

Hardik Pandya: ಹಾರ್ದಿಕ್ ಪಾಂಡ್ಯ ಜನಪ್ರಿಯ ಕ್ರಿಕೆಟ್ ಆಟಗಾರ ಹಾಗೂ ಫಿಟ್ನೆಸ್ ದೇಹ ಹೊಂದಿದಂತ ಕ್ರಿಕೆಟಿಗ. ಅವರ ದೇಹದ ಫಿಟ್ನೆಸ್ ಬಗ್ಗೆ ನೆಟ್ಟಿಗರಲ್ಲಿ ಕುತೂಹಲ ಹೆಚ್ಚಾಗಿದ್ದು, ಅನೇಕ ಬಾರಿ ಅದರ ಬಗ್ಗೆ ತಿಳಿಸಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಎಲ್ಲಾ ನೆಟ್ಟಿಗರ ಪ್ರಶ್ನೆಗಳಿಗೆ ಬ್ರೇಕ್ ಹಾಕಿದ ಕ್ರಿಕೆಟಿಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ದಿನನಿತ್ಯದ ದಿನಚರಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಹಾರ್ದಿಕ್ ಪಾಂಡ್ಯ ಬೆಳಿಗ್ಗೆ ಎದ್ದ ತಕ್ಷಣ ಮೊದಲು 500 ಮಿ.ಲೀಟರ್ ನೀರು ಕುಡಿಯುವುದಾಗಿ ತಿಳಿಸಿದ್ದಾರೆ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಇದರಿಂದ ಜಿಮ್ ಮಾಡಲು ಸಹಾಯವಾಗುತ್ತದೆ ಎಂದಿದ್ದಾರೆ.
ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಒಂದಕ್ಕಿಂತ ಹೆಚ್ಚು ಸಹಾಯಮಾಡುತ್ತದೆ. ಹೆಲ್ತ್ಲೈನ್ ಪ್ರಕಾರ ನೀರು ಕುಡಿಯುವುದರಿಂದ ದೇಹವನ್ನು ಹೈಡ್ರೀಕರಿಸುವ ಮೂಲಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ನೀಡುವುದಿಲ್ಲ.
ಹಾರ್ದಿಕ್ ಪಾಂಡ್ಯ ಜಿಮ್ಗೆ ಹೋಗಿ ಬಂದ ನಂತರ 650 ಗ್ರಾಂ ಕ್ಯಾಲೋರಿ ಹಾಗೂ 30 ಗ್ರಾಂ ಪ್ರೋಟೀನ್ ಹೊಂದಿರುವಂತ ಆಹಾರ ಸೇವಿಸುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಸೂರ್ಯಕಾಂತಿ ಬೀಜ, ಓಟ್ಸ್, ಆವಕಾಡೊ, ಬಾದಾಮಿ, ಬಾಳೆಹಣ್ಣು ಹಾಗೂ ಹಾಲು ಇರುತ್ತದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)