ಬೇಸಿಗೆಯಲ್ಲಿ ಜಿಮ್‌ಗೆ ಹೋಗುವ ಮೊದಲು ಸುಸ್ತಾಗುತ್ತೀದ್ರೆ ಈ ಜ್ಯೂಸ್​​ಗಳನ್ನು ಒಮ್ಮೆ ಟ್ರೈ ಮಾಡಿ, ದಣಿವು ದೂರವಾಗುವುದು ಖಂಡಿತ!Pre Workout Drinks

Pre Workout Drinks
Published on

Pre Workout Drinks: ಬೇಸಿಗೆಯ ಬಿಸಿಲಿನಲ್ಲಿ ಸ್ವಲ್ಪ ದೂರ ನಡೆದರೂ ಸಹ ದೇಹವು ದಣಿಯುತ್ತದೆ, ಬಾಯಾರಿಕೆ ಹೆಚ್ಚುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಜನರು ಹೆಚ್ಚು ನಡೆಯಲು ಇಷ್ಟಪಡುವುದಿಲ್ಲ. ಆದರೆ ಆರೋಗ್ಯವಾಗಿರಲು ಮತ್ತು ಫಿಟ್​​ ಆಗಿರಲು ಜನರು ತಮ್ಮ ದಿನಚರಿಯಲ್ಲಿ ವ್ಯಾಯಾಮವನ್ನು ಮಾಡುತ್ತಾರೆ. ಈ ವ್ಯಾಯಾಮವು ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಆದರೆ ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಬೇಸಿಗೆಯ ದಿನಗಳಲ್ಲಿ ನೀವು ಹೆಚ್ಚು ವ್ಯಾಯಾಮ ಮಾಡಿದಾಗ ದೇಹದಲ್ಲಿನ ನೀರು ಬೆವರಿನ ರೂಪದಲ್ಲಿ ಹೊರ ಹೋಗುತ್ತದೆ ಇದರಿಂದ ದೇಹವು ನಿರ್ಜಲೀಕರಣಗೊಳ್ಳಬಹುದು. ಹೀಗಾಗಿ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ನೀವು ವ್ಯಾಯಾಮ ಮಾಡುವ ಮುನ್ನ ಕೆಲವು ಪಾನೀಯಗಳನ್ನು ಕುಡಿದರೆ ಅದು ನಿಮ್ಮ ದೇಹವನ್ನು ಹೈಡ್ರೀಕರಿಸುತ್ತದೆ.  ಹಾಗಾದ್ರೆ ಆ ಪಾನೀಯಗಳು ಯಾವುವು ಗೊತ್ತಾ? ಬನ್ನಿ ತಿಳಿಯೋಣ.

1. ನಿಂಬು ಜ್ಯೂಸ್​​

ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿಡಲು, ನೀವು ನಿಂಬು ಜ್ಯೂಸ್​​​ಅನ್ನು ಕುಡಿಯಬಹುದು. ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.

2. ತಾಜಾ ಹಣ್ಣಿನ ಜ್ಯೂಸ್​​

ಹಣ್ಣಿನ ರಸದಲ್ಲಿ ಹಲವು ರೀತಿಯ ಪೋಷಕಾಂಶಗಳು ಇರುತ್ತವೆ ಮತ್ತು ಅದರ ಸೇವನೆಯು ನಿರ್ಜಲೀಕರಣವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ನೀವು ಕಲ್ಲಂಗಡಿ, ಕಿತ್ತಳೆ ಅಥವಾ ಬಾಳೆಹಣ್ಣಿನ ಜ್ಯೂಸ್​​ನ್ನು ಸೇವಿಸಬಹುದು.

3. ಎಳನೀರು

ವ್ಯಾಯಾಮ ಮಾಡುವ ಮೊದಲು ನೀವು ಎಳನೀರನ್ನು ಕುಡಿದರೆ ಆರೋಗ್ಯಕ್ಕೆ ಉತ್ತಮ ಪೋಷಕಾಂಶಗಳು ದೊರಕುತ್ತದೆ. ಇದರ ಸೇವನೆಯು ದೇಹದಲ್ಲಿ ನಿರ್ಜಲೀಕರಣವನ್ನು ತಡೆಯುತ್ತದೆ ಮತ್ತು ನಿಮ್ಮನ್ನು ಚೈತನ್ಯಪೂರ್ಣವಾಗಿರಿಸುತ್ತದೆ.

4. ಚಿಯಾ ವಾಟರ್

ಬಾಯಾರಿಕೆಯನ್ನು ತಪ್ಪಿಸಲು ನಿಂಬೆ, ಚಿಯಾ ಬೀಜಗಳು ಮತ್ತು ನೀರಿನಿಂದ ತಯಾರಿಸಿದ ಪಾನೀಯವನ್ನು ನೀವು ಸೇವಿಸಬಹುದು. ಇದು ದೇಹವನ್ನು ತಂಪಾಗಿಸುತ್ತದೆ ಮತ್ತು ನೀರಿನಂಶವನ್ನು ಕಾಯ್ದುಕೊಳ್ಳುತ್ತದೆ.

5. ಗ್ರೀನ್​​ ಟೀ

ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಸೇವಿಸಲಾಗುತ್ತದೆ ಮತ್ತು ಇದು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಗ್ರೀನ್ ಟೀ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಇದು ಶಕ್ತಿಯನ್ನು ಕಾಪಾಡಿಕೊಳ್ಳುತ್ತದೆ.

ಹೀಗೆ ನೀವು ವ್ಯಾಯಾಮದ ಮುನ್ನ ಈ ಮೇಲಿನ ಪಾನೀಯಗಳನ್ನು ಕುಡಿದರೆ ಉತ್ತಮ ಪೋಷಕಾಂಶದ ಜೊತೆಗೆ ದಿನಪೂರ್ತಿ ಚೈತನ್ಯಪೂರ್ಣವಾಗಿರಲು ಸಹಕರಿಸುತ್ತದೆ. ಜೊತೆಗೆ ನಿಮ್ಮ ದಾಹವನ್ನು ಸಹ ಇವು ಕಡಿಮೆ ಮಾಡುತ್ತದೆ.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net