Pregnant: ಹೆಂಡತಿ ಗರ್ಭಿಣಿಯಾಗಿರುವಾಗ ಪತಿ ಈ ಕೆಲಸಗಳನ್ನು ಮಾಡಲೇ ಬಾರದು! ಯಾಕೆ ಗೊತ್ತಾ?

Pregnant
Published on: 

Pregnant : ಮಾತೃತ್ವವು ಮಹಿಳೆಯರಿಗೆ ದೇವರು ನೀಡಿದ ದೊಡ್ಡ ಕೊಡುಗೆಯಾಗಿದೆ. ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೆ ಒಂದು ದೊಡ್ಡ ಭಾವನೆ ಎಂದು ಹೇಳಬಹುದು. ಪ್ರತಿಯೊಬ್ಬ ಮಹಿಳೆಯೂ ತಾಯಿಯ ಕರೆಗಾಗಿ ಹಂಬಲಿಸುತ್ತಾಳೆ.  ತಾಯಿ ಆಗುತ್ತಿರುವ ಮಹಿಳೆ ಆರೋಗ್ಯದ ವಿಷಯದಲ್ಲಿ ಮಾತ್ರವಲ್ಲದೆ ಆಧ್ಯಾತ್ಮಿಕವಾಗಿಯೂ ಅನೇಕ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುಬೇಕಾಗುತ್ತದೆ....

ಸಾಮಾನ್ಯವಾಗಿ ಮಹಿಳೆ ಗರ್ಭಿಣಿಯಾದ ನಂತರ, ಆಧ್ಯಾತ್ಮಿಕವಾಗಿ ಅವಳು ಮತ್ತು ಅವಳ ಪತಿ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಹಾಗೆ ಮಾಡುವುದರಿಂದ ಹುಟ್ಟಲಿರುವ ಮಗುವಿಗೆ ಅಶುಭವೆಂದು ಪರಿಗಣಿಸಲಾಗುತ್ತದೆ. ಯಾವ ಕೆಲಸವನ್ನು ಹೆಂಡತಿ ಗರ್ಭಿಣಿಯಾಗಿರುವಾಗ ಮಾಡಬಾರದು ಎನ್ನುವ ಕುರಿತಾಗಿ ನಾವು  ಇಂದು ನಿಮಗೆ ತಿಳಿಸಿ ಕೊಡಲಿದ್ದೇವೆ....

Bihar Gang, Pregnant

ಹೆಂಡತಿ ಗರ್ಭಿಣಿಯಾಗಿರುವಾಗ ಪತಿ ಸಮುದ್ರ ಸ್ನಾನ ಮಾಡಬಾರದು. ಅಲ್ಲದೆ, ಮರಗಳನ್ನು ಕಡಿಯುವುದು ಮತ್ತು ಸಸ್ಯಗಳಿಗೆ ಕೀಟನಾಶಕಗಳನ್ನು ಸಿಂಪಡಿಸುವುದನ್ನು ಮಾಡಬಾರದು.

ಪತ್ನಿ ಹೆರಿಗೆಯಾದ 7 ತಿಂಗಳವರೆಗೆ ಶೇವ್ ಮಾಡಬೇಡಿ.

ಶವಗಳನ್ನು ಒಯ್ಯಬೇಡಿ. ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಬೇಡಿ. ಪ್ರೇತ ಕರ್ಮಗಳು ಮತ್ತು ಪಿಂಡಪ್ರದಾನ ಮಾಡಬಾರದು.

pregnant women
ಸಾಂದರ್ಭಿಕ ಚಿತ್ರ

ಹೆಂಡತಿ ಗರ್ಭಿಣಿ ಎಂದು ತಿಳಿದ ನಂತರ ತೀರ್ಥಯಾತ್ರೆ, ವಿದೇಶ ಪ್ರವಾಸ ಮಾಡಬಾರದು. ದೋಣಿ ಹತ್ತುವುದು ಮತ್ತು ಪರ್ವತಾರೋಹಣ ಮಾಡಬಾರದು ಎಂದು ಪುರಾಣಗಳು ಹೇಳುತ್ತವೆ. 

ಅಧ್ಯಾತ್ಮಿಕವಾಗಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಗಂಡನ ಪಕ್ಕದಲ್ಲಿರಬೇಕು ಎಂದರೆ ಗರ್ಭಿಣಿಗೆ ನೋವುಗಳು ಬಂದರೆ ಗಂಡನ ಪಕ್ಕದಲ್ಲಿ ಇರುವುದು ಬೆಟ್ಟದಷ್ಟು ಧೈರ್ಯವನ್ನು ನೀಡುತ್ತದೆ. ಆದ್ದರಿಂದಲೇ ವೈದ್ಯರು ಕೂಡ ಕೆಲವು ತಿಂಗಳ  ಹೆಂಡತಿಯ ಮೇಲೆ ನಿಗಾ ಇಡಲು ಹೇಳುತ್ತಾರೆ. 

Pregnant lady

ಹೆಂಡತಿ ಗರ್ಭಿಣಿಯಾಗಿರುವಾಗ ಪತಿ ಇಂತಹ ಕೆಲಸಗಳನ್ನು ಮಾಡದಿರುವುದು ಉತ್ತಮ. ಹೀಗೆ ಮಾಡುವುದರಿಂದ ಅವುಗಳ ಪರಿಣಾಮಗಳು ಹುಟ್ಟುವ ಮಗುವಿನ ಮೇಲೆ ಕಾಣಿಸುತ್ತವೆ ಎಂದು ಹಲವರು ಹೇಳುತ್ತಾರೆ.