ನಿಮ್ಮ ಅಡುಗೆ ಮನೆ ಗೋಡೆ ಮೇಲೆ ಎಣ್ಣೆಯ ಜಿಡ್ಡಿನ ಹಠಮಾರಿ ಕಲೆಗಳಿವೆಯೇ? ಹಾಗಿದ್ರೆ ಈ ಟಿಪ್ಸ್​​ ನಿಮಗಾಗಿ..

Grease Off Your Kitchen Walls
Published on

ಬೆಂಗಳೂರು: ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಹಿಳೆಯರಿಗೆ ತಲೆನೋವಾಗಿದೆ. ಎಣ್ಣೆಯ ಕಲೆಗಳು ಮತ್ತು ಇತರ ಕಲೆಗಳು ಗೋಡೆಯ ಮೇಲೆ, ಒಲೆಯ ಮೇಲೆ ಬಿಳುತ್ತವೆ. ತಕ್ಷಣ ಎಣ್ಣೆಯುಕ್ತ ಕಲೆ ಹೋಗಲಾಡಿಸಲು ಮಹಿಳೆಯರು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಈ ಸಮಸ್ಯೆ ನಿಮ್ಮ ಮನಯಲ್ಲೂ ಇದ್ದರೆ ನಾವು ಇಂದು ನಿಮಗೆ ಕೆಲವು ಸಲಹೆ ನೀಡುತ್ತೇವೆ..

ನಿಂಬೆ ಮತ್ತು ವಿನೆಗರ್ ಅನ್ನು ಬೆರೆಸಿ ಮಿಶ್ರಣವನ್ನು ಮಾಡಿ. ಬೆಚ್ಚಗಿನ ನೀರಿಗೆ ಹಾಕಿ ಈ ನೀರಿನಿಂದ ಸ್ವಚ್ಛವಾಗಿ ತೊಳೆದರೆ ಕಲೆ ಮಾಯವಾಗಿ ಹೊಳೆಯುತ್ತದೆ.

ಅಡುಗೆ ಮನೆಯ ಗೋಡೆಯಲ್ಲಿ ಎಣ್ಣೆ ಕಲೆಗಳಿದ್ದರೆ ಉಪ್ಪು ನೀರಿನಿಂದ ತೊಳೆದರೆ ಕಲೆ ನಿವಾರಣೆಯಾಗುತ್ತದೆ.ಅಡಿಗೆ ಸೋಡಾ ಅಡಿಗೆ ಗೋಡೆಯ ಕಲೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. 

 ಟೂತ್ ಪೇಸ್ಟ್ ಅನ್ನು ಎಣ್ಣೆ ಕಲೆ ಇರುವ ಜಾಗಕ್ಕೆ ಹಚ್ಚಿ ಐದು ನಿಮಿಷ ಹಾಗೆಯೇ ಬಿಡಿ. ಆ ನಂತರ ತೊಳೆದರೆ ಕಲೆಗಳು ಮಾಯವಾಗುತ್ತವೆ.

ಲಿಕ್ವಿಡ್ ಡಿಶ್ ವಾಶ್ ಅನ್ನು ಗೋಡೆಯ ಮೇಲೆ ಸಿಂಪಡಿಸಿ ಮತ್ತು ಒಂದು ಗಂಟೆ ಬಿಡಿ. ಆ ನಂತರ ಬಟ್ಟೆಗೆ ಡಿಶ್ ವಾಶ್ ಹಾಕಿ ಒರೆಸಿದರೆ ಕಲೆಗಳೆಲ್ಲ ಮಾಯವಾಗುತ್ತವೆ.

ಬಿಸಿ ನೀರಿಗೆ ಸೋಪ್ ನೀರನ್ನು ಹಾಕಿದರೆ ಅದರಿಂದ ಹಠಮಾರಿ ಜಿಡ್ಡನ್ನು ಕೂಡ ನಿವಾರಣೆ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net