'ಅಣಬೆ' ಬಗ್ಗೆ ನಿಮಗೆಷ್ಟು ಗೊತ್ತು.? ಇದರಿಂದ ಆರೋಗ್ಯದ ಲಾಭಗಳಿದ್ದರೂ ತಿನ್ನುವಾಗ ಜಾಗ್ರತೆ ಎನ್ನುತ್ತಾರೆ ತಜ್ಞರು| Mushroom

Mushroom
Published on

Mushroom; ಅಣಬೆಗಳು (ಮಶ್ರೂಮ್‌ಗಳು) ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತವೆ. ಅಣಬೆಗಳು ಫೈಬರ್, ಪೊಟ್ಯಾಸಿಯಮ್, ವಿಟಮಿನ್ ಸಿ ನೀಡುವ ಜೊತೆ ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ. ಇದು ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೂ ಸಹ ಇವುಗಳನ್ನು ತಿನ್ನುವಾಗ ಎಚ್ಚರ ವಹಿಸಬೇಕು ಎಂದು ತಜ್ಞರು ಹೇಳುತ್ತಾರೆ.

ಅಣಬೆಯ ಪ್ರಯೋಜನ:

ಪೌಷ್ಟಿಕಾಂಶ: ಅಣಬೆಗಳು ವಿಟಮಿನ್‌ಗಳಾದ B (ರಿಬೋಫ್ಲಾವಿನ್, ನಿಯಾಸಿನ್), D, ಮತ್ತು ಖನಿಜಗಳಾದ ಸೆಲೆನಿಯಮ್, ಪೊಟ್ಯಾಸಿಯಮ್, ಮತ್ತು ಫಾಸ್ಫರಸ್‌ನಂತಹ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ.

ರೋಗನಿರೋಧಕ ಶಕ್ತಿ ವೃದ್ಧಿ: ಅಣಬೆಗಳಲ್ಲಿರುವ ಬೀಟಾ-ಗ್ಲೂಕನ್‌ಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇದರಿಂದ ರೋಗಗಳ ವಿರುದ್ಧ ದೇಹವು ಹೋರಾಡಲು ಸಹಾಯವಾಗುತ್ತದೆ.

ಹೃದಯದ ಆರೋಗ್ಯ: ಅಣಬೆಗಳು ಕಡಿಮೆ ಕೊಬ್ಬಿನಾಂಶವನ್ನು ಹೊಂದಿದ್ದು, ಫೈಬರ್ ಮತ್ತು ಪೊಟ್ಯಾಸಿಯಮ್‌ನಿಂದ ಕೂಡಿರುತ್ತವೆ. ಇವು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗಿವೆ.

ತೂಕ ನಿರ್ವಹಣೆ: ಕಡಿಮೆ ಕ್ಯಾಲೊರಿಗಳು ಮತ್ತು ಹೆಚ್ಚಿನ ಫೈಬರ್‌ನಿಂದಾಗಿ ಅಣಬೆಗಳು ತೂಕ ಇಳಿಕೆಗೆ ಸಹಾಯಕವಾಗಿವೆ.

ಮಧುಮೇಹ ನಿಯಂತ್ರಣ: ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಅಣಬೆಗಳು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ಕರುಳಿನ ಆರೋಗ್ಯ: ಫೈಬರ್ ಮತ್ತು ಪ್ರಿಬಯಾಟಿಕ್‌ಗಳು ಕರುಳಿನ ಆರೋಗ್ಯವನ್ನು ಸುಧಾರಿ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತವೆ.

ಅಣಬೆ ತಿನ್ನುವ ಮುನ್ನ ಗಮನಿಸಬೇಕಾದ ಅಂಶಗಳು

ವಿಷಕಾರಿ ಅಣಬೆಗಳು: ಕೆಲವು ಕಾಡಿನ ಅಣಬೆಗಳು ವಿಷಕಾರಿಯಾಗಿರುತ್ತವೆ. ಇವುಗಳನ್ನು ತಿಂದರೆ ಜೀರ್ಣಾಂಗ ವ್ಯವಸ್ಥೆಯ ತೊಂದರೆ, ಯಕೃತ್ ವೈಫಲ್ಯ, ಅಥವಾ ಸಾವಿಗೂ ಕಾರಣವಾಗಬಹುದು.

ಅಲರ್ಜಿಗಳು: ಕೆಲವರಿಗೆ ಅಣಬೆಗಳಿಂದ ಅಲರ್ಜಿಯ ರೋಗಲಕ್ಷಣಗಳು (ಚರ್ಮದ ಕೆರೆತ, ಉಸಿರಾಟದ ತೊಂದರೆ) ಉಂಟಾಗಬಹುದು.

(ಏಜೆನ್ಸೀಸ್)

ದೂಷಿತ ಅಣಬೆಗಳು: ಸರಿಯಾಗಿ ಸಂಗ್ರಹಿಸದಿದ್ದರೆ ಅಥವಾ ಕಲುಷಿತವಾದರೆ, ಅಣಬೆಗಳು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳಿಗೆ ಒಳಗಾಗುತ್ತವೆ, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net