20 ಕೆ.ಜಿ ತೂಕ ಇಳಿಸಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸಿದ ಖುಷ್ಬು! Khushbu Sundar

untitled-design-58-68947641d245d
Published on

Khushbu Sundar : ನೀವೇನಾದರೂ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದೀರಾ ಹಾಗಿದ್ದರೆ, ಭಾರತೀಯ ಚಿತ್ರರಂಗದ ನಟಿ, ರಾಜಕಾರಣಿ, ಸಿನಿಮಾ ನಿರ್ದೇಶಕಿ ಖುಷ್ಬು ಸುಂದರ್​ರವರಿಂದ ಸೂಚನೆಗಳನ್ನು ಪಡೆಯಿರಿ. 54 ವರ್ಷದ ಈ ನಟಿ 20 ಕೆ.ಜಿ ತೂಕವನ್ನು ಇಳಿಸುವ ರೂಪಾಂತರದಿಂದ ಅಭಿಮಾನಿಗಳಿಗೆ ಅಚ್ಚರಿಗೊಳಿಸಿದ್ದಾರೆ.

ನಟಿ ಇತ್ತೀಚಿನ ದಿನಗಳಲ್ಲಿ ಹಸಿರು ಬಣ್ಣದ ಸೇರೆಯೊಂದನ್ನು ಧರಿಸಿ, ಮೃದು ಮೇಕ್​ಅಪ್​ ಹಾಕಿ ಎಂದಿಗಿಂತಲೂ ಸುಂದರಾಗಿ ಮತ್ತು ಫಿಟ್ನೆಸ್​ ಆಗಿ ಕಾಣುವಂತೆ ಚಿತ್ರಗಳನ್ನು ಹಂಚಿಕೊಂಡು ಅದಕ್ಕೆ " ಭವಿಷ್ಯಕ್ಕೆ ಹಿಂತುರಿಗಿ!" ಎಂಬ ಶೀರ್ಷಿಕೆ ನೀಡಿದ್ದಾರೆ.

ನಟಿ ಖುಷ್ಬು ಅವರ ತೂಕ ಇಳಿಕೆ ಬಗ್ಗೆ ಹಲವಾರು ವದಂತಿಗಳು ಹರಡಿದ್ದು, ಅವುಗಳನ್ನು ನಟಿ ತಳ್ಳಿಹಾಕಿದ್ದಾರೆ. ಇನ್ನು ಒಬ್ಬ ಇನ್​ಸ್ಟಾಗ್ರಾಮ್​ ಬಳಕೆದಾರ ಇವರ ಫೋಟೋಗೆ ಮೌಂಜಾರೋ ಚುಚ್ಚುಮದ್ದಿನ ಮ್ಯಾಜಿಕ್​ ಎಂದು ಕಮೆಂಟ್​ ಮಾಡಿದ್ದಾನೆ. ಅದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಖುಷ್ಬು ಸುಂದರ್​ ಯಾವುದೇ ಅಡ್ಡ ಮಾರ್ಗಗಳಲ್ಲಿ ಫಿಟ್ನೆಸ್​ ಮಾಡಿಲ್ಲ, ಬದಲಿಗೆ ಶಿಸ್ತು, ಸ್ಥಿರತೆ ಹಾಗೂ ಉದ್ದೇಶದಿಂದ ಫಿಟ್ನೆಸ್​ ಮಾಡಿದ್ದಾರೆ ಎಂದು ಟಾಂಗ್​ ಕೊಟ್ಟಿದ್ದಾರೆ.

ನಟಿ ತೂಕ ಇಳಿಸಿಕೊಳ್ಳಲು ವೇಳಾಪಟ್ಟಿಯನ್ನು ಅನುಸರಿಸುತ್ತೇನೆ ಎಂದು ತಿಳಿಸಿದ್ದಾರೆ. ಎಚ್ಚರಿಕೆಯಿಂದ ತಿನ್ನುವುದು ಹಾಗೂ ವ್ಯಾಯಾಮ ಮಾಡುವುದರಿಂದ ತೂಕ ಇಳಿಸಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ದಿನ ಬೆಳಿಗ್ಗೆ 1 ಗಂಟೆ ವ್ಯಾಯಾಮ ಮಾಡುವುದು, ಸಂಜೆ 45-50 ರಿಂದ ನಿಮಿಷಗಳ ಕಾಲ ನಡೆಯುತ್ತೇನೆ ಎಂದು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಹಿಂದೆ ಶಸ್ತ್ರಚಿಕಿತ್ಸೆಗಳು ಅವರಿಗೆ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಿವೆ.  ನನ್ನ ಕಾಲುಗಳು ಗಟ್ಟಿಯಾಗಿವೆ ಆದರೆ ನನ್ನ ಮೊಣಕಾಲುಗಳಿಗೆ ತೊಂದರೆ ಉಂಟಾಗಿದೆ ಎಂದು ಹಂಚಿಕೊಂಡಿದ್ದಾರೆ. ಆದರಿಂದ ತೂಕ ಇಳಿಸುವ ರೂಪಾಂತರವು ಕೆಲವು ಗಾತ್ರಗಳನ್ನು ಕಡಿಮೆ ಮಾಡುವುದಕ್ಕಿಂತ ಚಲನವಲನಗಳನ್ನು ಸುಧಾರಿಸಲು ಸಹಾಯ ಮಾಡಿವೆ ಎಂದರು.

ಭಾರತೀಯ ಸಿನಿಮಾಗಳಲ್ಲಿ, ವಿಶೇಷವಾಗಿ ತಮಿಳು ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಛಾಪು ಮೂಡಿಸಿದ ನಟಿ ಖುಷ್ಬು ಅವರಿಗೆ ಅಭಿಮಾನಿಗಳು ಪ್ರೀತಿ ಬೆಂಬಲ ನೀಡಿದ್ದಾರೆ. ಹಾಗೂ 50 ರ ದಶಕದಲ್ಲಿ ಇಷ್ಟೊಂದು ತೂಕ ಇಳಿಸಿಕೊಂಡಿದ್ದಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net