ಗಜಕರ್ಣ ಅಥವಾ ಹುಳಕಡ್ಡಿ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ! Ringworm Treatment

untitled-design-16-690b3fde92c12
Published on

Ringworm Treatment: ಗಜಕರ್ಣ ಎಂಬುದು ಚರ್ಮದ ಮೇಲೆ ಉಂಟಾಗುವಂತಹ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಇದು ಚರ್ಮ, ನೆತ್ತಿ ಅಥವಾ ಉಗುರುಗಳ ಸಾಮಾನ್ಯ, ಸಾಂಕ್ರಾಮಿಕ ಶಿಲೀಂಧ್ರ ಸೋಂಕು, ತುರಿಕೆ, ಕೆಂಪು, ಉಂಗುರದ ಆಕಾರದ ದದ್ದು ಕಾಣಿಸಿಕೊಂಡು ಚರ್ಮದ ಮೇಲೆ ನೋವು, ಉರಿಯನ್ನು ಬೀರುತ್ತದೆ. ಈ ತೊಂದರೆಯನ್ನು ದುಬಾರಿ ಔಷಧಿಗಳನ್ನು ಬಳಸದೇ ಮನೆಯಲ್ಲಿಯೇ ಸರಳ ಮನೆಮದ್ದುಗಳನ್ನು ಬಳಸಿ ಗುಣಪಡಿಸಬಹುದು. ಹಾಗಿದ್ದರೆ, ಈ ಮನೆಮದ್ದುಗಳ ಬಗ್ಗೆ ತಿಳಿಯೋಣ ಬನ್ನಿ...

1. ಬೇಕಿಂಗ್ ಸೋಡಾ ಪೇಸ್ಟ್

ಬೇಕಿಂಗ್​ ಸೋಡಾ ಗಜಕರ್ಣದ ಉರಿಯನ್ನು ನಿವಾರಿಸುವಲ್ಲಿ ಅತ್ಯಂತ ಉಪಯುಕ್ತವಾಗಿದೆ. ಇದು ಆಲ್ಕಲೈನ್ ಗುಣಗಳಿಂದಾಗಿ ಚರ್ಮದ pH ಮಟ್ಟವನ್ನು ಸಮತೋಲನಗೊಳಿಸಿ, ಚರ್ಮ ಊದಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಹಾಗಾಗಿ 1 ಚಮಚ ಬೇಕಿಂಗ್ ಸೋಡಾಕ್ಕೆ ಸ್ವಲ್ಪ ನೀರು ಸೇರಿಸಿ ಮಿಶ್ರಣ ತಯಾರಿಸಿ. ನಂತರ ಚರ್ಮದಲ್ಲಾಗಿರುವ ಕಡ್ಡಿಯ ಸ್ಥಳಕ್ಕೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಬಿಡಿ. ಬಳಿಕ ಶುದ್ಧವಾದ ನೀರಿನಿಂದ ತೊಳೆಯಿರಿ. ದಿನಕ್ಕೆ 2 ರಿಂದ 3 ಬಾರಿ ಹಚ್ಚಿರಿ. ಇದು ತ್ವರಿತವಾಗಿ ಚರ್ಮದಲ್ಲಾದ ಹುಣ್ಣನ್ನು ತೆಗೆಯಲು ಸಹಾಯ ಮಾಡುತ್ತದೆ.

