ಕಿವಿ ತುರಿಕೆ ಕಡಿಮೆ ಮಾಡಲು ಸಹಾಯವಾಗುವ ಮನೆಮದ್ದುಗಳು | home remedies

untitled-design-2025-09-02t160820439-68b6c92362b71
Published on

home remedies: ಇಂದಿನ ದಿನಮಾನಗಳಲ್ಲಿ ವಾತಾವರಣದ ಬದಲಾವಣೆಯಿಂದಾಗಿ ಶೀತ, ಕೆಮ್ಮು, ಕಿವಿ ತುರಿಕೆ ಈ ರೀತಿಯ ಹಲವಾರು ಕಾಯಿಲೆಗಳಿಗೆ ನಾವಿಂದು ತುತ್ತಾಗುತ್ತಿದ್ದೇವೆ. ಅದೇ ರೀತಿಯಲ್ಲಿ ಈ ಕೆಲವೊಂದು ಪದಾರ್ಥಗಳನ್ನು ಸೇವಿಸಿದಾಗ ಕಿವಿ ತುರಿಕೆ ಉಂಟಾಗುತ್ತದೆ ಇಂತಹ ಸಮಸ್ಯೆಗಳಿಂದ ಹೊರ ಬರಲು ಈ ರೀತಿಯ ಮನೆಮದ್ದುಗಳನ್ನು ಸ್ವತಃ ನೀವೇ ತಯಾರಿಸಿ ಕಿವಿಗೆ ಹಚ್ಚಿಕೊಳ್ಳಿ ಇದರಿಂದ ಕಿವಿ ನೋವು ಕಡಿಮೆಯಾಗುತ್ತದೆ. ಆದರೆ, ತುರಿಕೆ ಜೊತೆಗೆ ತೀವ್ರ ನೋವು, ಊತ, ಜ್ವರ, ಅಥವಾ ಶ್ರವಣ ಶಕ್ತಿಯ ಕಡಿಮೆಯಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ ತನಿಖೆಗೆ ED ಎಂಟ್ರಿ! ED-DHARMASTHALA CASE

1. ಬೆಚ್ಚಗಿನ ಆಲಿವ್ ಎಣ್ಣೆ

1ಅಥವಾ 2 ಚಮಚ ಆಲಿವ್ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಕಾಯಿಸಿ 2 ಹನಿಯನ್ನು ಕಿವಿ ಒಳಗೆ ಹಾಕಿ 5 ನಿಮಿಷ ಬಿಟ್ಟು ಶುದ್ಧ ಬಟ್ಟೆಯಿಂದ ಒರೆಸಿರಿ. ಇದು ಒಣಗಿದ ಚರ್ಮ ಮತ್ತು ಕಿವಿ ಮೇಣದಿಂದ ಉಂಟಾಗುವ ಕಿರಿಕಿರಿಯನ್ನು ತಪ್ಪಿಸುತ್ತದೆ.

2. ತೆಂಗಿನ ಎಣ್ಣೆ ಮಸಾಜ್​

ಶುದ್ಧ ತೆಂಗಿನ ಎಣ್ಣೆಯ 1-2 ಹನಿಗಳನ್ನು ಕಿವಿಯ ಒಳಗೆ ಹಾಕಿ 2 ಇಮಿಷ ಮಸಾಜ್​ ಮಾಡಿ. ಇದರ ತೇವಾಂಶ ಆಂಟಿ-ಬ್ಯಾಕ್ಟೀರಿಯಲ್ ಗುಣಗಳ ತುರಿಕೆಯನ್ನು ಕಡಿಮೆ ಮಾಡುತ್ತದೆ. 1 ಗಂಟೆಯ ನಂತರ ಶುದ್ಧ ಬಟ್ಟೆಯಲ್ಲಿ ಒರೆಸಿ.

3. ಬೆಳ್ಳುಳ್ಳಿ ಎಣ್ಣೆ

1- 2 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಆಲಿವ್​ ಎಣ್ಣೆಯಲ್ಲಿ ಕಾಯಿಸಿ, ತಣ್ಣಗಾಗಲು ಬಿಡಿ ನಂತರ ಇದನ್ನು 2 ಹಣಿಗಳಷ್ಟು ಕಿವಿ ಒಳಗೆ ಹಾಕಿ ಮಸಾಜ್​ ಮಾಡಿ. ಬೆಳ್ಳುಳ್ಳಿ ಗುಣಗಳು ಆಂಟಿ-ಬ್ಯಾಕ್ಟೀರಿಯಲ್ ಗುಣಗಳ ತುರಿಕೆಯನ್ನು ಕಡಿಮೆ ಮಾಡುತ್ತದೆ.

4. ನೀರಿನಿಂದ ಶುದ್ಧೀಕರಣ

1 ಕಪ್​ ನೀರಿಗೆ 1/4 ಚಮಚ ಉಪ್ಪು ಬೆರೆಸಿ ಶುದ್ಧ ಹತ್ತಿಯಿಂದ ದ್ರಾವಣವನ್ನು ಕಿವಿಯ ಸುತ್ತಲೂ ಒರೆಸಿ ಇದು ತುರಿಕೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net