

Heart Attack: ಇತ್ತೀಚಿನ ದಿನಗಳಲ್ಲಿ ಹೃದಯ ಕಾಯಿಲೆಗಳು ವಯಸ್ಸಾದವರಿಗೆ ಮಾತ್ರ ಸೀಮಿತವಾಗಿಲ್ಲ. 30 ವರ್ಷಕ್ಕಿಂತ ಮೊದಲೇ ಹೃದಯಾಘಾತದಂತಹ ಅಪಾಯಕಾರಿ ಘಟನೆಗಳು ನಮ್ಮ ರಾಜ್ಯದಲ್ಲಿಯೇ ನಡೆಯುತ್ತಿದೆ.
ಹೌದು, ಇತ್ತೀಚಿಗೆ ಹಾಸನ ಜಿಲ್ಲೆಯಲ್ಲಿ ಕೇವಲ ಒಂದೇ ತಿಂಗಳ ಆಂತರದಲ್ಲಿ 25 ಜನರು ಅಸುನಿಗಿರು ಬಗ್ಗೆ ವರದಿಯಾಗಿದೆ. ಇನ್ನು ದೈನಂದಿನ ಒತ್ತಡದ ಜೀವನ, ಕೆಲಸದ ಒತ್ತಡ, ಅನಿಯಮಿತ ದಿನಚರಿ ಮತ್ತು ತಪ್ಪು ಆಹಾರ ಪದ್ಧತಿ, ಇವೆಲ್ಲವೂ ಒಟ್ಟಾಗಿ ನಮ್ಮ ದೇಹದ ಪ್ರಮುಖ ಅಂಗವಾದ ಹೃದಯದ ಮೇಲೆ ಆಳವಾದ ಪರಿಣಾಮ ಬೀರುತ್ತವೆ.
ಇದನ್ನೂ ಓದಿ:ಜು.15 ರಂದು ಚಾ.ನಗರ ಬಂದ್
ನಿಮ್ಮ ಹೃದಯವನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿಡಲು ಒಂದು ಮಾರ್ಗವಿದ್ದರೆ ಊಹಿಸಿ? ಹಾಗಾದರೆ ಈ ಐದು ವಿಷಯಗಳಿಗೆ ಯಾವುದೇ ದುಬಾರಿ ಚಿಕಿತ್ಸೆಯ ಅಗತ್ಯವಿಲ್ಲ ಅಥವಾ ಯಾವುದೇ ಕಹಿ ಔಷಧವನ್ನು ಅವಲಂಬಿಸಿಲ್ಲ. ಸ್ವಲ್ಪ ತಿಳುವಳಿಕೆ ಮತ್ತು ಕೆಲವು ಉತ್ತಮ ಅಭ್ಯಾಸಗಳು ನಿಮ್ಮ ಹೃದಯ ಯಾವಾಗಲೂ ಬಡಿಯುವಂತೆ ಮಾಡಲು ಸಹಾಯ ಮಾಡುತ್ತದೆ.
30 ನಿಮಿಷ ದೈಹಿಕ ಚಟುವಟಿಕೆ
ಪ್ರತಿದಿನ 30 ನಿಮಿಷಗಳ ಕಾಲ ಯಾವುದಾರೂ ದೈಹಿಕ ಚಟುವಟಿಕೆಗಳು ಮಾಡಬೇಕಾಗುತ್ತದೆ. ನಡಿಗೆ, ಯೋಗ, ಲಘು ನಡಿಗೆ ಮಾಡಬೇಕು. ಇದರಿಂದ ದೇಹವನ್ನು ಸಕ್ರಿಯವಾಗಿ ಇಡಬಹುದು. ಅಲ್ಲದೆ, ಈ ದೈನಂದಿನ ಪ್ರಕ್ರಿಯೆ ನಮ್ಮ ಹೃದಯನ್ನು ಬಲಪಡಿಸುತ್ತದೆ.
2.ಒತ್ತ ಕಡಿಮೆ ಮಾಡಿಕೊಳ್ಳಿ
ನಿರಂತರ ಒತ್ತಡವು ಹೃದಯದ ಮೇಲೆ ಅತಿಯಾದ ಒತ್ತಡವನ್ನು ಬೀರುತ್ತದೆ, ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, 15 ನಿಮಿಷಗಳ ಧ್ಯಾನ ಅಥವಾ ಉಸಿರಾಟದ ವ್ಯಾಯಾಮವು ಒತ್ತಡವನ್ನು ನಿವಾರಿಸಲು ಸುಲಭವಾದ ಮಾರ್ಗವಾಗಿದೆ.
3.ಫಾಸ್ಟ್ಫುಡ್ ಬಿಟ್ಟುಬಿಡಿ
ಎಣ್ಣೆ, ತುಪ್ಪ, ಸಕ್ಕರೆ ಮತ್ತು ಉಪ್ಪಿನ ಅಂಶವಿರುವ ಫಾಸ್ಟ್ಫುಡ್ ಹೃದಯಕ್ಕೆ ವಿಷವಿದಂತೆ. ನಿಮ್ಮ ಆಹಾರದಲ್ಲಿ ಹಣ್ಣುಗಳು, ಹಸಿರು ತರಕಾರಿಗಳು, ಓಟ್ಸ್, ಬೀಜಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್ ಅನ್ನು ಸೇರಿಸಿ. ಇದರಿಂದ ದೇಹದ ರಕ್ತದೊತ್ತಡ ಸಮತೋಲನದಲ್ಲಿದೆ.
4.ನಿದ್ದೆ ಬಹುಮುಖ್ಯ
ಕಡಿಮೆ ನಿದ್ದೆ ಹೃದಯ ಬಡಿತ, ರಕ್ತದೊತ್ತಡ ಮತ್ತು ಒತ್ತಡ ಮಟ್ಟವನ್ನು ಹೆಚ್ಚಿಸುತ್ತದೆ. ಕನಿಷ್ಠ 7 ಗಂಟೆಗಳ ಕಾಲ ನಿದ್ರೆ ಮಾಡುವುದು ಮುಖ್ಯ, ಮತ್ತು ನೀವು ನಿಗದಿತ ಸಮಯದಲ್ಲಿ ನಿದ್ರೆ ಮಾಡಿ ಎಚ್ಚರಗೊಳ್ಳಬೇಕು.
5.ಧೂಮಪಾನ & ಮದ್ಯಪಾನ
ಧೂಮಪಾನ ಹಾಗೂ ಅತಿಯಾದ ಮದ್ಯಪಾನದಿಂದ ಹೃದಯದ ಅಪಧಮನಿಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಹೃದಯದ ಅಪಘಾತ ಅಧಿಕವಾಗಿರುತ್ತದೆ. ಧೂಮಪಾನ ಹಾಗೂ ಅತಿಯಾದ ಮದ್ಯಪಾನದಿಂದ ದೂರ ಇದಷ್ಟು ಆರೋಗ್ಯ ಸುಧಾರಿಸುತ್ತದೆ. (ಏಜೆನ್ಸೀಸ್)