

ಸಬ್ಬಕ್ಕಿ ಇಡ್ಲಿ
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್ನಲ್ಲಿ ಸಬ್ಬಕ್ಕಿ, ಇಡ್ಲಿ ರವೆ, ಮೊಸರು, ನೀರು ಹಾಕಿ ಎಂಟು ಗಂಟೆ ನೆನೆಸಿಡಿ. ನಂತರ ಹಿಟ್ಟನ್ನು ಚೆನ್ನಾಗಿ ಕೆಡಿಸಿ ಅಗತ್ಯವಿದ್ದರೆ ಸ್ವಲ್ಪ ನೀರನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿರಿ. ಸಾಸಿವೆ, ಗೋಡಂಬಿ ಹಾಗೂ ಕರಿಬೇವಿನ ಒಗ್ಗರಣೆ ಹಾಕಿ ಹಿಟ್ಟಿಗೆ ಬೆರೆಸಿ. ಅದಕ್ಕೆ ಬೇಕಿಂಗ್ ಸೋಡಾವನ್ನು ಹಾಕಿ ಕೂಡಲೇ 7 ರಿಂದ 10 ನಿಮಿಷ ಬೇಯಿಸಿರಿ. ಇದನ್ನು ಚಟ್ನಿ ಜತೆ ಸವಿಯಲು ನೀಡಿ .
ಸ್ಟಫ್ಡ್ ಇಡ್ಲಿ
ಬೇಕಾಗುವ ಸಾಮಾಗ್ರಿಗಳು: ಒಂದು ಕಪ್ ಹುರಿದ ಸಣ್ಣ ರವೆ ಒಂದು ಕಪ್ ಮೊಸರು ಅರ್ಧ ಚಮಚ ಬೇಕಿಂಗ್ ಸೋಡಾ ಉಪ್ಪು.
ಮಾಡುವ ವಿಧಾನ: ಹುರಿದ ರವೆ, ಮೊಸರು, ನೀರು ಹಾಕಿ ಸರಿಯಾಗಿ ಬೆರೆಸಿ ಅರ್ಧ ಗಂಟೆ ಇಡಿ. ಬೇಯಿಸುವ ಮೊದಲು ಉಪ್ಪು ಹಾಗೂ ಅರ್ಧ ಚಮಚ ಬೇಕಿಂಗ್ ಸೋಡವನ್ನು ಹಾಕಿ ಕಲಿಸಿರಿ.
ಸ್ಟಫಿಂಗ್ ಮಾಡುವ ವಿಧಾನ: ಒಗ್ಗರಣೆಗೆ ಸಾಸಿವೆ, ಜೀರಿಗೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ಹಳದಿ, ಕರಿಬೇವು ಎಲೆಗಳು, ಇಂಗು, ಇಉಪ್ಪು,ಈರುಳ್ಳಿ ಹಾಕಿ ಸರಿಯಾಗಿ ಹುರಿಯಿರಿ. ನಂತರ ಬೇಯಿಸಿದ ಆಲೂಗಡ್ಡೆಯನ್ನು ಹಾಕಿ ಬೆರೆಸಿರಿ ಸ್ಟಫಿಂಗ್ ರೆಡಿ .
ಬೇಯಿಸುವಾಗ ಇಡ್ಲಿ ಸ್ಟಾಂಡ್ಗೆ ಸ್ವಲ್ಪ ಇಡ್ಲಿ ಹಿಟ್ಟನ್ನು ಹಾಕಿ ಅದರ ಮೇಲೆ ಒಂದು ಚಮಚ ಸ್ಟಫಿಂಗ್ ಹರಡಿಸಿರಿ. ಸ್ಟಫಿಂಗ್ ಹಾಕಿದ ಮೇಲೆ ಪುನಃ ಇಡ್ಲಿ ಹಿಟ್ಟನ್ನು ಅದರ ಮೇಲೆ ಹಾಕಿರಿ. ಹೀಗೆ ಎಲ್ಲ ಇಡ್ಲಿಗಳನ್ನು ತಯಾರಿಸಿ. ಇದನ್ನು ಹತ್ತು ನಿಮಿಷ ಬೇಯಿಸಿರಿ. ಚಟ್ನಿಯ ಜತೆ ಸವಿಯಲು ನೀಡಿ .
ಮಲ್ಲಿಗೆ ಇಡ್ಲಿ
ಬೇಕಾಗುವ ಸಾಮಾಗ್ರಿಗಳು: ಒಂದು ಕಪ್ ಉದ್ದಿನ ಬೇಳೆ ಒಂದು ಕಪ್ ಅವಲಕ್ಕಿ ಎರಡು ಕಪ್ ಇಡ್ಲಿ ರವೆ