ಡಬಲ್​​ ಚಿನ್​ ಸಮಸ್ಯೆ ಕಾಡುತ್ತಿದೆಯೇ? ಅಧಿಕತೂಕವೊಂದೇ ಕಾರಣವಲ್ಲ, ತಪ್ಪದೇ ಈ ಸಲಹೆಗಳನ್ನು ಪಾಲಿಸಿ... Double Chin

Double Chin
Published on

Double Chin : ಒಬ್ಬ ವ್ಯಕ್ತಿಯ ತೂಕ ಹೆಚ್ಚಾಗುವಾಗ ಸಂಭವಿಸುವ ಮೊದಲ ಬದಲಾವಣೆಯೆಂದರೆ ಗಲ್ಲದ ಅಡಿಯಲ್ಲಿ ಕೊಬ್ಬು ಹೆಚ್ಚಾಗುವುದು. ಇದನ್ನು ಡಬಲ್​ ಚಿನ್​ ಎಂದು ಕರೆಯುಲಾಗುತ್ತದೆ. ಈ ಡಬಲ್​ ಚಿನ್ ಸಮಸ್ಯೆಯಿಂದ ಮುಖದ ನೋಟವೇ ಬದಲಾಗುತ್ತದೆ. ಇದು ಯಾರನ್ನೇ ಆಗಲಿ ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ. ಅಷ್ಟಕ್ಕೂ ಡಬಲ್​ ಚಿನ್​ ಏಕೆ ಸಂಭವಿಸುತ್ತದೆ ಮತ್ತು ಕಡಿಮೆ ಮಾಡುವ ವಿಧಾನಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ತಜ್ಞರ ಪ್ರಕಾರ ಡಬಲ್​ ಚಿನ್​ಗೆ 3 ಮುಖ್ಯ ಕಾರಣಗಳಿವೆ

ಅಧಿಕ ತೂಕ

ಡಬಲ್​ ಚಿನ್​ ಸಮಸ್ಯೆಯು ಹಠಾತ್ ತೂಕ ಹೆಚ್ಚಾಗುವುದರಿಂದ ಮತ್ತು ತೂಕ ನಷ್ಟವಾಗುವುದರಿಂದ ಉಂಟಾಗುತ್ತದೆ. ಏಕೆಂದರೆ, ತೂಕ ಹೆಚ್ಚಾದಾಗ ಗಲ್ಲದ ಬಳಿ ಕೊಬ್ಬು ಶೇಖರಣೆಯಾಗುತ್ತದೆ ಮತ್ತು ತೂಕ ಕಡಿಮೆಯಾದಾಗ ಅಲ್ಲಿನ ಚರ್ಮ ಸಡಿಲವಾಗುತ್ತದೆ. ಇದರಿಂದ ಡಬಲ್​ ಚಿನ್​ ಕಾಣುತ್ತದೆ.

ಆನುವಂಶಿಯತೆ

ಡಬಲ್ ಚಿನ್​ ಬರಲು ಆನುವಂಶಿಕ ಕಾರಣಗಳೂ ಇರಬಹುದು ಎನ್ನುತ್ತಾರೆ ತಜ್ಞರು.

ವಯಸ್ಸಾಗುವುದು

ನಮಗೆ ವಯಸ್ಸಾದಂತೆ ಮುಖದ ಸ್ನಾಯುಗಳು ತಮ್ಮ ದೃಢತೆಯನ್ನು ಕಳೆದುಕೊಳ್ಳುತ್ತವೆ. ಇದು ಗಲ್ಲದ ಅಡಿಯಲ್ಲಿ ಕೊಬ್ಬು ಶೇಖರಣೆಗೆ ಮತ್ತು ಚರ್ಮದ ಕುಗ್ಗುವಿಕೆಗೆ ಕಾರಣವಾಗಬಹುದು. ಇದರಿಂದ ಡಬಲ್ ಚಿನ್​ ಸಮಸ್ಯೆ ಬರಬಹುದು.

ಹೀಗೆ ಮಾಡಿ...

ಚೆನ್ನಾಗಿ ಅಗಿಯಿರಿ

ಡಬಲ್ ಚಿನ್ ಸಮಸ್ಯೆಯಿಂದ ಬಳಲುತ್ತಿರುವವರು ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು. ಹೀಗೆ ಮಾಡುವುದರಿಂದ ಮುಖದ ಸ್ನಾಯುಗಳಿಗೆ ವ್ಯಾಯಾಮವಾಗುತ್ತದೆ. ಇದರಿಂದ ಸ್ನಾಯುಗಳು ಬಲಿಷ್ಠವಾಗುತ್ತವೆ. ಇದರಿಂದ ಹೆಚ್ಚಿನ ಕೊಬ್ಬು ಸಂಗ್ರಹವಾಗದೆ ಉತ್ತಮ ಮುಖದ ಆಕಾರವನ್ನು ಹೊಂದಲು ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಸಕ್ಕರೆ ರಹಿತ ಚ್ಯೂಯಿಂಗ್ ಗಮ್ ಗಳನ್ನು ಜಗಿಯುವುದು ಕೂಡ ಒಳ್ಳೆಯದು. ಇದು ದವಡೆಯ ಬಳಿ ಸಂಗ್ರಹವಾಗಿರುವ ಕೊಬ್ಬನ್ನು ಸುಲಭವಾಗಿ ಕರಗಿಸಲು ಸಹಾಯ ಮಾಡುತ್ತದೆ.

