ಹೋಟೆಲ್​ ಸ್ಟೈಲ್​ ಹರ ಭಾರಾ ಕಬಾಬ್ ಮನೆಯಲ್ಲೇ ಮಾಡಿ; ಹೇಗೆ ಅಂತಿರಾ..ಇಲ್ಲಿದೆ ವಿಧಾನ

Untitled-design-2024-06-18T192329.129
Published on

ಹರ ಭಾರಾ ಕಬಾಬ್ ಎಂಬುದು ಹೊರಗೆ ತಿನ್ನಲು ಇಷ್ಟಪಡುವವರಿಗೆ ಹೊಸ ಹೆಸರಲ್ಲ. ಇದು ಸ್ಟಾರ್ಟರ್ ಆಗಿ ಎಲ್ಲರಿಗೂ ತುಂಬಾ ಇಷ್ಟವಾಗುವುದು. ಇದು ರುಚಿಕರವಾಗಿರುವುದರ ಜತೆಗೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ನಾನ್​​ವೆಜ್​​ ಅಂಥಾ ಅಂದುಕೊಳ್ತಿದ್ರೆ ಅದು ತಪ್ಪು. ಯಾಕಂದ್ರೆ ತರಕಾರಿ ಮತ್ತು ಸೊಪ್ಪಿನಿಂದ ಮಾಡುವ ಕಬಾಬ್​ ಇದು. ಹರ ಭಾರಾ ಕಬಾಬ್ ಮಾಡುವ ಸುಲಭ ವಿಧಾನ ಹೀಗೆದೆ.....

  • ಅಡುಗೆ ಎಣ್ಣೆ
  • ಫ್ರೆಂಚ್ ಬೀನ್ಸ್ 1/2 ಕಪ್
  • ಹಸಿರು ಬಟಾಣಿ 1/2 ಕಪ್
  • ಪಾಲಕ್ ಸೊಪ್ಪು
  • ಬೇಯಿಸಿದ ಆಲೂಗಡ್ಡೆ - 2
  • ಶುಂಠಿ
  • ಹಸಿರು ಮೆಣಸಿನಕಾಯಿ
  • ಜೋಳದ ಹಿಟ್ಟು - 3 ಚಮಚ
  • ಜೀರಿಗೆ - 1 ಟೀಸ್ಪೂನ್
  • ಧನಿಯಾ- 1 ಟೀಸ್ಪೂನ್
  • ಚಿಲ್ಲಿ ಪೌಡರ್​​- 1 ​ಟೀಸ್ಪೂನ್
  • ಗರಂ ಮಸಾಲ - 1 ಟೀಸ್ಪೂನ್
  • ಗೋಡಂಬಿ - ಒಂದು ಹಿಡಿ
  • ರುಚಿಗೆ ಉಪ್ಪು

ಹರ ಭಾರಾ ಕಬಾಬ್ ಮಾಡುವ ವಿಧಾನ:

  • ಹರ ಭಾರ ಕಬಾಬ್ ಮಾಡಲು ಮೊದಲು ಪಾಲಕ್ ಸೊಪ್ಪನ್ನು ತೊಳೆದು ಸ್ವಚ್ಛಗೊಳಿಸಿ. ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ಅದಕ್ಕೆ ಪಾಲಕ್ ಸೊಪ್ಪನ್ನು ಹಾಕಿ ಸ್ವಲ್ಪ ಸಮಯ ಕುದಿಸಿ. ಅದರ ನಂತರ ಪಾಲಕವನ್ನು ಸ್ಟ್ರೈನರ್‌ನಲ್ಲಿ ಹಾಕಿ ಇದರಿಂದ ನೀರು ಬರಿದಾಗುತ್ತದೆ. ಇದಾದ ಕೂಡಲೇ ಪಾಲಕ್ ಸೊಪ್ಪನ್ನು ತಣ್ಣೀರಿನಲ್ಲಿ ಹಾಕಿ ಒಂದು ನಿಮಿಷ ಇಟ್ಟು ನಂತರ ಹೊರತೆಗೆಯಿರಿ. ಬಳಿಕ ಆಲೂಗಡ್ಡೆ ಮತ್ತು ಬಟಾಣಿಗಳನ್ನು ಬೇಯಿಸಿಕೊಳ್ಳಿ.
  • ತಣ್ಣೀರಿನಿಂದ ಪಾಲಕವನ್ನು ತೆಗೆದ ನಂತರ ಸಣ್ಣಗೆ ಕತ್ತರಿಸಿ. ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಕಾಯಲು ಇಡಿ. ಎಣ್ಣೆ ಬಿಸಿಯಾದಾಗ ಅದಕ್ಕೆ ಬೇಯಿಸಿದ ಬಟಾಣಿ ಹಾಕಿ ಸ್ವಲ್ಪ ಸಮಯ ಹುರಿಯಿರಿ. ಇದರ ನಂತರ ಪಾಲಕ್, ರುಚಿಗೆ ಉಪ್ಪು ಸೇರಿಸಿ. ಪಾಲಕ್ ಮತ್ತು ಬಟಾಣಿಗಳಲ್ಲಿನ ನೀರು ಒಣಗುವವರೆಗೆ ಫ್ರೈ ಮಾಡಬೇಕು. ನಂತರ 1 ನಿಮಿಷ ಬೇಯಿಸಿ ನಂತರ ಗ್ಯಾಸ್ ಆಫ್ ಮಾಡಿ.
  • ಬಳಿಕ ಹಸಿರು ಮೆಣಸಿನಕಾಯಿ ಮತ್ತು ಶುಂಠಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಬೇಯಿಸಿದ ಆಲೂಗಡ್ಡೆ ತೆಗೆದುಕೊಂಡು ಮ್ಯಾಶ್ ಮಾಡಿ. ಹಸಿರು ಮೆಣಸಿನಕಾಯಿ, ಶುಂಠಿ, ಗರಂ ಮಸಾಲಾ, .ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣಕ್ಕೆ ಪಾಲಕ್ ಮತ್ತು ಬಟಾಣಿ ಸೇರಿಸಿದ ಬಳಿಕ ಎಲ್ಲವನ್ನು ಮ್ಯಾಶ್ ಮಾಡಿ.
  • ಈಗ ಈ ಮಿಶ್ರಣವನ್ನು ನಿಮ್ಮ ಅಂಗೈಗಳ ಮೇಲೆ ತೆಗೆದುಕೊಂಡು, ಉಂಡೆಗಳನ್ನಾಗಿ ಮಾಡಿ ಕಬಾಬ್​ ಆಕಾರವಾಗಿ ಮಾಡಿ. ಕಾದಿರುವ ಅಡುಗೆ ಎಣ್ಣೆಯಲ್ಲಿ ಕರಿದರೆ ರುಚಿಯಾದ ಕಬಾಬ್​ ಸವಿಯಲು ರೆಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net