನ್ನು ತಿನ್ನುವುದನ್ನು ನಿಲ್ಲಿಸಬೇಕು.

ತೂಕ ಹೆಚ್ಚಾಗುವುದು
ಈ ಮೊದಲೇ ಹೇಳಿದಂತೆ ಮಾವಿನ ಹಣ್ಣುಗಳಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶ ಸಮೃದ್ಧವಾಗಿದೆ. ಹೆಚ್ಚಿನ ಕ್ಯಾಲೋರಿ ಹೊಂದಿರುತ್ತವೆ. ಇದು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವ ಜನರಿಗೆ ಹಾನಿಕಾರಕವಾಗಿದೆ. ಆದ್ದರಿಂದ ಉತ್ತಮ ದೇಹವನ್ನು ಕಾಪಾಡಿಕೊಳ್ಳಲು ಹೆಚ್ಚು ಮಾವಿನ ಹಣ್ಣುಗಳನ್ನು ತಿನ್ನಬೇಡಿ.

ಹೊಟ್ಟೆಯ ಸಮಸ್ಯೆ
ಒಂದು ಅಧ್ಯಯನದ ಪ್ರಕಾರ, ಮಾವಿನಹಣ್ಣಿನಲ್ಲಿ ಗ್ಲೂಕೋಸ್‌ಗಿಂತ ಹೆಚ್ಚು ಫ್ರಕ್ಟೋಸ್ ಇರುತ್ತದೆ. ಇದು ದೇಹದಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ ಮತ್ತು ಇದು ಫ್ರಕ್ಟೋಸ್ ಅನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಇದು ಹೊಟ್ಟೆ ಉಬ್ಬುವುದು ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಲೇಖನದ ಕುರಿತು ಯಾವುದೇ ಪ್ರಶ್ನೆ ಹೊಂದಿದ್ದರೆ ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net