ಇದು ಕೇವಲ ಹೂವಲ್ಲ... ನಿಮ್ಮ ಸೌಂದರ್ಯ ಹೆಚ್ಚಿಸುವ ಅಮೃತ! |Beauty tips

untitled-design-2025-09-15t140838456-68c7d0a35c309
Published on

Beauty tips: ಆಯುರ್ವೇದದಲ್ಲಿ ನಾಗ ಸಂಪಿಗೆಯು ಚರ್ಮಕ್ಕೆ ಅಮೃತವೆಂದು ಪರಿಗಣಿಸಲಾಗುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುತ್ತದೆ. ಹಾಗಾಗಿ ಇದರ ಬಳಕೆಯು ದೇಹದಲ್ಲಾಗುವ ಮೊಡವೆಗಳು, ಕಲೆಗಳು, ಕೆಂಪು ಮತ್ತು ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡಿ, ಚರ್ಮವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ.

ಆಯುರ್ವೇದದಲ್ಲಿ, ನಾಗ ಕೇಸರವು ಕೇವಲ ಗಿಡಮೂಲಿಕೆಯಲ್ಲ, ಬದಲಾಗಿ ಪ್ರಕೃತಿ ಮತ್ತು ವಿಜ್ಞಾನದ ಅದ್ಭುತ ಸಂಯೋಜನೆ. ಹಾಗೂ ಇದು ಚರ್ಮದ ಆರೋಗ್ಯ ಮತ್ತು ಹೊಳಪಿಗೆ ಅಮೃತ ಎಂದು ಕರೆಯಲಾಗಿದೆ. ಇದು ಚರ್ಮದ ಪ್ರತಿಯೊಂದು ಅಗತ್ಯವನ್ನು ಪೂರೈಸುತ್ತದೆ. ಇದು ಗಾಯದ ಒಳಗಿನಿಂದ ಪೋಷಣೆ ಮಾಡಿ ಚರ್ಮದ ಸಮತೋಲನವನ್ನು ಬಯಸುತ್ತದೆ.

ನಾಗ ಸಂಪಿಗೆಯ ಆರೋಗ್ಯ ಪ್ರಯೋಜನಗಳು

* ಇಂದಿನ ಜೀವನಶೈಲಿಯಲ್ಲಿ ಉಂಟಾಗುವ ಮಾಲಿನ್ಯ, ಸೂರ್ಯನ ಬೆಳಕು ಮತ್ತು ಒತ್ತಡದಿಂದಾಗಿ, ಚರ್ಮದ ಮೇಲೆ ಮೊಡವೆಗಳು, ಮುಖ ಕೆಂಪಾಗುವುದು ಹೆಚ್ಚಾಗುತ್ತದೆ. ಈ ರೀತಿ ತೊಂದರೆ ಅನುಭವಿಸುತ್ತಿರುವವರು ನಾಗ ಸಂಪಿಗೆಯ ಪೇಸ್ಟ್​ನ್ನು ಬಳಸಿ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಈ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಿ, ತ್ವರಿತ ಪರಿಣಾಮ ಬೀರುವಲ್ಲಿ ಸಹಾಯ ಮಾಡುತ್ತವೆ. ಇದು ಅಕಾಲಿಕ ವಯಸ್ಸಾದ ಚಿಹ್ನೆಗಳನ್ನು ತಡೆಯುವುದಲ್ಲದೇ, ಚರ್ಮವನ್ನು ಆರೋಗ್ಯಕರವಾಗಿ ಇಡಲು ಸಹಾಯ ಮಾಡುತ್ತದೆ.

* ನಾಗ ಸಂಪಿಗೆಯು ಅಧಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದರಿಂದ ಇದು ಆಕ್ನೆಸ್‌ನಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ನಿಯಮಿತ ಬಳಕೆಯಿಂದ ಚರ್ಮದ ಮೇಲಿರುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕೊಲ್ಲುತ್ತದೆ. ಹಾಗೆಯೇ ಮೊಡವೆಗಳು ಹರಡದಂತೆ ತಡೆಯುತ್ತದೆ.

* ಮಾಲಿನ್ಯ ಅಥವಾ ಹಾರ್ಮೋನುಗಳ ವ್ಯತ್ಯಾಸದಿಂದಾಗಿ ಚರ್ಮದಲ್ಲಿ ಅನೇಕ ತೊಂದರೆಗಳು ಉಂಟಾಗುತ್ತವೆ. ಆದರಿಂದ ಈ ನಾಗಸಂಪಿಗೆಯನ್ನು ಬಳಸುವುದರಿಂದ ಇದು ಚರ್ಮದ ತೇವಾಂಶವನ್ನು ಸಮತೋಲನಗೊಳಿಸುತ್ತದೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಮುಖವು ಮೃದುವಾಗಿರಲು ಸಹಾಯ ಮಾಡುತ್ತದೆ.

*  ಮೊಡವೆಗಳ ನಂತರ, ಮುಖದ ಮೇಲೆ ಕಪ್ಪು ಕಲೆಗಳು ಮತ್ತು ಗುರುತುಗಳು ಉಳಿಯುತ್ತವೆ. ನಾಗ ಸಂಪಿಗೆಯಲ್ಲಿರುವ ನೈಸರ್ಗಿಕ ಸಕ್ರಿಯ ಪದಾರ್ಥಗಳು ಚರ್ಮದ ಪದರವನ್ನು ಸಮತೋಲನಗೊಳಿಸುತ್ತದೆ. ಮತ್ತು ವರ್ಣ ದ್ರವ್ಯವನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಇದು ಕ್ರಮೇಣ ಚರ್ಮವನ್ನು ಸಮವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. (ಏಜೆನ್ಸೀಸ್)

ಇದನ್ನೂ ಓದಿ: ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾಗಲು ಕಾರಣವೇನು? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ| hemoglobinಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net