ಗಾಜಾ ನಗರವನ್ನು ವಶಪಡಿಸಿಕೊಳ್ಳುವ ಯೋಜನೆಗೆ ಇಸ್ರೇಲ್ ರಕ್ಷಣಾ ಸಚಿವರಿಂದ ಅನುಮೋದನೆ| Israel

Gaza Attack
Published on

ಟೆಲ್‌ ಅವೀವ್‌; ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಅವರು ಗಾಜಾ ನಗರವನ್ನು ವಶಪಡಿಸಿಕೊಳ್ಳುವ ಯೋಜನೆಯನ್ನು ಅನುಮೋದಿಸಿದ್ದಾರೆ ಮತ್ತು ಅದನ್ನು ಕೈಗೊಳ್ಳಲು ಸುಮಾರು 60,000 ಮೀಸಲು ಪಡೆಗಳನ್ನು ಕರೆಯಲು ಅಧಿಕಾರ ನೀಡಿದ್ದಾರೆ ಎಂದು ಅವರ ಸಚಿವಾಲಯ ಇಂದು(ಆ.20) ದೃಢಪಡಿಸಿದೆ.

ಗಾಜಾದಲ್ಲಿ ಸುಮಾರು ಎರಡು ವರ್ಷಗಳ ಸಂಘರ್ಷದಲ್ಲಿ ಕದನ ವಿರಾಮವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಮಧ್ಯವರ್ತಿಗಳು ತಮ್ಮ ಇತ್ತೀಚಿನ ಪ್ರಸ್ತಾಪಕ್ಕೆ ಇಸ್ರೇಲ್‌ನ ಔಪಚಾರಿಕ ಉತ್ತರಕ್ಕಾಗಿ ಕಾಯುತ್ತಿರುವಂತೆಯೇ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹಮಾಸ್ ಮೇಲೆ ಒತ್ತಡವನ್ನು ಹೆಚ್ಚಿಸಿದ್ದಾರೆ.

ಸುಮಾರು ಎರಡು ವರ್ಷಗಳ ಯುದ್ಧದ ನಂತರ ಪ್ಯಾಲೆಸ್ತೇನ್​ನ ನಗರವನ್ನು ವಶಕ್ಕೆ ಪಡೆಯುವ ಪ್ರಸ್ತಾವನೆಯನ್ನು ಇಸ್ರೇಲ್‌ನ ಭದ್ರತಾ ಸಚಿವಾಲಯ ಮುಂದಿಟ್ಟಿತ್ತು. ಇದಾಗಿ ಒಂದು ದಿನದ ಬಳಿಕ ಸಂಸತ್ತು ಸೇನೆಗೆ ಅನುಮೋದನೆ ನೀಡಿದೆ.

(ಏಜೆನ್ಸೀಸ್)

ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಕತಾರ್, ಹೊಸ ಯೋಜನೆಯ ಬಗ್ಗೆ ಎಚ್ಚರಿಕೆಯಿಂದ ಭರವಸೆ ನೀಡಿದೆ. ಅಂದಹಾಗೆ, ಯಾವುದೇ ಒಪ್ಪಂದದ ಭಾಗವಾಗಿ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂಬ ತನ್ನ ಬೇಡಿಕೆಯಲ್ಲಿ ಸರ್ಕಾರ ದೃಢವಾಗಿದೆ ಎಂದು ಇಸ್ರೇಲಿ ಹಿರಿಯ ಅಧಿಕಾರಿಯೊಬ್ಬರು ಒತ್ತಿ ಹೇಳಿದ್ದಾರೆ. ಹಮಾಸ್ ಅನುಮೋದಿಸಿದ ಪ್ರಸ್ತಾವನೆಯಲ್ಲಿ ಆರಂಭದಲ್ಲಿ 60 ದಿನಗಳ ಕದನ ವಿರಾಮ, ಒತ್ತೆಯಾಳುಗಳನ್ನು ಹಂತಹಂತವಾಗಿ ಬಿಡುಗಡೆ ಮಾಡುವುದು, ಕೆಲವು ಪ್ಯಾಲೆಸ್ತೇನಿಯನ್ ಕೈದಿಗಳನ್ನು ಬಿಡುಗಡೆ ಮಾಡುವುದು ಮತ್ತು ಗಾಜಾಗೆ ಮಾನವೀಯ ನೆರವು ನೀಡುವ ಕ್ರಮಗಳನ್ನು ಒಳಗೊಂಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಬಗ್ಗೆ ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net