

Lack of sleep : ಪ್ರತಿಯೊಬ್ಬ ಮನುಷ್ಯನು ಸಾಕಷ್ಟು ನಿದ್ರೆ ಪಡೆಯುವುದು ಆತನ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಯಾರು ಚನ್ನಾಗಿ ನಿದ್ರೆ ಮಾಡುತ್ತಾರೋ ಅವರು ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಾರೆ. ಇದು ಕೆಲಸದಲ್ಲಿ ಗಮನವಹಿಸಲು ಸಾಧ್ಯವಾಗುತ್ತದೆ. ನಮಗೆ ಆಳವಾದಂತಹ ಅಥವಾ ಸಾಕಷ್ಟು ನಿದ್ರೆ ಸಿಗಲಿಲ್ಲ ಎಂದರೆ ಮನುಷ್ಯನ ಏಕಾಗ್ರತೆಯಲ್ಲಿ ತೊಂದರೆ ಉಂಟಾಗುತ್ತದೆ. ಆದಾಗ್ಯೂ, ಆಳವಾದ ಮತ್ತು ಸಾಕಷ್ಟು ನಿದ್ರೆ ಸಿಗದಿದ್ದರೆ ಮಾನಸಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಪದೇ ಪದೇ ಕೋಪಗೊಳ್ಳುವುದು, ಸಣ್ಣ ವಿಚಾರಗಳಿಗೆ ಅರೆ ನಿದ್ರಾವಸ್ಥೆಗೆ ಜಾರುವುದನ್ನು ಮಾಡಬೇಕಾಗುತ್ತದೆ. ಇದಲ್ಲದೇ, ನಿದ್ರೆಯ ಕೊರತೆಯು ಸಂಬಂಧದ ಮೇಲೂ ಪರಿಣಾಮ ಬೀರುತ್ತವೆ.
ಆಹಾರ ಮತ್ತು ನೀರಿನಂತೆ ದೇಹಕ್ಕೆ ನಿದ್ರೆ ಅವಶ್ಯಕ. ಇದು ಮನುಷ್ಯರ ಮೆದುಳಿನ ಆರೋಗ್ಯ, ಸ್ಮರಣಶಕ್ತಿ ಮತ್ತು ಕಲಿಕೆಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರೊಂದಿಗೆ ತೂಕ ನಿಯಂತ್ರಣ, ರಕ್ತದ ಒತ್ತಡ ನಿರ್ವಹಣೆಗೆ ಸಹಾಯ ಮಾಡುತ್ತದೆ. ನಿದ್ರೆ ಕೊರೆತೆಯು ಡಯಾಬಿಟಿಸ್, ಹೃದಯರೋಗವನ್ನು ಹೆಚ್ಚಿಸಿ, ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ.
ನಿದ್ರೆಯ ಕೊರೆತೆಯು ಮಾನಸಿಕವಾಗಿ ಕಿರಿಕಿರಿಯನ್ನುಂಟು ಮಾಡುತ್ತದೆ. ಇದು ಮನಸ್ಥಿತಿಗಳ ಬದಲಾವಣೆ, ನಿಮ್ಮ ಸಂಗಾತಿಯೊಂದಿಗೆ ಮುನಿಸು, ಸಣ್ಣ ಸಣ್ಣ ವಿಷಯಗಳಿಗೂ ವಾದ ವಿವಾದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇಬ್ಬರೂ ದಣಿದಿದ್ದರೆ, ತಾಳ್ಮೆ ಮತ್ತು ಸಹಿಷ್ಣುತೆ ಮಟ್ಟವು ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ. ಇದು ಸಂಬಂಧದ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರಿ ಸಂಘರ್ಷಕ್ಕೆ ಕಾರಣವಾಗುತ್ತದೆ.
ನಿದ್ರೆಯ ಕೊರೆತೆಯು ಭಾವನಾತ್ಮಕವಾಗಿ ಸಂಬಂಧಗಳ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಇದು ಗಂಡ-ಹೆಂಡತಿ ಇತರರ ಭಾವನೆಗಳನ್ನು ಗುರುತಿಸಿ ಸಹಾನುಭೂತಿ ತೋರುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ಸಂಬಂಧದಲ್ಲಿ ನಕರಾತ್ಮಕ ಪರಿಣಾಮವನ್ನು ಬೀರುವಂತೆ ಮಾಡುತ್ತದೆ.
ನಿದ್ರೆಯ ಕೊತೆಯು ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ದೈಹಿಕ ಸಂಪರ್ಕದಲ್ಲೂ ಪರಿಣಾಮ ಬೀರುತ್ತದೆ. ಇಬ್ಬರಲ್ಲಿ ಒಬ್ಬರು ದಣಿದಿದ್ದರೂ, ಸಂಪರ್ಕ ಸಾಧಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗಾಗಿ ಇದು ಸಂಬಂಧದಲ್ಲಿ ತೀವ್ರ ಪರಿಣಾಮವನ್ನು ಬೀರುತ್ತದೆ.
ಸಮತೋಲಿತ ನಿದ್ರೆಯು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಳ್ಳೆಯ ನಿದ್ರೆ ಮಾಡುವುದರಿಂದ ಒತ್ತಡ ಕಡಿಮೆಯಾಗಿ, ಸ್ಮರಣಶಕ್ತಿ ಬಲಗೊಳ್ಳುತ್ತದೆ. ನಿದ್ರೆಯ ಕೊರತೆಯಿಂದ ಮಧುಮೇಹ, ಹಾಗೂ ಹೃದಯಕ್ಕೆ ಸಂಬಂಧಿಸಿದ ರೋಗಗಳು ಬರಲು ಕಾರಣವಾಗುತ್ತದೆ. (ಏಜೆನ್ಸೀಸ್)