ಕೇವಲ 20 ಸೆಕೆಂಡ್ ಒಬ್ಬರಿಗೊಬ್ಬರು ತಬ್ಬಿಕೊಂಡು ಹೀಗೆ ಮಾಡಿದ್ರೆ ಸಾಕು... ಮನಸ್ಸು ರಿಲ್ಯಾಕ್ಸ್

hugging (1)
Published on

ಬೆಂಗಳೂರು: ಸಂಗಾತಿ, ತಂದೆ- ತಾಯಿ, ಸ್ನೇಹಿತೆಯನ್ನು ಅಪ್ಪಿಕೊಳ್ಳುವುದರ ಮೂಲಕ ಕೋಪ ಕಡಿಮೆ ಮಾಡಿ ನಿಮ್ಮ ಮೇಲಿನ ಪ್ರೀತಿಯನ್ನು ಹೆಚ್ಚಿಸಬಹುದು. ಇದು ಅತ್ಯುತ್ತಮ ಅಪ್ಪುಗೆಯ ಕ್ಷಣ ಎನ್ನುತ್ತಾರೆ ಆರೋಗ್ಯ ತಜ್ಞರು. ಪ್ರತಿದಿನ 20 ಸೆಕೆಂಡುಗಳ ಕಾಲ ನಿಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಮಾವು ಇಂದು ಈ ಕುರಿತಾಗಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ....

ಅಪ್ಪುಗೆಗಳು ಸಾಂತ್ವನವನ್ನು ಅನುಭವಿಸುತ್ತವೆ. ಇದರಿಂದ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದನ್ನು ಲವ್ ಹಾರ್ಮೋನ್ ಅಥವಾ ಕಡ್ಲ್ ಹಾರ್ಮೋನ್ ಎಂದು ಕರೆಯಲಾಗುತ್ತದೆ. ಈ ಹಾರ್ಮೋನ್ ಆಕ್ಸಿಟೋಸಿನ್ ಒತ್ತಡ, ಆತಂಕ ಕಡಿಮೆ ಮಾಡಿ ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತದೆ.

20 ಸೆಕೆಂಡುಗಳ ಅಪ್ಪುಗೆಯು ನಿಮ್ಮ ಬಂಧವನ್ನು ಸುಧಾರಿಸಬಹುದು. ದೈಹಿಕ ಸ್ಪರ್ಶವು ಪ್ರೀತಿಪಾತ್ರರೊಂದಿಗಿನ ಭಾವನಾತ್ಮಕ ಬಂಧಗಳನ್ನು ಬಲಪಡಿಸುತ್ತದೆ. ನಿಮ್ಮ ನಡುವಿನ ಪ್ರೀತಿ ಆತ್ಮೀಯತೆಯನ್ನು ಹೆಚ್ಚಿಸುತ್ತದೆ.

ಅಪ್ಪುಗೆಯು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯೊಂದು ತೋರಿಸಿದೆ ಎನ್ನಲಾಗಿದೆ.

ಅಪ್ಪುಗೆಯಿಂದಲೂ ಸಂತೋಷದ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿ ಮನಸ್ಸನ್ನು ಹಗುರಗೊಳಿಸುತ್ತವೆ.

ಒಬ್ಬರನೊಬ್ಬರು ತಬ್ಬಿಕೊಳ್ಳುವುದರಿಂದ ನಿಮ್ಮ ನಡುವಿನ ಸಂವಹನವೂ ಬಲಗೊಳ್ಳುತ್ತದೆ. ಕೋಪವೂ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯವೂ ಹೆಚ್ಚುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಸಂಗ್ರಹಿಸಿ ನೀಡಲಾಗಿದೆ. ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಸಮಸ್ಯೆಗಳು ಇದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net