

Spirtual: ಸಾಮಾನ್ಯವಾಗಿ ನಾವು ಮನೆಯಲ್ಲಿ ಹಿರಿಯರು ಮತ್ತು ತಂದೆ ತಾಯಿಗಳು ಸತ್ತಾಗ ಅವರ ಫೋಟೋಗಳನ್ನು ದೊಡ್ಡ ಫ್ರೇಮ್ ಮಾಡಿ ಮನೆಯಲ್ಲಿ ಪೂಜಾ ಸ್ಥಳದಲ್ಲಿ ಇಟ್ಟು ಪೂಜೆ ಮಾಡುತ್ತಾರೆ. ಇನ್ನು ಕೆಲವರು ವಾಸ್ತು ನಿಯಮಗಳನ್ನು ತಿಳಿಯದೆ ಯಾವುದೇ ಗೋಡೆಯ ಮೇಲೆ ಸತ್ತವರ ಫೋಟೋಗಳನ್ನು ಅಂಟಿಸುತ್ತಾರೆ. ಆದರೆ ಮನೆಯಲ್ಲಿ ಸತ್ತವರ ಫೋಟೋಗಳನ್ನು ಜೋಡಿಸುವ ಮೊದಲು, ನೆನಪಿಡುವ ಕೆಲವು ವಿಷಯಗಳಿವೆ. ಈಗ ತಿಳಿದುಕೊಳ್ಳೋಣ..
ಮನೆಯ ಗೋಡೆಗಳ ಮೇಲೆ ಸತ್ತವರ ಫೋಟೋಗಳನ್ನು ಎಂದಿಗೂ ನೇತುಹಾಕಬೇಡಿ. ಮನೆಯ ಯಾವುದೇ ದಿಕ್ಕಿನಲ್ಲಿ ಮರದ ಮೇಜಿನ ಮೇಲೆ ತಮ್ಮ ಫೋಟೋಗಳನ್ನು ಇಡಲು ಹೇಳಲಾಗುತ್ತದೆ.
ಸತ್ತವರ ಫೋಟೋಗಳನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಬಾರದು. ಹೀಗಾಗಿ ದೇವರ ಕೋಣೆಯಲ್ಲಿ ಇಟ್ಟ ವಸ್ತುಗಳನ್ನು ಪೂಜಿಸಿದ ಮನೆಯಲ್ಲಿ ಜಗಳ ಶುರುವಾಗುತ್ತದೆ ಎನ್ನಲಾಗಿದೆ.
ಸತ್ತವರ ಫೋಟೋಗಳ ಪಕ್ಕದಲ್ಲಿ ಬದುಕಿರುವವರ ಫೋಟೋಗಳನ್ನು ಹಾಕುವುದು ಒಳ್ಳೆಯದಲ್ಲ. ಹಾಗೆ ಇಟ್ಟುಕೊಂಡರೆ ಬದುಕುಳಿದವರ ಆಯುಷ್ಯ ಕಡಿಮೆಯಾಗುತ್ತದೆ.
ಸತ್ತವರ ಫೋಟೋಗಳನ್ನು ಮನೆಯೊಳಗೆ ಇಟ್ಟರೆ ಆ ಮನೆಯಲ್ಲಿ ನೆಗೆಟಿವ್ ಎನರ್ಜಿ ಹುಟ್ಟುತ್ತದೆ. ಹಾಗೆಯೇ ಇಡುವುದಾದರೆ ಉತ್ತರ, ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಫೋಟೋಗಳನ್ನಿರಿಸಬಾರದು ಎಂದು ವಾಸ್ತು ಸೂಚಿಸುತ್ತದೆ. ದಕ್ಷಿಣ ದಿಕ್ಕಲ್ಲದೆ ನೈಋತ್ಯ ದಿಕ್ಕಿನಲ್ಲಿ ಮೃತರಾದವರ ಫೋಟೋಗಳನ್ನು ಹಾಲ್ ನಲ್ಲಿ ಸತ್ತವರ ಫೋಟೋಗಳನ್ನು ಇಡುವುದು ತುಂಬಾ ಒಳ್ಳೆಯದು ಎಂದು ವಾಸ್ತು ಶಾಸ್ತ್ರ ತಜ್ಞರು ಸಲಹೆ ನೀಡುತ್ತಾರೆ.
ಮನೆಯನ್ನು ಪ್ರವೇಶಿಸುವ ಹಾಗೂ ಮನೆಯಿಂದ ಹೊರಹೋಗುವ ಭಾಗದಲ್ಲಿ ಕೂಡ ಫೋಟೋಗಳನ್ನು ಇರಿಸಬಾರದು.
ಮೃತರಾದವರ ಫೋಟೋಗಳನ್ನು ಕುಟುಂಬಸ್ಥರ ಮಲಗುವ ಕೋಣೆಯಲ್ಲಿ ಕೂಡ ಇರಿಸಬಾರದು. ಅದರಲ್ಲೂ ಮೃತ ವ್ಯಕ್ತಿ ಮನೆಯ ಸದಸ್ಯರಿಗಿಂತ ಹಿರಿಯರಾದಲ್ಲಿ ಮಲಗುವ ಕೋಣೆಯಲ್ಲಿ ಫೋಟೋವನ್ನು ಇರಿಸಬಾರದು
ಮೃತರಾದವರು ದೈಹಿಕವಾಗಿ ನಮ್ಮಿಂದ ಬೇರ್ಪಟ್ಟು ಸ್ವರ್ಗಸ್ಥರಾಗುತ್ತಾರೆ ಎಂಬ ನಂಬಿಕೆ ಇದೆ. ಆದರೆ ನಮ್ಮ ಸ್ಮರಣೆಗಳಲ್ಲಿ ಅವರು ಜೀವಂತರಾಗಿರುತ್ತಾರೆ ಎಂಬ ವಿಶ್ವಾಸದಿಂದಲೇ ಅವರ ಫೋಟೋಗಳನ್ನು ಮನೆಯಲ್ಲಿ ಇರಿಸಲಾಗುತ್ತದೆ.