ನಿಮ್ಮ ವಾಹನದ ಟೈರ್​​ನಲ್ಲಿ ಬಿರುಕುಗಳಿವೆಯೇ? ಸರಿಪಡಿಸಲು ಸಾಧ್ಯವೇ ಎಂಬುದನ್ನು ತಿಳಿಯಲು ಇಲ್ಲಿದೆ ಟೆಕ್ನಿಕ್!

ಬನ
Published on

ಬೆಂಗಳೂರು: ನಿಮ್ಮ ವಾಹನದ ಟೈರ್‌ಗಳು ಸವೆದಾಗ ಅವಘಡ ಸಂಭವಿಸದಂತೆ ಅವುಗಳನ್ನು ಮೊದಲೇ ಬದಲಿಸುವುದರ ಬಗ್ಗೆ ತಿಳಿದಿರಬೇಕು. ಅನೇಕ ಬಾರಿ ಟೈರ್‌ಗಳ ಬದಿಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಬಿರುಕುಗಳನ್ನು ನಿರ್ಲಕ್ಷಿಸುತ್ತೇವೆ. ಆದರೆ ಹಾಗೆ ಮಾಡುವುದು ಅಪಾಯಕಾರಿ. ಕೆಲವರು ಒಂದು ಸಣ್ಣ ರೇಖೆ ಕಂಡ ತಕ್ಷಣ ಟೈರ್​​ ಬದಲಿಸುತ್ತಾರೆ. ಅದರೆ ಅಂತಹ ಟೈರ್​ಗಳು ಓಡಿಸಲು ಯೋಗ್ಯವಾಗಿರುತ್ತದೆ.

ಬಿರುಕು ಯಾವ ಪ್ರಮಾಣದಲ್ಲಿ ಇದ್ದಾಗ ಟೈರ್​ ಬದಲಿಸಬೇಕು ಎಂಬ ಪ್ರಶ್ನೆ ಮೂಡುತ್ತದೆ. ಟೈರ್​​ನ ಬದಿಯಲ್ಲಿ ಕಾಣುವ ಬಿರುಕನ್ನು ತಕ್ಷಣದಲ್ಲಿ ಸರಿಪಡಿಸಬಹುದು. ಚಿಕ್ಕ ಅಥವಾ ಆಳವಿಲ್ಲದ ಬಿರುಕಿನಿಂದ ಯಾವುದೇ ಅಪಾಯವಿಲ್ಲ. ಟೈರ್​​ನಲ್ಲಿ ಬಿರುಕು, ಕಡಿತ ಅಥವಾ ಉಬ್ಬುಗಳಾಗಲು ಹಲವಾರು ಕಾರಣಗಳಿವೆ. ಟೈರ್​ನ ಗುಣಮಟ್ಟ, ಹವಾಮಾನ, ಪಂಚರ್​​ಗಳು ಟೈರ್​ನ ಜೀವಿತಾವಧಿಯನ್ನು ನಿರ್ಧರಿಸುತ್ತವೆ. ಬಿರುಕು ಬಹಳ ಆಳವಾಗಿದ್ದರೆ ಟೈರ್​​ ಬದಲಾಯಿಸದೆ ಬೇರೆ ಆಯ್ಕೆ ಇಲ್ಲ.

ಹೇಗೆ ಪರಿಶೀಲಿಸುವುದು?

ಬಿರುಕಿನ ಆಳವನ್ನು ಒಂದು ಸುಲಭ ಪರೀಕ್ಷೆಯ ಮೂಲಕ ಕಂಡುಹಿಡಿಯಬಹುದು. ಟಾರ್ಚ್​ ಲೈಟ್​​ನ ಸಹಾಯದಿಂದ ಟೈರ್​​ನ ಬದಿಯಲ್ಲಿರುವ ಬಿರುಕನ್ನು ನೋಡಬೇಕು. ಕೇವಲ ರಬ್ಬರ್ ಗೋಚರಿಸಿದರೆ ಅಂತಹ ಟೈರ್​​​ಗಳನ್ನು ಇನ್ನೂ ಕೆಲವು ದಿನಗಳವರೆಗೆ ಓಡಿಸಬಹುದು. ಆದರೆ ಲೋಹದ ತಂತಿಯ ಹಾಗೆ ಇದ್ದರೆ ಅದನ್ನು ಆದಷ್ಟು ಬೇಗ ಬದಲಿಸಬೇಕು.

ಬಿರುಕನ್ನು ಸರಿಪಡಿಸಲು ಸಾಧ್ಯವೇ?

ಟೈರ್​​ನ ಬದಿಯಲ್ಲಾಗಿರುವ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಟೈರ್‌ನ ಸೈಡ್‌ವಾಲ್‌ಗಳಿಂದ ಉಂಟಾಗುವ ಒತ್ತಡ ಹೆಚ್ಚು. ಅದನ್ನು ಸರಿಪಡಿಸಲು ಕೆಲವು ರೀತಿಯ ಲೋಷನ್ ಅಥವಾ ರಬ್ಬರ್ ಪೀಸ್ ಬಳಸಿದರೂ ಕಾರಿನ ತೂಕ, ಡ್ರೈವಿಂಗ್ ಶೇರ್​ ಫೋರ್ಸ್, ಟಾರ್ಕ್ ವ್ಯತ್ಯಾಸವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ಸೈಡ್ ವಾಲ್ ಗೆ ಟೈರ್ ಅನ್ನು ಸುರಕ್ಷಿತವಾಗಿ ಸರಿಪಡಿಸಲು ಯಾವುದೇ ಮಾರ್ಗವಿಲ್ಲ. ಆದರೆ ಟೈರ್​​ಗಳಲ್ಲಿ ಬಿರುಕುಗಳು ಕಾಣಿಸದಂತೆ ನೋಡಿಕೊಳ್ಳಲು ಕೆಲವು ಕ್ರಮಗಳಿವೆ:

1. ಸರಿಯಾದ ಟೈರ್ ಒತ್ತಡವನ್ನು ಕಾಪಾಡಿಕೊಳ್ಳಬೇಕು

2. ವಾಹನ ಓವ​​ರ್​​-ಲೋಡ್​​ ಆಗಬಾರದು

3. ವಾಹನವನ್ನು ನೆರಳಿನಲ್ಲಿ ನಿಲ್ಲಿಸಬೇಕು

4. ಟೈರ್​​ ಕ್ಲೀನರ್​​​ ಅನ್ನು ಹೆಚ್ಚಾಗಿ ಬಳಸಬಾರದು

5. ಬ್ರೇಕ್ ಡಸ್ಟ್ ನಂತಹ ಮಾಲಿನ್ಯಕಾರಕಗಳನ್ನು ತೆಗೆಯಲು ಟೈರ್​​ ಅನ್ನು ಸಾಬೂನಿನಿಂದ ಸ್ವಚ್ಛಗೊಳಿಸಬೇಕು

6. ವಾಹನವನ್ನು ಸುಮ್ಮನೆ ನಿಲ್ಲಿಸಬಾರದು, ಆಗಾಗ್ಗೆ ಓಡಿಸಬೇಕು (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net