

ಬೆಂಗಳೂರು: ಆಹಾರ ಸೇವನೆ ಮಾಡುವ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ತಂದುಕೊಂಡರೆ ಆಗುವ ಆರೋಗ್ಯ ಪ್ರಯೋಜನಗಳು ಅಷ್ಟಿಷ್ಟಲ್ಲ. ನಾವು ಆಹಾರ ತಿನ್ನುವಾಗ ಈಗಿನ ನಮ್ಮ ಜೀವನ ಕ್ರಮವನ್ನು ನಮ್ಮ ಅನುಕೂಲಕ್ಕೆ ಬೇಕಾದಂತೆ ಬಳಸಿಕೊಳ್ಳಲು ಮುಂದಾಗುತ್ತಿದ್ದೇವೆ. ಕೈಯಲ್ಲಿ ರಿಮೋಟ್ ಹಿಡಿದುಕೊಂಡು ಟಿವಿ ಮುಂದೆ ಸೋಫಾ ಮೇಲೆ ಕುಳಿತುಕೊಂಡು ತಿನ್ನುತ್ತೇವೆ. ಆದರೆ ನಾವು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಅನೇಕ ಲಾಭಗಳಿವೆ. ಈ ಕುರಿತಾಗಿ ನಾವು ಇಂದು ತಿಳಿದುಕೊಳ್ಳೋಣ...
ನೆಲದ ಮೇಲೆ ಕುಳಿತು ಕಾಲುಗಳನ್ನು ಮಡಚಿ ಕುಳಿತುಕೊಳ್ಳುವುದನ್ನು ಸುಖಾಸನ ಎನ್ನುತ್ತಾರೆ. ಹೀಗೆ ಕುಳಿತುಕೊಳ್ಳುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
ನೆಲದ ಮೇಲೆ ಕುಳಿತು ಕಾಲುಗಳನ್ನು ಮಡಚಿ ಕುಳಿತುಕೊಳ್ಳುವ ಭಂಗಿಯು ನೈಸರ್ಗಿಕವಾಗಿ ಕಿಬ್ಬೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.
ಸುಖಾಸನದಲ್ಲಿ ಕುಳಿತುಕೊಳ್ಳುವುದರಿಂದ ನರಗಳಿಗೆ ಬೆಂಬಲವೂ ಸಿಗುತ್ತದೆ. ಇದು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ನಿಯಂತ್ರಿಸುತ್ತದೆ. ಈ ರೀತಿ ಕುಳಿತುಕೊಳ್ಳುವುದು ಶಾಂತ ಮತ್ತು ವಿಶ್ರಾಂತಿ. ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ.
ನೆಲದ ಮೇಲೆ ಕಾಲು ಚಾಚಿ ಕುಳಿತು ತೃಪ್ತಿಕರವಾಗಿ ಊಟ ಮಾಡುತ್ತಾರೆ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಇಂದು ನಾವು ಸೋಫಾ ಮೇಲೆ ಕುಳಿತು ಟಿವಿ ನೋಡುತ್ತಾ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಹಾಗೂ ರಾತ್ರಿಯ ಡಿನ್ನರ್ ಸಹ ಮಾಡಿ ಮುಗಿಸುತ್ತೇವೆ. ಆಹಾರ ತಜ್ಞರ ಪ್ರಕಾರ ಇದು ಒಳ್ಳೆಯ ಪ್ರಕ್ರಿಯೆ ಅಲ್ಲವೇ ಅಲ್ಲ.
ಈ ಭಂಗಿಯಲ್ಲಿ ಮೊಣಕಾಲುಗಳಿಗೂ ಉತ್ತಮ ವ್ಯಾಯಾಮವಾಗುತ್ತದೆ. ಕೀಲು ನೋವಿನಿಂದ ಉಪಶಮನ ದೊರುಕುತ್ತದೆ. ಅಷ್ಟೇ ಅಲ್ಲದೆ, ನಮ್ಮ ದೇಹದ ಚಲನೆ, ಹೊಂದಿಕೊಳ್ಳುವ ಕ್ಷಮತೆ, ದೃಢತೆಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಆಸನಕ್ಕೆ ಇದೆ.