

life style: ಮಾನವನ ಬಹುಮುಖ್ಯ ಅಂಗವಾದ ಹೃದಯದ ಬಡಿತ ನಿಂತರೆ ಉಸಿರೇ ನಿಂತಂತೆ. ಜೀವನವೇ ಅಂತ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ 6 ತಿಂಗಳಿಗೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯ ಎಂದು ತಜ್ಞರು ಹೇಳುತ್ತಾರೆ.
ಇದೆಲ್ಲದರ ಮಧ್ಯೆ ಎಡಭಾಗಕ್ಕೆ ತಿರುಗಿ ಮಲಗುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ರಾತ್ರಿಯಲ್ಲಿ ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಗ್ಯಾಸ್ ಅಥವಾ ಹೊಟ್ಟೆ ಉಬ್ಬುವುದು ಮುಂತಾದ ಹೊಟ್ಟೆಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಹೊಟ್ಟೆಯಲ್ಲಿ ಆಮ್ಲ ಕಡಿಮೆಯಾಗುತ್ತದೆ ಮತ್ತು ಆಹಾರ ಕೊಳವೆಯ ಮಾರ್ಗವು ಸ್ಪಷ್ಟವಾಗುತ್ತದೆ ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ.
ಅಂದಹಾಗೆ ನಾವು ಮಲಗುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದೇಗೆ ಎಂಬುವುದನ್ನು ನೋಡುವುದಾದರೆ, ಒಬ್ಬ ವ್ಯಕ್ತಿಯು ಹಾಸಿಗೆಯ ಮೇಲೆ ಮಲಗುವಾಗ ಹಲವು ಬಾರಿ ತಮ್ಮ ಭಂಗಿಗಳನ್ನು ಬದಲಾಯಿಸುತ್ತಾನೆ. ಕೆಲವರು ಬಲಭಾಗದಲ್ಲಿ ಮಲಗಲು ಇಷ್ಟ ಪಟ್ಟರೆ, ಇನ್ನೂ ಕೆಲವರು ಎಡಭಾಗದಲ್ಲಿ, ಕೆಲವರು ನೇರವಾಗಿ ಮತ್ತು ಉಳಿದ ಎಷ್ಟೋ ಜನ ತಲೆಕೆಳಗಾಗಿ ಮಲಗಲು ಇಷ್ಟಪಡುತ್ತಾರೆ.
ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ: ಎಡಗಡೆ ಮಲಗಿದಾಗ, ಹೃದಯವು ಗುರುತ್ವಾಕರ್ಷಣೆಯ ಪರಿಣಾಮದಿಂದ ರಕ್ತವನ್ನು ಪಂಪ್ ಮಾಡಲು ಸುಲಭವಾಗುತ್ತದೆ.
ರಕ್ತಸಂಚಾರ ಸುಧಾರಣೆ: ಎಡಗಡೆ ಮಲಗುವುದರಿಂದ ರಕ್ತವು ಹೃದಯದಿಂದ ದೇಹದ ಇತರ ಭಾಗಗಳಿಗೆ ಸರಾಗವಾಗಿ ಹರಿಯುತ್ತದೆ.
(ಏಜೆನ್ಸೀಸ್)
ಆದರೆ, ಕೆಲವರಿಗೆ ಎಡಗಡೆ ಮಲಗುವುದು ಆರಾಮದಾಯಕವಾಗಿರದಿರಬಹುದು. ಆ ಸಂದರ್ಭದಲ್ಲಿ ಬೆನ್ನಿನ ಮೇಲೆ ಮಲಗುವುದು ಸಹ ಒಳ್ಳೆಯ ಆಯ್ಕೆಯಾಗಿದೆ. ಆದರೆ ಗೊರಕೆ ಹೊಡೆಯುವ ಸಮಸ್ಯೆ ಇದ್ದರೆ ಇದನ್ನು ತಪ್ಪಿಸಬೇಕು. ಬಲಗಡೆ ಮಲಗುವುದು ಕೂಡ ಸಾಮಾನ್ಯವಾಗಿ ಸುರಕ್ಷಿತವಾಗಿದೆ. ಆದರೆ ಎಡಗಡೆ ಮಲಗಿದರೆ ದೇಹಕ್ಕೆ ಅತೀ ಹೆಚ್ಚಿನ ಉಪಯೋಗ ಸಿಗುತ್ತದೆ ಎಂದು ಹೇಳಲಾಗಿದೆ.
ಗರ್ಭಿಣಿಯರಿಗೆ ಉಪಯುಕ್ತ: ಗರ್ಭಿಣಿಯರು ಎಡಗಡೆ ಮಲಗಿದಾಗ, ಗರ್ಭಕೋಶಕ್ಕೆ ರಕ್ತ ಪೂರೈಕೆ ಸುಧಾರಿಸುತ್ತದೆ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದು.