ಅಪರೂಪಕ್ಕೊಮ್ಮೆ ಮದ್ಯ ಸೇವನೆ ಮಾಡೋದು ಒಳ್ಳೆಯದ್ದೋ, ಕೆಟ್ಟದ್ದೋ?; ಇಲ್ಲಿದೆ ಸತ್ಯ! | Alcohol

dk - 2025-03-12T195118.190
Published on

Alcohol: ದಿನನಿತ್ಯ ಕುಡಿಯುವವರು ಕುಡಿಯುವವರ ನಡುವೆ ಅಗಾಗ ಕುಡಿಯುವವರು ಇದ್ದಾರೆ. ಅವರು ಸಲ್ಪ ಕುಡಿಯುವುರಿಂದ ಆರೋಗ್ಯಕ್ಕೆ ಏನು ಸಮಸ್ಯೆ ಇಲ್ಲ ಎಂದುಕೊಂಡಿದ್ದಾರೆ. ಇದು ತಪ್ಪು ಕಲ್ಪನೆ. ಆದರೆ, ಕೆಲ ಹೊಸ ವರದಿಗಳ ಪ್ರಕಾರ ಅಗಾಗ ಕುಡಿಯುವವರು ಸಹ ಅನಾರೋಗ್ಯದಿಂದ ತಪ್ಪಿಸೊಕೊಳ್ಳಲು ಅಸಾಧ್ಯ ಎನ್ನುತ್ತಿವೆ ಅಧ್ಯಯನಗಳು.

ಹೌದು, ಇತ್ತೀಚಿಗೆ ವೈರಲ್​ ಆದ ವಿಡಿಯೋದಲ್ಲಿ ಅಮೆರಿಕ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಯಾವುದೇ ಪ್ರಮಾಣದ ಆಲ್ಕೋಹಾಲ್ ನಿಜವಾಗಿಯೂ ಸುರಕ್ಷಿತವಲ್ಲ ಎಂದು ಒತ್ತಿ ಹೇಳಿದ್ದಾರೆ.

ಮದ್ಯಪಾನ ಮಾಡುವುದರಿಂದ ಬಾಯಿ, ಗಂಟಲು, ಧ್ವನಿಪೆಟ್ಟಿಗೆ, ಅನ್ನನಾಳ, ಸ್ತನ, ಯಕೃತ್ತು ಸೇರಿದಂತೆ ಕನಿಷ್ಠ 7 ರೀತಿಯ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗುತ್ತದೆ ಎಂದು ಹೊಸ ವರದಿಯನ್ನು ಉಲ್ಲೇಖಿಸಿದ್ದಾರೆ. ಧೂಮಪಾನ ಮತ್ತು ಬೊಜ್ಜು ಬಳಿಕ ಅಮೆರಿಕದಲ್ಲಿ ಕ್ಯಾನ್ಸರ್‌ಗೆ ತಡೆಗಟ್ಟಬಹುದಾದ ಮೂರನೇ ಪ್ರಮುಖ ಕಾರಣವೆಂದರೆ ಮದ್ಯಪಾನ ಎಂದಿದ್ದಾರೆ.

ಅಗಾಗ ಮದ್ಯ ಸೇವನೆ ಮಾಡೋದು ಒಳ್ಳೆಯದ್ದೋ, ಕೆಟ್ಟದ್ದೋ?

ಇನ್ನು ಹಿಂದಿನ ಅಧ್ಯಯನಗಳು ಲಘುದಿಂದ ಮಧ್ಯಮ(ಅಗಾಗ) ಪ್ರಮಾಣದಲ್ಲಿ ಮದ್ಯ ಸೇವಿಸುವುದರಿಂದ ಕೆಲವು ರೋಗಗಳ ಅಪಾಯವನ್ನು ಸ್ವಲ್ಪ ಕಡಿಮೆ ಮಾಡಬಹುದು ಎಂದು ಸೂಚಿಸಿದ್ದರೂ, ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಡೆಸಿದ ಇತ್ತೀಚಿನ ಮೆಟಾ-ವಿಶ್ಲೇಷಣೆಯು ಈ ಹಳೆಯ ತೀರ್ಮಾನ ತಪ್ಪು ಎಂದು ಕಂಡುಕೊಂಡಿದೆ. ಮೇಯೊ ಕ್ಲಿನಿಕ್ ಪ್ರಕಾರ, ಯಾವುದೇ ಪ್ರಮಾಣದಲ್ಲಿ ಮದ್ಯ ಸೇವಿಸುವುದರಿಂದ ಆರೋಗ್ಯದ ಅಪಾಯವಿದೆ. ಮಧ್ಯಮ ಸೇವನೆಯಲ್ಲಿ ಅಪಾಯ ಕಡಿಮೆಯಿದ್ದರೂ, ಸೇವನೆಯೊಂದಿಗೆ ಅದು ಹೆಚ್ಚಾಗುತ್ತದೆ ಎಂದು ಹೇಳಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net