ಹೊಟ್ಟೆಯ ಬೊಜ್ಜು ಕರಗಿಸಿ ತೂಕ ಇಳಿಸಬೇಕೇ? ಮಧ್ಯಾಹ್ನದ ಊಟಕ್ಕೆ ಅನ್ನ ಬದಲು ಇವುಗಳನ್ನು ತಿನ್ನಿ... Weight loss

Weight loss
Published on

Weight loss : ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಿ ತೂಕ ಇಳಿಸಿಕೊಳ್ಳಲು ನೀವು ಹೆಣಗಾಡುತ್ತೀರಾ? ಹೌದು ಎಂದಾದರೆ ನೀವು ಮಾಡಬೇಕಾಗಿರುವ ಮೊದಲ ಕೆಲಸ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರಗಳನ್ನು ದೂರ ಇಡಬೇಕು.

ಅಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ಅಧಿಕ ಕಾರ್ಬೋಹೈಡ್ರೇಟ್ ಸೇವನೆಯು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ. ಹೀಗಾಗಿ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಮಧ್ಯಾಹ್ನದ ಊಟದಲ್ಲಿ ಅನ್ನದ ಬದಲಿಗೆ ಯಾವ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ನಾವೀಗ ತಿಳಿಯೋಣ.

* ಬ್ರೊಕೋಲಿ-ಬ್ರೌನ್ ರೈಸ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕೆಂಪು ಅಕ್ಕಿಯಲ್ಲಿ ನಾರಿನಂಶ ಹೆಚ್ಚಿದ್ದು, ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬ್ರೊಕೋಲಿಯಲ್ಲಿಯೂ ನಾರಿನಂಶ ಅಧಿಕವಾಗಿದೆ ಮತ್ತು ಕಡಿಮೆ ಕಾರ್ಬೋಹೈಡ್ರೇಟ್‌ಗಳಿವೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಬ್ರೊಕೊಲಿ ಮತ್ತು ಬ್ರೌನ್ ರೈಸ್ ಅನ್ನು ತಮ್ಮ ಮಧ್ಯಾಹ್ನದ ಆಹಾರದಲ್ಲಿ ಸೇರಿಸುವುದು ಒಳ್ಳೆಯದು.

* ಬಾರ್ಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನಾರಿನಂಶವಿರುವ ಬಾರ್ಲಿಯನ್ನು ಮಧ್ಯಾಹ್ನ ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.

* ಈ ಪಟ್ಟಿಯಲ್ಲಿ ಓಟ್ಸ್​ ನಂತರದ ಸ್ಥಾನದಲ್ಲಿದೆ. ಒಂದು ಕಪ್ ಓಟ್ಸ್ 7.5 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಹಾಗಾಗಿ ಮಧ್ಯಾಹ್ನ ಓಟ್ ಮೀಲ್ ತಿನ್ನುವುದು ಕೂಡ ತೂಕ ಇಳಿಕೆಗೆ ಒಳ್ಳೆಯದು.

* ಈ ಪಟ್ಟಿಯಲ್ಲಿ ರವೆ ನಾಲ್ಕನೇ ಸ್ಥಾನದಲ್ಲಿದೆ. ರವೆಯಲ್ಲಿ ನಾರಿನಂಶದ ಜತೆಗೆ ಕೊಬ್ಬಿನಾಂಶ ಕೂಡ ಕಡಿಮೆ ಇರುತ್ತದೆ. ಆದ್ದರಿಂದ ಮಧ್ಯಾಹ್ನದ ವೇಳೆ ರವೆ ಆಹಾರ ತಿನ್ನುವುದು ಕೂಡ ತೂಕ ಇಳಿಕೆಗೆ ಒಳ್ಳೆಯದು.

* ನಾರಿನಾಂಶ ಅಧಿಕವಾಗಿರುವ ಸೇಬು, ಪೇರಲೆ ಮತ್ತು ಬೆರ್ರಿ ಹಣ್ಣುಗಳನ್ನು ಮಧ್ಯಾಹ್ನ ವೇಳೆ ಸೇವಿಸುವುದರಿಂದ ಹಸಿವು ಕಡಿಮೆಯಾಗಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.

ಮಧ್ಯಾಹ್ನದ ಊಟಕ್ಕೆ ಈ ಆಹಾರಗಳನ್ನು ಸೇವಿಸಿದರೆ ಅಧಿಕ ಕೊಬ್ಬನ್ನು ಕಳೆದುಕೊಂಡು ಫಿಟ್ ಆಗಿರುತ್ತೀರಿ. ಮಧ್ಯಾಹ್ನದ ವೇಳೆ ಈ ಆಹಾರಗಳನ್ನು ತಿನ್ನುವುದು ಕಷ್ಟ. ಆದರೆ, ನೀವು ಅಭ್ಯಾಸ ಮಾಡಿದರೆ, ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net