ಮೊಟ್ಟೆಯ ಬಿಳಿ ಭಾಗ ಬಳಸಿ

ಎರಡು ಮೊಟ್ಟೆಯ ಬಿಳಿ ಭಾಗ, ಒಂದು ಚಮಚ ಹಾಲು, ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಡಬಲ್ ಚಿನ್ ಇರುವ ಜಾಗಕ್ಕೆ ಈ ಮಿಶ್ರಣವನ್ನು ಪ್ಯಾಕ್ ಆಗಿ ಹಚ್ಚಿಕೊಳ್ಳಿ. 30 ನಿಮಿಷಗಳ ಕಾಲ ಒಣಗಲು ಬಿಟ್ಟು, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಮೊಟ್ಟೆಯ ಬಿಳಿಭಾಗವು ಚರ್ಮವನ್ನು ಬಿಗಿಗೊಳಿಸುತ್ತದೆ. ಇದನ್ನು ನಿಯಮಿತವಾಗಿ ಮಾಡುವುದರಿಂದ ಡಬಲ್ ಚಿನ್ ಕ್ರಮೇಣ ಕಡಿಮೆಯಾಗುತ್ತದೆ. ಮೊಟ್ಟೆಯ ವಾಸನೆಯನ್ನು ಇಷ್ಟಪಡದವರು ಈ ಮಿಶ್ರಣಕ್ಕೆ ಯಾವುದಾದರೂ ಘಮ್ಮೆನ್ನುವ ತೈಲದ ಕೆಲವು ಹನಿಗಳನ್ನು ಸೇರಿಸಬಹುದು.

ಗ್ರೀನ್​ ಟೀ

ಗ್ರೀನ್​ ಟೀ ದೇಹದ ಚಯಾಪಚಯವನ್ನು ವೇಗಗೊಳಿಸುತ್ತದೆ. ಇದು ಕೆಟ್ಟ ಕೊಬ್ಬನ್ನು ಸುಡುತ್ತದೆ. ಹಾಗಾಗಿ ಕಾಫಿ ಮತ್ತು ಟೀ ಬದಲಿಗೆ ಗ್ರೀನ್ ಟೀಯನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ, ಡಬಲ್ ಚಿನ್ ಸೇರಿದಂತೆ ಎಲ್ಲಿ ಬೇಕಾದರೂ ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡಬಹುದು.

ವಿಟಮಿನ್​ ಇ

ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ವಿಟಮಿನ್ 'ಇ' ಸಮೃದ್ಧವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬ್ರೌನ್ ರೈಸ್, ಹಸಿರು ತರಕಾರಿಗಳು, ಡೈರಿ ಉತ್ಪನ್ನಗಳು, ಸ್ವೀಟ್ ಕಾರ್ನ್, ಸೇಬುಗಳು, ಸೋಯಾ ಬೀನ್ಸ್ ಮತ್ತು ದ್ವಿದಳ ಧಾನ್ಯಗಳಲ್ಲಿ ವಿಟಮಿನ್ 'ಇ' ಸಮೃದ್ಧವಾಗಿದೆ. ಆದ್ದರಿಂದ, ಇವುಗಳನ್ನು ಖಂಡಿತವಾಗಿಯೂ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ಹೆಚ್ಚು ನೀರು ಕುಡಿಯಿರಿ

ದಿನಕ್ಕೆ ಕನಿಷ್ಠ 8 ರಿಂದ 10 ಗ್ಲಾಸ್ ನೀರು ಕುಡಿಯಿರಿ. ಇದು ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಮತ್ತು ದವಡೆ ಮತ್ತು ಗಲ್ಲದ ಅಡಿಯಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಅಲ್ಲದೆ, ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಬೇಕು.

ಈ ವ್ಯಾಯಾಮಗಳನ್ನು ಮಾಡಿ

ಹೆಚ್ಚು ನಗುವುದು ಮತ್ತು ಮಾತನಾಡುವುದು ಕೂಡ ಮುಖದ ಸ್ನಾಯುಗಳಿಗೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ಇದರಿಂದಾಗಿ ಡಬಲ್ ಚಿನ್​ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಇದಿಷ್ಟೇ ಅಲ್ಲದೆ, ಸ್ವಲ್ಪ ಸಮಯದವರೆಗೆ ಕುತ್ತಿಗೆಯನ್ನು ನಿಧಾನವಾಗಿ ತಿರುಗಿಸುವುದು, ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುವುದು ಸೇರಿ ಇತ್ಯಾದಿ ಸಣ್ಣ ವ್ಯಾಯಾಮಗಳು ಸಹ ಪರಿಣಾಮಕಾರಿಯಾಗಬಹುದು. ಅಲ್ಲದೆ, ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನ ಆಹಾರಗಳನ್ನು ನಿಮ್ಮ ಊಟದ ಮೆನುವಿನಲ್ಲಿ ಸೇರಿಸಬೇಕು.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು "ವಿಜಯವಾಣಿ ಡಾಟ್​ ನೆಟ್​" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net