ಬೇಸಿಗೆಯಲ್ಲಿ ನೀವು ಹೆಚ್ಚಾಗಿ ತಣ್ಣೀರು ಕುಡಿದರೆ ಈ ಸಮಸ್ಯೆ ಬರಬಹುದು ಎಚ್ಚರ! | ​​Cold Water

Cold Water
Published on

Cold Water | ಬೇಸಿಗೆ ಬಂತೆಂದರೆ ಸಾಕು ಜನರಿಗೆ ನೆನಪಾಗುವುದೇ ತಣ್ಣನೆಯ ಆಹಾರ ಪದಾರ್ಥ. ಸುಡುವ ಬಿಸಿಲಿನಲ್ಲಿ ಕೋಲ್ಡ್ ಆಗಿರುವ ನೀರು ಕುಡಿದಾಗ ಗಂಟಲು ಮತ್ತು ದೇಹಕ್ಕೆ ಅದೆಷ್ಟೋ ತಂಪೆನಿಸುತ್ತದೆ. ಬಿರು ಬಿಸಿಲಿನಿಂದ ಮನೆಗೆ ಹಿಂತಿರುಗಿದ ನಂತರ, ಜನರು ವಿವಿಧ ರೀತಿಯ ಪಾನೀಯಗಳಾದ ನಿಂಬೆ ಜ್ಯೂಸ್​, ತಣ್ಣೀರು, ಲಸ್ಸಿ, ಮಜ್ಜಿಗೆ, ಹಣ್ಣಿನ ಜ್ಯೂಸ್​, ಎಳನೀರನ್ನು ಕುಡಿಯುತ್ತಾರೆ. ಬೇಸಿಗೆಯಲ್ಲಿ ಬಾಯಾರಿಕೆ ತಣಿಸಲು ಫ್ರಿಡ್ಜ್‌ನಲ್ಲಿನ ತಣ್ಣೀರನ್ನು ಬಯಸುತ್ತಾರೆ. ತಣ್ಣೀರು ಕುಡಿಯುವುದರಿಂದ ದೇಹಕ್ಕೆ ತಕ್ಷಣದ ತಂಪು ಸಿಗುತ್ತದೆ. ಆದರೆ, ಅದರಿಂದ ಅನೇಕ ಅಪಾಯ ಉಂಟಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ.

ಅಧಿಕ ಸಂಖ್ಯೆಯ ಜನರು ಬೇಸಿಗೆಯಲ್ಲಿ ಈ ಐಸ್​ ವಾಟರ್ ಕುಡಿಯುತ್ತಾರೆ. ಕೆಲವರು ಫ್ರಿಡ್ಜ್‌ನಲ್ಲಿನ ಐಸ್​​ ತೆಗೆದು ನೀರಿಗೆ ಬೆರೆಸಿ ಕುಡಿಯುತ್ತಾರೆ. ಅದು ಆ ಕ್ಷಣಕ್ಕೆ ಮಾತ್ರ ಹಿತವೆನಿಸಬಹುದು. ಆದರೆ ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇದರ ಪರಿಣಾಮವಾಗಿ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ತಣ್ಣನೆಯ ನೀರು ಕುಡಿಯುವುದರಿಂದ ಏನ್ನೆಲ್ಲಾ ಸಮಸ್ಯೆಗಳನ್ನು ಉಂಟಾಗುತ್ತದೆ ಎಂಬುದರ ವಿವರ ಹೀಗಿದೆ ನೋಡಿ.

ಜೀರ್ಣಕ್ರಿಯೆಗೆ ಹಾನಿ: ಐಸ್ ವಾಟರ್ ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು. ತಣ್ಣೀರು ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದು ಆಹಾರದ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ನೀವು ಊಟ ಮಾಡುವಾಗ ತಣ್ಣೀರು ಸೇವಿಸಿದರೆ, ಆಹಾರವನ್ನು ಜೀರ್ಣಿಸಿಕೊಳ್ಳುವ ಬದಲು, ದೇಹವು ನೀರಿನ ತಾಪಮಾನವನ್ನು ಸಾಮಾನ್ಯಗೊಳಿಸಲು ಆ ಶಕ್ತಿಯನ್ನು ಬಳಸುತ್ತದೆ. ಆದ್ದರಿಂದ, ಊಟ ಮಾಡುವಾಗ ತಣ್ಣೀರು ಕುಡಿಯಬಾರದು.

