

hair fall; ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೀವನಶೈಲಿ, ಒತ್ತಡ, ಆಹಾರ ಪದ್ಧತಿ, ಆರೈಕೆ ಕೊರತೆ ಅಥವಾ ಇತರ ಹಲವಾರು ಅಂಶಗಳಿಂದ ಈ ಸಮಸ್ಯೆ ಉಂಟಾಗಬಹುದು. ನೀವು ದೀರ್ಘಕಾಲದವರೆಗೆ ಕೂದಲು ಉದುರುವಿಕೆಯನ್ನು ಎದುರಿಸುತ್ತಿದ್ದರೆ ಅದು ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು. ಕೂದಲು ಉದುರುವಿಕೆಗೆ ನಿಮ್ಮ ದೇಹದೊಳಗಿನ ಸಮಸ್ಯೆಯೇ ಪ್ರಮುಖ ಕಾರಣವಾಗಿದೆ.
ನಿಮ್ಮ ಮುಖ ಮತ್ತು ದೇಹದ ಆರೈಕೆಗೆ ನೀಡುವಷ್ಟೇ ಮಹತ್ವವನ್ನು ಕೂದಲಿನ ಆರೈಕೆಗೂ ನೀಡುವುದು ತುಂಬಾ ಮುಖ್ಯ. ಏಕೆಂದರೆ ಕೂದಲು ಮುಖದ ಸೌಂದರ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ಆತ್ಮವಿಶ್ವಾಸಕ್ಕೂ ಕೂದಲು ಬಹುಮುಖ್ಯ.
ಪೌಷ್ಟಿಕಾಂಶದ ಕೊರತೆ: ಕಬ್ಬಿಣ, ವಿಟಮಿನ್ D, ವಿಟಮಿನ್ B12, ಪ್ರೋಟೀನ್, ಅಥವಾ ಒಮೆಗಾ-3 ಕೊಬ್ಬಿನಾಮ್ಲಗಳ ಕೊರತೆ ಕೂದಲಿನ ಆರೋಗ್ಯವನ್ನು ಕೆಡಿಸಬಹುದು.
ಹೃದಯ ಸಮಸ್ಯೆಗಳು : ಆರಂಭಿಕ ಹಂತದಲ್ಲಿ ಕಾಣಿಸಿಕೊಳ್ಳುವ ಆಂಡ್ರೊಜೆನೆಟಿಕ್ ಅಲೋಪೆಸಿಯಾ, ಮೆಟಾಬಾಲಿಕ್ ಸಿಂಡ್ರೋಮ್, ಅಧಿಕ ರಕ್ತದೊತ್ತಡ, ಬೊಜ್ಜು ಮುಂತಾದವು ಪುರುಷರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು 2025 ರ ಅಧ್ಯಯನವೊಂದು ತಿಳಿಸಿದೆ.
ಕಬ್ಬಿಣದ ಕೊರತೆ: ಕಬ್ಬಿಣದ ಕೊರತೆ ಅಥವಾ ರಕ್ತಹೀನತೆಯು ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿರುತ್ತದೆ. ವಿಶೇಷವಾಗಿ ಮುಟ್ಟಿನ ಮಹಿಳೆಯರು ಮತ್ತು ಮಾದಕ ದ್ರವ್ಯಗಳನ್ನು ತೆಗೆದುಕೊಳ್ಳುವವರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ ಎನ್ನಲಾಗಿದೆ.
ಥೈರಾಯ್ಡ್: ಥೈರಾಯ್ಡ್ ಹಾರ್ಮೋನುಗಳು ದೇಹದಲ್ಲಿನ ಜೀವಕೋಶಗಳ ಬೆಳವಣಿಗೆ, ವ್ಯತ್ಯಾಸ ಮತ್ತು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತವೆ. ಹೈಪರ್ ಥೈರಾಯ್ಡಿಸಮ್ ಇರುವ ಸುಮಾರು 50% ಜನರಲ್ಲಿ ಮತ್ತು ಹೈಪೋಥೈರಾಯ್ಡಿಸಮ್ ಇರುವ ಸುಮಾರು 33% ಜನರಲ್ಲಿ ಅಲೋಪೆಸಿಯಾ ಒಂದು ಲಕ್ಷಣವಾಗಿದೆ. ಇದು ಕೂದಲು ಉದುರುವಿಕೆಗೆ ಪ್ರಮುಖ ಕಾರಣ.
ನೀವು ಈ ಸಮಸ್ಯೆಯನ್ನು ಬಹಳ ದಿನಗಳಿಂದ ಅನುಭವಿಸುತ್ತಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿದರೆ ಉತ್ತಮ.
ಒತ್ತಡ: ದೈಹಿಕ ಅಥವಾ ಮಾನಸಿಕ ಒತ್ತಡವು ಟೆಲೊಜೆನ್ ಎಫ್ಲೂವಿಯಂ ಎಂಬ ಸ್ಥಿತಿಗೆ ಕಾರಣವಾಗಿ ಕೂದಲು ಉದುರಲು ಕಾರಣವಾಗಬಹುದು.
(ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ಪಠ್ಯಗಳಿಂದ ಸಂಗ್ರಹಿಸಲಾಗಿದೆ.