2. ಅಲೋವೆ ವೆರಾ ಜೆಲ್

ಅಲೊವೆರಾ ಒಂದು ನೈಸರ್ಗಿಕ ಗಿಡಮೂಲಿಕೆ ಔಷಧಿ ಎಂದು ಕರೆಯಲಾಗುತ್ತದೆ. ಇದರ ರಸವನ್ನು ಹುಳಕಡ್ಡಿಯಾದಂತಹ ಜಾಗಕ್ಕೆ ಹಚ್ಚುವುದರಿಂದ ಇದು ಚರ್ಮವನ್ನು ಶಾಂತಗೊಳಿಸಿ ನೋವನ್ನು ಕಡಿಮೆ ಮಾಡುತ್ತದೆ. ಶುದ್ಧವಾದ ಅಲೋವೆರಾ ಎಲೆಯನ್ನು ಕತ್ತರಿಸಿ ಅದರ ಜೆಲ್​ನ್ನು ನೇರವಾಗಿ ಕಡ್ಡಿಯ ಮೇಲೆ ಹಚ್ಚಿರಿ. ನಂತರ 30 ನಿಮಿಷಗಳನ್ನು ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ದಿನಕ್ಕೆ 3 ಬಾರಿ ಬಳಸುವುದರಿಂದ ಚರ್ಮದಲ್ಲಾದ ಹುಳವು ಶಮನವಾಗುತ್ತದೆ.

3. ಜೇನುತುಪ್ಪ

ಜೇನುತುಪ್ಪವು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ-ಇನ್ಫ್ಲಮೇಟರಿ ಗುಣಗಳನ್ನು ಹೊಂದಿದೆ. ಇದು ಚರ್ಮದಲ್ಲಿ ಹುಳಕಡ್ಡಿಯಿಂದ ಉಂಟಾದ ಕಡಿತ ಹಾಗೂ ಕೆಂಪಾಗುವುದನ್ನು ನಿಯಂತ್ರಿಸುತ್ತದೆ. ಹಾಗೆಯೇ ಇದು ತ್ವರಿತವಾಗಿ ಹುಳಕಡ್ಡಿಯಿಂದ ರಕ್ಷಿಸುತ್ತದೆ. ಆದರಿಂದ ಜೇನುತುಪ್ಪವನ್ನು ಹುಳಕಡ್ಡಿಯಾದ ಜಾಗಕ್ಕೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ಇದು ಆ ಸಮಸ್ಯೆಯಿಂದ ರಿಲೀಫ್ ನೀಡುತ್ತದೆ.

4. ಐಸ್ ಪ್ಯಾಕ್

ಐಸ್​ಪ್ಯಾಕ್​ನ್ನು ಹುಳಕಡ್ಡಿ ಇರುವಂತಹ ಜಾಗಕ್ಕೆ ಹಚ್ಚುವುದರಿಂದ ಬೇಗನೆ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಉರಿಯನ್ನು ನಿಯಂತ್ರಿಸಿ, ರಕ್ತನಾಳಗಳ ಸಂಕೋಚನಕ್ಕೆ ಕಾರಣವಾಗಬಹುದು. ಐಸ್ ಕ್ಯೂಬ್ ಅನ್ನು ಒಂದು ಬಟ್ಟಲಿನಲ್ಲಿ ಇಟ್ಟು ಕಡ್ಡಿಯ ಸ್ಥಳಕ್ಕೆ 20 ನಿಮಿಷಗಳ ಕಾಲ ಹಚ್ಚಿರಿ. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

5. ಟೂತ್ ಪೇಸ್ಟ್

ಟೂತ್ ಪೇಸ್ಟ್​ನ್ನು ಹುಳಕಡ್ಡಿಯಾದ ಜಾಗಕ್ಕೆ ಹಚ್ಚುವುದರಿಂದ ಇದು ಚರ್ಮವನ್ನು ತಂಪುಗೊಳಿಸಿ ಕಡಿಯುವುದನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಯಾವುದೇ ಬಿಳಿ ಬಣ್ಣವಿರುವಂತಹ ಟೂತ್​ ಪೇಸ್ಟ್​ನ್ನು ದಿನಕ್ಕೆ 2 ಬಾರಿ ಕಡ್ಡಿಯ ಮೇಲೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯುವುದರಿಂದ ಸೂಕ್ಷ್ಮ ಚರ್ಮಕ್ಕೆ ರಿಲೀಫ್​ ನೀಡುತ್ತದೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net