ನೀವು ಬಳಸುವ ದೇಸಿ ತುಪ್ಪ ಶುದ್ಧವೋ.. ಕಲಬೆರಕೆಯೋ?; ಪರಿಶೀಲಿಸಲು ಇಲ್ಲಿದೆ ಸಿಂಪಲ್ಸ್​​​ ವಿಧಾನ

Untitled-design-2
Published on

ಎಲ್ಲರ ಅಡುಗೆಮನೆಯಲ್ಲಿ ಕಾಣಸಿಗುವ ವಸ್ತುಗಳಲ್ಲಿ ತುಪ್ಪವೂ ಒಂದು. ಸಿಹಿ ಪದಾರ್ಥ, ಊಟದಲ್ಲಿ, ಹೀಗೆ ಹೆಚ್ಚಿನ ಖಾದ್ಯದಲ್ಲಿ ತುಪ್ಪ ಬಳಸುವುದು ಸಾಮಾನ್ಯವಾಗಿದೆ. ತುಪ್ಪವನ್ನು ಆರೋಗ್ಯಕರ ಕೊಬ್ಬು ಎಂದು ಪರಿಗಣಿಸಲಾಗಿದೆ. ಆದರೆ ದೇಸಿ ತುಪ್ಪಕ್ಕೆ ರಾಸಾಯನಿಕಗಳನ್ನು ಬಳಸಿ ಕಲಬೆರಕೆ ಮಾಡುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ಅದರಲ್ಲಿ ಬಳಸು ಕಲಬೆರಕೆ ವಸ್ತುಗಳು ನಮ್ಮ ಆರೋಗ್ಯಕ್ಕೆ ಮಾರಕವಾಗುತ್ತದೆ. ಆದ್ದರಿಂದ ದೇಸಿ ತುಪ್ಪದ ಶುದ್ಧತೆಯನ್ನು ಪರಿಶೀಲಿಸುವುದು ಬಹಳ ಮುಖ್ಯವಾಗಿದೆ.

ನೀವು ಕೊಂಡುಕೊಳ್ಳುವ ತುಪ್ಪ ಶುದ್ಧವೋ.. ಕಲಬೆರಕೆಯೋ ಎಂದು ಹೇಗೆ ತಿಳಿಯುವುದು ಎಂಬ ಆಲೋಸಿಸುತ್ತಿದ್ದೀರಾ... ಚಿಂತೆ ಬೇಡ ನಿಮಗಾಗಿಯೇ ತುಪ್ಪ ಪರಿಶುದ್ಧತೆ ತಿಳಿಯುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಪ್ರಕಾರ, ದೇಸಿ ತುಪ್ಪದಲ್ಲಿ ಕಲ್ಲಿದ್ದಲು ಟಾರ್ ಡೈ ಕಲಬೆರಕೆ ಮಾಡುತ್ತಾರೆ ಎಂದು ತಿಳಿಸಿದೆ. ಅದನ್ನು ನೀವು ಸುಲಭವಾಗಿ ಗುರುತಿಸಲು ಸಹಾಯವಾಗಲೆಂದೆ ಈ ವಿಧಾನವನ್ನು ತಿಳಿಸಿದೆ. ಇದು ಕೆಲವೇ ಸೆಕೆಂಡುಗಳಲ್ಲಿ ತುಪ್ಪದ ನಿಜವಾದ ಬಣ್ಣವನ್ನು ತೋರಿಸುತ್ತದೆ.

ನಕಲಿ ತುಪ್ಪ ಗುರುತಿಸುವ ವಿಧಾನ:

  • ಟೆಸ್ಟ್ ಟ್ಯೂಬ್ ಅಥವಾ ಗಾಜಿನ ಬೌಲ್ ತೆಗೆದುಕೊಳ್ಳಿ.
  • ಅದರಲ್ಲಿ 2 ಮಿಲಿ ಕರಗಿದ ದೇಸಿ ತುಪ್ಪವನ್ನು ಸೇರಿಸಿ.
  • ಅದರೊಳಗೆ 5 ಮಿಲಿ ಕೇಂದ್ರೀಕೃತ HCl ದ್ರಾವಣವನ್ನು ಸೇರಿಸಿ.
  • ಮಿಶ್ರಣವನ್ನು ಚೆನ್ನಾಗಿ ಅಲ್ಲಾಡಿಸಿ ಮತ್ತು ಸ್ವಲ್ಪ ಸಮಯ ಬಿಡಿ .
  • ಶುದ್ಧ ತುಪ್ಪದಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.
  • ಆದರೆ ಕಲ್ಲಿದ್ದಲು ಟಾರ್ ಬಣ್ಣದೊಂದಿಗೆ ಕಲಬೆರಕೆ ಮಾಡಿದ ತುಪ್ಪದ ಬಣ್ಣವು ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಕಲ್ಲಿದ್ದಲು ಟಾರ್ ಡೈ ಒಂದು ಕೃತಕ ಬಣ್ಣವನ್ನು ಬರಿಸುವ ಸಲುವಾಗಿ ಬಳಸಲಾಗುತ್ತದೆ. ಇದನ್ನು ಟೊಲುಯೆನ್, ಕ್ಸೈಲೀನ್ ಮತ್ತು ಬೆಂಜೀನ್‌ನಂತಹ ಅನೇಕ ಹೈಡ್ರೋಕಾರ್ಬನ್‌ಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಇದು ಕಲ್ಲಿದ್ದಲು ಅನಿಲ ಅಥವಾ ಕಲ್ಲಿದ್ದಲು ಗಣಿಗಾರಿಕೆಯ ಉಪಉತ್ಪನ್ನವಾಗಿದೆ. ಈ ಹೈಡ್ರೋಕಾರ್ಬನ್‌ಗಳು HCL ನೊಂದಿಗೆ ಪ್ರತಿಕ್ರಿಯಿಸಿದಾಗ ಅವು ಕೆಂಪು ಬಣ್ಣಕ್ಕೆ ತಿರುಗುತ್ತದೆ.

ದೇಸಿ ತುಪ್ಪವನ್ನು ಹೊರತುಪಡಿಸಿ ಕಲ್ಲಿದ್ದಲು ಟಾರ್ ಡೈ ಇತರ ಅನೇಕ ವಸ್ತುಗಳಿಗೆ ಸೇರಿಸಿ ಕಲಬೆರಕೆ ಮಾಡಲಾಗುತ್ತದೆ. ಇದಕ್ಕೆ ಉದಾಹರಣೆ ಹೇಳುವುದಾದರೆ ಮಿಠಾಯಿ. ಈ ಕಲಬೆರಕೆಯಾದ ವಸ್ತುಗಳನ್ನು ಸೇವಿಸುವುದರಿಂದ ಮೆದುಳಿಗೆ ಹಾನಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರಿಂದ ಜ್ಞಾಪಕ ಶಕ್ತಿ ಮತ್ತು ಕಲಿಕೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಅಲರ್ಜಿಗಳು ಮತ್ತು ಹೊಟ್ಟೆಯ ಸಮಸ್ಯೆಗಳು ಸಹ ಸಂಭವಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net