ಗಂಟಲಿನ ಸಮಸ್ಯೆಗಳು: ಐಸ್ ವಾಟರ್ ಕುಡಿಯುವುದರಿಂದ ದೇಹವು ಬಹಳಷ್ಟು ಲೋಳೆಯನ್ನು ಉತ್ಪಾದಿಸುತ್ತದೆ. ಇದು ಗಂಟಲು ನೋವು, ಕಫ, ಶೀತ ಮತ್ತು ಗಂಟಲು ಊತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಉಸಿರಾಟದ ತೊಂದರೆ ಇರುವವರು ಐಸ್ ವಾಟರ್ ಕುಡಿಯುವುದನ್ನು ಸಂಪೂರ್ಣವಾಗಿ ತಡೆಯಬೇಕು.

ತಲೆನೋವು: ಬಿಸಿಲಿನಿಂದ ಬಂದ ನಂತರ ಐಸ್ ವಾಟರ್ ಕುಡಿಯುವುದರಿಂದ ತಲೆನೋವು ಬರಬಹುದು. ಹೀಗೆ ಮಾಡುವುದರಿಂದ ಬೆನ್ನುಮೂಳೆಯ ನರಗಳು ತಂಪಾಗುತ್ತವೆ. ಇದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ತಲೆನೋವು ಕಾಡುತ್ತದೆ. ಸೈನಸ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಅಪ್ಪಿತಪ್ಪಿಯೂ ತಣ್ಣೀರು ಕುಡಿಯಬಾರದು. ಇದು ಅವರ ಸ್ಥಿತಿಯನ್ನು ಗಂಭೀರಗೊಳಿಸಬಹುದು.

ಮೂಲವ್ಯಾಧಿಗೆ ಕಾರಣ: ಹೆಚ್ಚಾಗಿ ಐಸ್ ನೀರನ್ನು ಕುಡಿಯುತ್ತಿದ್ದರೆ, ಅದು ಮೂಲವ್ಯಾಧಿಗೆ ಕಾರಣವಾಗಬಹುದು. ಅದೇ ರೀತಿ, ಐಸ್ ನೀರನ್ನು ಕುಡಿಯುವುದರಿಂದ ಮಲ ಗಟ್ಟಿಯಾಗುತ್ತದೆ. ಇದು ಮೂಲವ್ಯಾಧಿಗೆ ಕಾರಣವಾಗಬಹುದು. ಹೆಚ್ಚು ತಣ್ಣೀರು ಕುಡಿಯುವುದರಿಂದ ಕರುಳಿನಲ್ಲಿ ಗಾಯಗಳು ಉಂಟಾಗಬಹುದು. ಈ ಕಾರಣದಿಂದಾಗಿ, ನಿಮಗೆ ಮಲದಲ್ಲಿನ ರಕ್ತ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳು ಕಾಡಬಹುದು.

ದೇಹದಲ್ಲಿ ನೀರಿನ ಕೊರತೆ: ತಣ್ಣೀರು ಕುಡಿಯುವುದರಿಂದ ನಿರ್ಜಲೀಕರಣ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ನೀರು ಕುಡಿದ ನಂತರ ನಿಮಗೆ ಮತ್ತೆ ನೀರು ಕುಡಿಯಬೇಕು ಎಂದು ಅನಿಸುವುದಿಲ್ಲ. ಈ ಕಾರಣದಿಂದಾಗಿ ನೀವು ಕಡಿಮೆ ನೀರು ಕುಡಿಯುತ್ತೀರಿ, ಇದು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ.

ತಣ್ಣೀರು ನಿಮ್ಮ ಆರೋಗ್ಯಕ್ಕೆ ಹೆಚ್ಚು ಹಾನಿ ಮಾಡುತ್ತದೆ. ಹೀಗಾಗಿ ಆದಷ್ಟು ಫ್ರಿಡ್ಜ್​ ಕೋಲ್ಡ್​ ನೀರು ಕುಡಿಯುವುದನ್ನು ತಪ್ಪಿಸಬೇಕು. ಆದರೆ ಬೇಸಿಗೆಯಲ್ಲಿ ನೀವು ತಣ್ಣೀರು ಕುಡಿಯಲು ಬಯಸಿದರೆ, ಸ್ವಲ್ಪ ಪ್ರಮಾಣದಲ್ಲಿ ಕುಡಿಯಬಹುದು. ಆದರೆ ನೀರಿಗೆ ಐಸ್ ಸೇರಿಸುವುದನ್ನು ಅಥವಾ ಫ್ರೀಜರ್‌ನಲ್ಲಿ ಇಟ್ಟಿರುವ ತಣ್ಣನೆಯ ನೀರನ್ನು ಕುಡಿಯುವುದನ್ನು ಎಷ್ಟು ತಪ್ಪಿಸುತ್ತೀರೋ, ಅಷ್ಟು ನಿಮಗೇ ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net