ಮಗು ಜನಿಸಿದ ಎಷ್ಟು ತಿಂಗಳ ಬಳಿಕ ಉಪ್ಪಿನ ಆಹಾರ ನೀಡಬೇಕು?; ತಜ್ಞರು ಹೇಳೊದೇನು? | Salty Food

dk-2025-04-16t203416445-67ffc6f904765
Published on

Salty Food : ಹುಟ್ಟಿದ ಮಗುವನ್ನು ದೊಡ್ಡದಾಗಿ ಬೆಳೆಯುವವರಿಗೂ ನೋಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಬಟ್ಟೆ ಆಟಿಕೆ ಸೇರಿದಂತೆ ಆರೋಗ್ಯ ಸೇರಿದಂತೆ ಚಿಂತನೆ ಮಾಡಬೇಕು. ಅಲ್ಲದೆ, ಮಗುವಿಗೆ ಏನು ಬೇಕು, ಏನು ಬೇಡಾ ಎಂದು ಸ್ವತ ತಾಯಂದಿರೂ ಕೂಡ ಕನ್ಫ್ಯೂಸ್​ ಆಗಿ ಇರ್ತಾರೆ.

ಅಂತದ್ರದಲ್ಲಿ ಮಗುವಿನ ಆರೋಗ್ಯದ ದೃಷ್ಠಿಯಿಂದ ಮಕ್ಕಳು ಜನಿಸಿದ ಎಷ್ಟು ತಿಂಗಳ ನಂತರ ಅವರ ಆಹಾರದಲ್ಲಿ ಉಪ್ಪನ್ನು ಸೇರಿಸಬೇಕು ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ ಮತ್ತು ನೀವು ಹೊಸ ತಾಯಿಯಾಗಿದ್ದರೆ ಇದನ್ನು ತಿಳಿದುಕೊಳ್ಳಿ, ಏಕೆಂದರೆ 99% ಜನರು ಈ ಪ್ರಮುಖ ವಿಷಯವನ್ನು ನಿರ್ಲಕ್ಷಿಸುತ್ತಾರೆ. ಇದು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ.

ಮಕ್ಕಳಿಗೆ ಆಹಾರ ನೀಡೊದ್ಯಾವಾಗ..?

ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಕಾರ ಹಾಗೂ ಜಗತ್ತಿನ ಅನೇಕ ವೈದ್ಯರು ಒಂದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಮಗುವಿಗೆ 6 ತಿಂಗಳಿನವರೆಗೆ ತಾಯಿಯ ಎದೆ ಹಾಲನ್ನು ಮಾತ್ರ ನೀಡಬೇಕು. ಬಳಿಕ ಗಟ್ಟಿಯಾದ ಆಹಾರವನ್ನು(ಸಾಮಾನ್ಯ ಆಹಾರ) ಬಳಿಕ ನಿಧಾನವಾಗಿ ನೀಡಬೇಕು. ಇನ್ನು ಆಹಾರದಲ್ಲಿ ಯಾವುದೇ ರೀತಿಯ ಉಪ್ಪು ಹಾಗೂ ಸಕ್ಕರೆಯನ್ನು ಬಳಸಬೇಕು ಎಂದು ತಜ್ಞರು ಹೇಳುತ್ತಾರೆ.

ಚಿಕ್ಕ ಮಕ್ಕಳಿಗೆ ಏಕೆ ಉಪ್ಪನ್ನು ನೀಡಬಾರದು..?

1.ಮಕ್ಕಳ ಮೂತ್ರಪಿಂಡಗಳು ಅಭಿವೃದ್ಧಿ ಹೊಂದಿರುವುದಿಲ್ಲ. ಇದರಿಂದಾಗಿ ಅವರಿಗೆ ಹೆಚ್ಚುವರಿ ಉಪ್ಪು ಆರೋಗ್ಯಕ್ಕೆ ಹಾನಿ ಮಾಡುತ್ತದೆ.

2. ಮಗುವಿಗೆ ಆರಂಭದಲ್ಲಿಯೇ ಉಪ್ಪು ನೀಡುವುದರಿಂದ ಮೆದುಳಿನ ಬೆಳವಣಿಗೆಗೆ ಕುಂಠಿತಗೊಳ್ಳುತ್ತದೆ.

3. ಮಗುವಿಗೆ ಆರಂಭದಲ್ಲಿಯೇ ಉಪ್ಪು ನೀಡುವುದರಿಂದ ಅಧಿಕ ರಕ್ತದೊತ್ತಡ(ಬಿಪಿ) ಕಾಯಿಲೆ ಬರಬಹುದು.

ಮಗು ಜನಿಸಿದ ಎಷ್ಟು ತಿಂಗಳು ಬಳಿಕ ಉಪ್ಪು ನೀಡಬೇಕು..?

1 ವರ್ಷದ ನಂತರ ಮಗುವಿಗೆ ಸಲ್ಪ ಉಪ್ಪನ್ನು ನೀಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ, 1 ವರ್ಷದಿಂದ 3 ವರ್ಷದ ಮಕ್ಕಳಿಗೆ 2 ಗ್ರಾಂಗಿಂತ ಆಹಾರದಲ್ಲಿ ಉಪ್ಪು ಅಧಿಕ ಇರಬಾರದು. ಅಂದರೆ ದಿನಕ್ಕೆ ಅರ್ಧ ಟೀಚಮಚಕ್ಕಿಂತ ಹೆಚ್ಚಿರಬಾರದು ಎಂಬುದನ್ನು ನೆನಪಿನಲ್ಲಿಡಬೇಕು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net