ಮಾನ್ಸೂನ್ ಸಮಯದ ನೆತ್ತಿಯ ತುರಿಕೆ ಹೋಗಲಾಡಿಸಲು ಇಲ್ಲಿವೆ ಕೆಲವು ಮನೆಮದ್ದುಗಳು

itchy
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಮಳೆಯಲ್ಲಿ ನೆನೆದ ಬಂದ ಕೂಡಲೇ ಕೆಲವರ ನೆತ್ತಿಯಲ್ಲಿ ತುರಿಕೆ ಶುರುವಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಹೊಟ್ಟು.ಪರಾವಲಂಬಿ ಜೀವಿ ಹೇನು, ಚರ್ಮದ ಸಮಸ್ಯೆಗಳ ಉರಿತ ಜತೆಗೆ ಇನ್ನು ಹಲವಾರು ಕಾರಣಗಳಿವೆ. ಇವುಗಳು ನಿಜವಾಗಿಯೂ ಭಯಾನಕವೆಂದು ತೋರುತ್ತವೆ, ಆದರೆ ದಯವಿಟ್ಟು ಚಿಂತಿಸಬೇಡಿ. ಮಾನ್ಸೂನ್ ಸಮಯದಲ್ಲಿ ನೆತ್ತಿಯ ತುರಿಕೆಗೆ ಕೆಲವು ಮನೆಮದ್ದುಗಳು ಇಲ್ಲಿವೆ:

ತೆಂಗಿನ ಎಣ್ಣೆಯ ಒಣ ನೆತ್ತಿಯನ್ನು ತೇವಗೊಳಿಸಲು ಸಹಾಯ ಮಾಡುವುರದರ ಜತೆಗೆ ಇದರಲ್ಲಿರುವ ಗೆಲಾರಿಕ್ ಆಸಿಡ್ ಸೂಕ್ಷ್ಮಜೀವಿಯನ್ನು ಹೊಡೆದು ಹಾಕಲು ಸಹಾಯ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್​​ನ್ನು ತೆಂಗಿನ ಎಣ್ಣೆ ಜತೆಗೆ ಸೇರಿಸಿದರೆ ನೆತ್ತಿಯ ತುರಿಕೆಗೆ ಪರಿಹಾರ ನೀಡುವ ಮತ್ತೊಂದು ಮನೆಮದ್ದು ಆಗಿದೆ. ಇದರಲ್ಲಿನ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳು ಮತ್ತು ಮಾಲಿಕ್ ಆಮ್ಲವು ತುರಿಕೆ ನೆತ್ತಿಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಐಫೋನ್​ಗಾಗಿ ತನ್ನ ಮಾಜಿ ಪ್ರೇಯಸಿಯನ್ನೇ ಅಪಹರಿಸಿದ ಭೂಪ..!

ಟೀ ಟ್ರೀ ಆಯಿಲ್ (ಚಹಾ ಮರದ ಎಣ್ಣೆ) ಟೆರ್ಪೀನ್‌ಗಳನ್ನು ಹೊಂದಿದ್ದು, ತೆಂಗಿನ ಎಣ್ಣೆಯೊಂದಿಗೆ ಕೆಲವು ಹನಿಗಳನ್ನು ಮಿಶ್ರಣ ಮಾಡಿ ಸೇರಿಸಿ ತಲೆಗೆ ಲೇಪಿಸಬೇಕು. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ನೆತ್ತಿಯ ತುರಿಕೆಯನ್ನು ತಡೆಯುತ್ತದೆ. ಪುದೀನಾ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಮತ್ತು ತಲೆಹೊಟ್ಟು ತೊಡೆದುಹಾಕಲು ಸಹಾಯ ಮಾಡುತ್ತದೆ.

ನೆತ್ತಿಯ ತುರಿಕೆಗೆ ನಮ್ಮ ಮನೆಗಳಲ್ಲಿ ಬಹಳ ಸುಲಭವಾಗಿ ಲಭ್ಯವಿರುವ ನಿಂಬೆ ಹಣ್ಣು ಉತ್ತಮವಾಗಿದ್ದು, ಇದು ಕೊಳಕು ಮತ್ತು ಸತ್ತ ಜೀವಕೋಶಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಬೇವು ಯಾವಾಗಲೂ ಆಂಟಿಫಂಗಲ್ ಮತ್ತು ಆಂಟಿಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಸ್ವಲ್ಪ ತೆಂಗಿನ ಎಣ್ಣೆಗೆ 4-5 ಹನಿ ಬೇವಿನ ಎಣ್ಣೆಯನ್ನು ಸೇರಿಸಿ ಲೇಪಿಸಬಹುದಾಗಿದೆ. ಆದರೆ ಮನೆಮದ್ದುಗಳಿಂದ ಕೆಲವರಿಗೆ ಅಲರ್ಜಿ ಉಂಟಾಗುತ್ತದೆ. ಹಾಗಾಗಿ ಇವುಗಳನ್ನು ಅನುಸರಿಸುವ ಮುಂಚೆ ವೈದ್ಯರ ಅಭಿಪ್ರಾಯಪಡೆಯುವುದು ಒಳ್ಳೆಯದು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net