Late-night cravings Healthy midnight snacks: ತಡರಾತ್ರಿ ಕೆಲಸ ಮುಗಿಸಿ ಊಟ ಮಾಡುವುದು, ಮಲಗಲು ಹೋದಾಗ ಏನಾದರೂ ತಿನ್ನಬೇಕು ಎಂದೆನಿಸುವುದು, ಹಸಿವಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಆದರೆ, ಈ ಸಮಯದಲ್ಲಿ ಚಿಪ್ಸ್, ಪಿಜ್ಜಾ, ಬರ್ಗರ್ನಂತಹ ಜಿಡ್ಡು ಪದಾರ್ಥ ತಿನ್ನೋದು ಅಪಾಯಕಾರಿ ಎನ್ನುತ್ತಾರೆ ತಜ್ಞರು. ಇದರಿಂದ ದೇಹದಲ್ಲಿ ಕೊಬ್ಬು, ಸಕ್ಕರೆ ಮತ್ತು ಉಪ್ಪಿನಂಶ ಹೆಚ್ಚಿರುವುದರಿಂದ ಅಸಿಡಿಟಿ, ಹೊಟ್ಟೆ ಉಬ್ಬರ ಮತ್ತು ತೂಕ ಹೆಚ್ಚಾಗುವಂತೆ ಮಾಡುತ್ತದೆ.