

ಚಿಯಾ ಸೀಡ್ಸ್ಗಳಲ್ಲಿ ಅಧಿಕ ಪೋಷಕಾಂಶಗಳು ಅಡಗಿದೆ. ಇದನ್ನು ದಿನನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಿಸುತ್ತದೆ ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಟೀ ಚಮಚ ಚಿಯಾ ಸೀಡ್ಸ್ ಸುಮಾರು 5.6 ಗ್ರಾಂ ಪ್ರೋಟೀನ್, 11 ಗ್ರಾಂ ಫೈಬರ್, 131 ಕ್ಯಾಲೋರಿಗಳು ಮತ್ತು 8 ಗ್ರಾಂ ಕೊಬ್ಬನ್ನು ಹೊಂದಿರುತ್ತವೆ. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಸೇರಿದಂತೆ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಚಿಯಾ ಬೀಜಗಳನ್ನು ಸೇವಿಸಲು ಹಲವು ಉತ್ತಮ ಮಾರ್ಗಗಳಿವೆ. ಅದರಲ್ಲಿ ಕೆಲವೊಂದನ್ನು ಇಲ್ಲಿ ಹೇಳಲಾಗಿದೆ.