

ಸರಿಯಾದ ಪ್ರಮಾಣದ ನಿದ್ರೆಯು ಮನಸ್ಸನ್ನು ಆರೋಗ್ಯವಾಗಿಡುವುದು ಮಾತ್ರವಲ್ಲದೆ ದೈಹಿಕವಾಗಿಯೂ ಆರೋಗ್ಯವಾಗಿರಲು ಸಹಕಾರಿಯಾಗಿದೆ. ಆದ್ದರಿಂದ ಯಾರಿಗೆ ಎಷ್ಟು ನಿದ್ರೆ ಬೇಕು ಎಂಬ ಮಾಹಿತಿ ಎಲ್ಲರಿಗೂ ತಿಳಿದಿರುವುದಿಲ್ಲ. ವಾಸ್ತವವಾಗಿ ಒಬ್ಬ ವ್ಯಕ್ತಿಯು ಎಷ್ಟು ಗಂಟೆಗಳ ಕಾಲ ಮಲಗಬೇಕು ಎಂಬುದು ಅವನ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ವಯಸ್ಸಿಗೆ ಅನುಗುಣವಾಗಿ ನಿದ್ರೆ ಮಾಡಬೇಕು. ಅದರಲ್ಲೂ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಾಲ ನಿದ್ರೆ ಮಾಡಬೇಕು ಎಂಬುದು ನಿಮಗೆ ತಿಳಿದಿದೆಯೇ? ಯಾವ ವಯಸ್ಸಿನವರು ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡಬೇಕು? ಇಲ್ಲದಿದ್ದರೆ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇದನ್ನು ಓದಿ: ಯಾವ ಸಮಯದಲ್ಲಿ ಸಕ್ಕರೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು! ನಿಮಗೆ ತಿಳಿದಿರದ ಮಾಹಿತಿ ಇಲ್ಲಿ ಒಬ್ಬ ವ್ಯಕ್ತಿ ವಯಸ್ಸಿಗೆ ಅನುಗುಣವಾಗಿ ಎಷ್ಟು ಗಂಟೆ ನಿದ್ರೆ ಮಾಡಬೇಕು?:
ನ್ಯಾಷನಲ್ ಸ್ಲೀಪ್ ಫೌಂಡೇಶನ್‌ನ ಸಂಶೋಧನೆಯ ಪ್ರಕಾರ, ಹದಿಹರೆಯದ ಹುಡುಗಿಯರು 8 ರಿಂದ 10 ಗಂಟೆಗಳ ನಿದ್ದೆ ಮಾಡಬೇಕಾಗುತ್ತದೆ. ಆದರೆ 24 ರಿಂದ 64 ವರ್ಷ ವಯಸ್ಸಿನ ಮಹಿಳೆಯರು ದಿನಕ್ಕೆ ಏಳು ಗಂಟೆಗಳ ನಿದ್ದೆ ಮಾಡಬೇಕು. ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ನಿದ್ರೆ ಬೇಕು ಎಂದು ಸಂಶೋಧನೆಯೊಂದು ತಿಳಿಸಿದೆ. ಪ್ರತಿಯೊಬ್ಬ ಮಹಿಳೆ ಪುರುಷನಿಗಿಂತ 20 ನಿಮಿಷ ಹೆಚ್ಚು ನಿದ್ದೆ ಮಾಡಬೇಕು.
ಒಂದು ವೇಳೆ ನಿದ್ರೆ ಬರದಿದ್ದರೆ ಅದು ಅನಾರೋಗ್ಯಕ್ಕೆ ಕಾರಣವಾಗಬಹುದು. ನಿದ್ರೆಯ ಕೊರತೆಯು ಮಾನಸಿಕವಾಗಿ ತೊಂದರೆಗೊಳಿಸುವುದಲ್ಲದೆ, ಹಾರ್ಮೋನುಗಳ ಆರೋಗ್ಯ, ದೇಹದ ತೂಕ, ರಕ್ತದೊತ್ತಡ ಮತ್ತು ಹೃದಯದ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತದೆ.