ಸಿಗ್ನಲ್ ಬಳಿ ನಿಂತಿದ್ದ 2 ಕಾರುಗಳಿಗೆ ಡಿಕ್ಕಿ ಹೊಡೆದ ಲಾರಿ: ಕಾರು ಚಾಲಕ ಸ್ಥಳದಲ್ಲೇ ಸಾವು

Man Death 29 Feb 20
Published on

ಬೆಂಗಳೂರು: ರಸ್ತೆಯಲ್ಲಿ ನಿಂತಿದ್ದ ಕಾರುಗಳಿಗೆ ಸಿಲಿಂಡರ್​ ತುಂಬಿದ ಲಾರಿ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಇಂದಿರಾನಗರದ ಭಿನ್ನಮಂಗಲ ಟ್ರಾಫಿಕ್ಸ್ ಸಿಗ್ನಲ್​ ಬಳಿ ಸೋಮವಾರ ಸಂಭವಿಸಿದೆ.

ಅಪಘಾತದಲ್ಲಿ ಮೈಸೂರಿನ ರಾಮಚಂದ್ರ ಮೃತಪಟ್ಟಿದ್ದಾರೆ. ಮತ್ತೊಂದು ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಿನ್ನಮಂಗಲದ ಸಿಗ್ನಲ್​ ಬಳಿ ಎರಡು ಕಾರುಗಳು ನಿಂತಿದ್ದವು. ಅವುಗಳ ಹಿಂದೆ ಸಿಲಿಂಡರ್​ ತುಂಬಿದ ಲಾರಿ ಬರುತಿತ್ತು. ರಭಸವಾಗಿ ಬಂದ ಲಾರಿ ಮುಂದೆ ನಿಂತಿದ್ದ 2 ಕಾರುಗಳಿಗೆ ಡಿಕ್ಕಿ ಹೊಡೆಯಿತು. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಚಾಲಕ ರಾಮಚಂದ್ರ ಸ್ಥಳದಲ್ಲೇ ಮೃತಪಟ್ಟರು. ಮತ್ತೊಂದು ಕಾರಿನ ಏರ್​ ಬ್ಯಾಗ್​ ತೆರೆದುಕೊಂಡ ಹಿನ್ನೆಲೆಯಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಹಲಸೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net