Coffee face pack for glowing skin: ಮೆಟ್ರೋ ನಗರದಲ್ಲಿ ಸಾಮಾನ್ಯವಾಗಿ ಕಾಡುವ ಧೂಳು, ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು, ಸೂರ್ಯನ ಪ್ರಖರ ಶಾಖ ಮುಖದ ಮೇಲೆ ಬಿದ್ದು ಕಪ್ಪು ಕಲೆಗಳು ಮೂಡುತ್ತದೆ. ಅಲ್ಲದೆ, ಬ್ಲಾಕ್ ಹೆಡ್ಸ್ ಕಾಣಿಸಿಕೊಳ್ಳುತ್ತದೆ. ಮುಖ ಟ್ಯಾನ್ ಆಗುತ್ತದೆ. ಇಂತಹ ಸಮಯದಲ್ಲಿ ಹಲವರು ಬ್ಯೂಟಿಪಾರ್ಲರ್ಗೆ ತೆರಳಿ ಸಾಕಷ್ಟು ಹಣ ಖರ್ಚು ಮಾಡಿ ಫೇಷಿಯಲ್ ಮಾಡಿಸಿಕೊಳ್ಳುತ್ತಾರೆ. ಆದರೆ, ಎರಡು ರೂಪಾಯಿ ಇನ್ಸ್ಟ್ಯಾಂಟ್ ಕಾಫಿ ಪೌಡರ್ನಲ್ಲಿ ನೀವು ನಿಮ್ಮ ಮುಖ ಗ್ಲೋ ಆಗುವಂತೆ ನೋಡಿಕೊಳ್ಳಬಹುದು.