ಅಪ್ಪಿತಪ್ಪಿಯೂ ಈ ಸಮಸ್ಯೆ ಇರುವವರು ಪೀನಟ್​ ಬಟರ್​ ತಿನ್ನಬೇಡಿ; ಅಪಾಯ ತಪ್ಪಿದ್ದಲ್ಲ

Untitled-design-75
Published on

ಪೀನಟ್ ಬಟರ್ ಅಂದರೆ ಕಡಲೆಕಾಯಿ ಬೆಣ್ಣೆ, ಇದರ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ. ಇದರಲ್ಲಿರುವ ಪೋಷಕಾಂಶಗಳು ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಸಹಕಾರಿ ಎಂದು ಹೇಳುತ್ತಾರೆ. ಇದು ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್​, ಡಯೆಟರಿ ಫೈಬರ್​, ವಿಟಮಿನ್​ ಬಿ6, ಪೋಲೇಟ್​, ಮೆಗ್ನೀಸಿಯಮ್​ ಅಂಶಗಳನ್ನು ಒಳಗೊಂಡಿದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ತುಂಬಾ ಉಪಯುಕ್ತವಾಗಿದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಆದರೆ ಇನ್ನೂ ಕೆಲವರಿಗೆ ಇದರ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಯಾರೆಲ್ಲಾ ಪೀನಟ್​​ ಬಟರ್​ನಿಂದ ದೂರವಿರಬೇಕು ಎಂಬುದರ ಮಾಹಿತಿ ಇಲ್ಲಿದೆ.

  • ಅಲರ್ಜಿ ಇರುವವರು: ಚರ್ಮ ಮತ್ತು ಆಹಾರಕ್ಕೆ ಸಂಬಂಧಿಸಿದ ಅಲರ್ಜಿ ಇರುವವರು ಕಡಲೆಕಾಯಿ ಬೆಣ್ಣೆಯಿಂದ ದೂರವಿರಿ. ಇದನ್ನು ಸೇವಿಸುವುದರಿಂದ ಚರ್ಮದ ದದ್ದುಗಳು, ತುರಿಕೆ, ಉಸಿರಾಟದ ತೊಂದರೆ ಉಂಟಾಗಬಹುದು.
  • ಜೀರ್ಣಕಾರಿ ಸಮಸ್ಯೆ ಇರುವವರು: ಗ್ಯಾಸ್ ಅಥವಾ ಇತರ ಜೀರ್ಣಕಾರಿ ಸಮಸ್ಯೆಗಳನ್ನು ಹೊಂದಿರುವವರು ಕಡಲೆಕಾಯಿ ಬೆಣ್ಣೆಯನ್ನು ಸೇವಿಸುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ಗ್ಯಾಸ್, ಉಬ್ಬುವುದು ಮತ್ತು ಹೊಟ್ಟೆ ನೋವು ಸಂಭವಿಸಬಹುದು.
  • ಅಧಿಕ ರಕ್ತದೊತ್ತಡ ಇರುವವರು: ಕಡಲೆಕಾಯಿ ಬೆಣ್ಣೆಯಲ್ಲಿ ಸೋಡಿಯಂ ಅಧಿಕವಾಗಿದ್ದು, ಇದು ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೆ ಹಾನಿಕಾರಕವಾಗಿದೆ. ಅಧಿಕ ಸೋಡಿಯಂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
  • ಮೂತ್ರಪಿಂಡದ ಸಮಸ್ಯೆ ಇರುವವರು: ಮೂತ್ರಪಿಂಡದ ತೊಂದರೆ ಇರುವವರು ಪೊಟ್ಯಾಸಿಯಮ್ ಮತ್ತು ರಂಜಕವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಕಡಲೆಕಾಯಿ ಬೆಣ್ಣೆಯು ಈ ಎರಡೂ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಇದು ಮೂತ್ರಪಿಂಡಗಳಿಗೆ ಹೆಚ್ಚು ಹಾನಿ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net