More

    ನ್ಯಾಚುರಲ್ ಸ್ಕ್ರಬ್ ‘ಸಾಸಿವೆ’ ಈ ಸಮಸ್ಯೆಗೂ ಸಹಕಾರಿ

    ಬೆಂಗಳೂರು: ಚರ್ಮದಲ್ಲಿ ತೈಲಯುಕ್ತ (ಎಣ್ಣೆ), ಒಣ ಅಥವಾ ಶುಷ್ಕ ಮತ್ತು ಸಾಮಾನ್ಯ ಚರ್ಮ ಎಂದು ಒಟ್ಟು ಮೂರು ವಿಧಗಳಿವೆ. ಮೊದಲು ನಮ್ಮ ಚರ್ಮ ಯಾವ ವಿಧದ್ದೆಂದು ವೈದ್ಯರನ್ನು ಕೇಳಿ ತಿಳಿದುಕೊಳ್ಳಬೇಕು. ಇದು ಚಿಕಿತ್ಸೆಗೆ ಬಹಳ ಅವಶ್ಯಕ. ನಂತರ ಅದರ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ, ವ್ಯಾಯಾಮ, ನಿದ್ರೆ, ಅಭ್ಯಂಗ ಬೇಕೆ ಬೇಕು. ನಾಲ್ಕರಲ್ಲಿ ಎರಡನ್ನಾದರೂ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರೆ ಚರ್ಮ ಹಾಳಾಗುವುದನ್ನು ಭಾಗಶಃ ತಡೆದಂತೆ! ಈಗ ಸಾಮಾನ್ಯ ಚರ್ಮದ ಸಂರಕ್ಷಣೆ ಮಾಡುವುದು ಹೇಗೆಂದು ತಿಳಿಯೋಣ ಬನ್ನಿ…

    *ಸಾಸಿವೆ ‘ನ್ಯಾಚುರಲ್ ಸ್ಕ್ರಬ್. ಇದರ ಎಣ್ಣೆಯಿಂದ ಮುಖಕ್ಕೆ ರಾತ್ರಿ ಹೊತ್ತು ಮಸಾಜ್ ಮಾಡಿದರೆ ಸ್ಕಿನ್ ಹೈಡ್ರೇಟ್ ಆಗುತ್ತದೆ. ಇನ್‌ಫೆಕ್ಷನ್ ಆಗದಂತೆ ತಡೆಯುತ್ತದೆ.
    *ಅಮೃತಬಳ್ಳಿಯ ಎಲೆ ಮತ್ತು ಹಣ್ಣುಗಳನ್ನು ಅಥವಾ ಕೇವಲ ಎಲೆಗಳನ್ನು ನುಣ್ಣಗೆ ಅರೆದು ರಾತ್ರಿ ಹೊತ್ತು ಹಚ್ಚಿಕೊಳ್ಳಬೇಕು. ಒಂದು ಗಂಟೆ ನಂತರ ಮುಖ ತೊಳೆಯಬೇಕು. ಕೆಲವು ವೇಳೆ ಮುಖ ತೊಳೆಯದೇ ರಾತ್ರಿಯೆಲ್ಲ ಹಾಗೇ ಬಿಟ್ಟರೂ ಯಾವುದೇ ತೊಂದರೆಯಾಗುವುದಿಲ್ಲ.
    *ಅರಿಶಿಣ, ಮರದರಿಶಿನ, ಮಂಜಿಷ್ಟವನ್ನು ಹಾಲು, ತುಪ್ಪ ಬೆರೆಸಿ ಅರೆದು ಹಚ್ಚಿಕೊಳ್ಳಬೇಕು.

    ಮಳೆಗಾಲದಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದರೆ ಈ ಸ್ಥಳ ಬೆಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts