ಕೂಲ್​ ಕೂಲ್ ಆಗಿರುವ​​ ತೆಂಗಿನಕಾಯಿ ಮಿಲ್ಕ್‌ಶೇಕ್ ಮಾಡುವ ವಿಧಾನ ನಿಮಗಾಗಿ…

Coconut Milkshake Recipe
Published on

ಬೆಂಗಳೂರು: ತೆಂಗಿನಕಾಯಿ ಹೆಸರು ಹೇಳಿದಾಗ.. ಹಲವು ಬಗೆಯ ಆಹಾರ ಪದಾರ್ಥಗಳು ನೆನಪಾಗುತ್ತವೆ. ತೆಂಗಿನಕಾಯಿ ಲಡ್ಡುಗಳು, ತೆಂಗಿನಕಾಯಿ ಚಟ್ನಿ, ಹೀಗೆ ತೆಂಗಿನಕಾಯಿಯಿಂದ ಮಾಡಿದ ವಿವಿಧ ರೀತಿಯ ಆಹಾರವನ್ನು ತಯಾರಿಸಲಾಗುತ್ತದೆ. ಸಾಂಬಾರಿನಲ್ಲಿ ಕೊಬ್ಬರಿಯನ್ನೂ ಸ್ವಲ್ಪ ಬಳಸಿದರೆ ಅದರ ರುಚಿಯೇ ಬೇರೆ. ತೆಂಗಿನಕಾಯಿಯನ್ನು ಅಡುಗೆಯಲ್ಲಿ ಮಾತ್ರ ಬಳಸಲಾಗುವುದಿಲ್ಲ ಮಿಲ್ಕ್‌ಶೇಕ್ ಕೂಡಾ ಮಾಡುತ್ತಾರೆ. ಬನ್ನಿ ನಾವು ಇಂದು ತೆಂಗಿನಕಾಯಿ ಮಿಲ್ಕ್‌ಶೇಕ್ ಹೇಗೆ ಮಾಡುವುದು ಎನ್ನುವುದನ್ನು ನೋಡೋಣ...

ಬೇಕಾಗುವ ಸಾಮಾಗ್ರಿಗಳು:

  • ತೆಂಗಿನ ನೀರು - 1 ಗ್ಲಾಸ್
  • ಸಕ್ಕರೆ - 2 ಚಮಚ
  •  ಐಸ್ ಕ್ಯೂಬ್​
  • ತಣ್ಣಗಾದ ಹಾಲು - 1 ಗ್ಲಾಸ್
  • ತೆಂಗಿನಕಾಯಿ - 1 ಕಪ್

* ನಂತರ ಹಾಲು ಮತ್ತು ತೆಂಗಿನ ನೀರು ಹಾಗೂ ಐಸ್ ಕ್ಯೂಬ್ ಸೇರಿಸಿ ಮತ್ತು 3 ನಿಮಿಷಗಳ ಕಾಲ ಮಿಶ್ರಣ ಮಾಡಿ. ಅಷ್ಟೆ, ತೆಂಗಿನ ಹಾಲು ಶೇಕ್ ಸಿದ್ಧವಾಗಿದೆ. ಈ ಶೇಕ್ ಅನ್ನು ಗ್ಲಾಸ್‌ನಲ್ಲಿ ಸುರಿಯಿರಿದು ಕುಡಿಯಿರಿ. ಬೇಕಾದಲ್ಲಿ ಡ್ರೈ ಫ್ರೂಟ್ಸ್​​ ಸೇರಿಸಿಕೊಳ್ಳಿ.

* ಒಂದು ಜಾರ್‌ನಲ್ಲಿ ಸಕ್ಕರೆ ಮತ್ತು ತೆಂಗಿನಕಾಯಿ ತುಂಡುಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಮಾಡುವ ವಿಧಾನ:

* ಮಿಲ್ಕ್ ಶೇಕ್​ ಸ್ವಲ್ಪ ತಣ್ಣಗಾಗಲು ಬಯಸಿದರೆ, ನೀವು ಐಸ್ ತುಂಡುಗಳನ್ನು ಸೇರಿಸಬಹುದು. ಈ ತೆಂಗಿನ ಹಾಲು ಶೇಕ್ ದೇಹದ ಉಷ್ಣತೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net