ಧರ್ಮಸ್ಥಳ ಪ್ರಕರಣ ತನಿಖೆಗೆ ED ಎಂಟ್ರಿ! ED-DHARMASTHALA CASE

mask man
Published on

ED-DHARMASTHALA CASE : ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಹೇಳಿದ್ದ ಮಾಸ್ಕ್​ ಮ್ಯಾನ್​​ ಚಿನ್ನಯ್ಯ ಮಾಡಿರುವ ಆರೋಪ ಪ್ರಕರಣ ಸಂಬಂಧ ಎಸ್​​ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಈ ಬೆನ್ನಲ್ಲೇ ಇದೀಗ ಈ ಪ್ರಕರಣದಲ್ಲಿ ಅಧಿಕೃತವಾಗಿ ಇಡಿ(ನಿರ್ದೇಶನಾಲಯ) ( Enforcement Directorate (ED) ಪ್ರವೇಶ ಮಾಡಿದೆ.

ಈ ಪ್ರಕರಣದಲ್ಲಿ  ಜಾರಿ ನಿರ್ದೇಶನಾಲಯ ವಿದೇಶಿ NGO ಗಳಿಂದ ಹಣ ಫಂಡಿಂಗ್ ಆಗಿದೆಯಾ ಎಂಬ ಅನುಮಾನ, ಹಾಗೂ ವಿದೇಶಗಳಿಂದ ಫಂಡಿಂಗ್ ಆಗಿರುವ ಆರೋಪಗಳು ಕೇಳಿ ಬಂದಿದ್ದವು.   ಈ   ವಿವಾದವನ್ನು ಹುಟ್ಟುಹಾಕಲು ಶಂಕಿತರು ಹಣವನ್ನು ಬಳಸಿದ್ದಾರೆಂದು ಹೇಳಲಾಗುವ ಕೆಲವು ಎನ್‌ಜಿಒಗಳು ಸೇರಿದಂತೆ ಎಲ್ಲಾ ಘಟಕಗಳು ( entities ) ಮತ್ತು ಪಾಲುದಾರರಿಗೆ ( stakeholder ) ಸಂಬಂಧಿಸಿದ ಸಂಗತಿಗಳು ಮತ್ತು ದಾಖಲೆಗಳನ್ನು ಸಂಸ್ಥೆ ಸಂಗ್ರಹಿಸುತ್ತಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ED) ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದೆ ಮತ್ತು ತನಿಖೆಯಲ್ಲಿ ವಿದೇಶಿ ನಿಧಿ ನಿಯಮ ಉಲ್ಲಂಘನೆ ಮತ್ತು ನಿಧಿಯ ಅಕ್ರಮ ಬಳಕೆಯ ಪುರಾವೆಗಳು ಕಂಡುಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಕರಣ ಹಿನ್ನೆಲೆ: 

1995 ರಿಂದ 2014 ರವರೆಗೆ ಧರ್ಮಸ್ಥಳದಲ್ಲಿ ದೇವಸ್ಥಾನದ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದಾಗ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಶವಗಳು ಸೇರಿದಂತೆ ಹಲವಾರು ಶವಗಳನ್ನು ಹೂಳಲು ಒತ್ತಾಯಿಸಲಾಗಿದೆ. ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತಿಡಲಾಗಿದೆ  ಎಂದು ಈ ಹಿಂದೆ ಅಲ್ಲಿ ಕೆಲಸ ಮಾಡಿಕೊಂಡಿದ್ದ  ಮಾಸ್ಕ್​​ ಮ್ಯಾನ್​ ಚಿನ್ನಯ ಆರೋಪ ಮಾಡಿದ್ದನು. ಈ ಬೆನ್ನಲ್ಲೇ ಈ ಪ್ರಕರಣ ತನಿಖೆಗೆ ಎಸ್​​ಐಟಿ ರಚನೆ  ಮಾಡಲಾಗಿತ್ತು.

ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ (SIT) ಆರೋಪಗಳ ತನಿಖೆ ನಡೆಸುತ್ತಿದೆ ಮತ್ತು ನೇತ್ರಾವತಿ ನದಿಯ ದಡದಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ದೂರುದಾರರು ಗುರುತಿಸಿದ ಬಹು ಸ್ಥಳಗಳನ್ನು ಅದು ಉತ್ಖನನ ಮಾಡಿದೆ. ಆದರೆ ಎಸ್​ಐಟಿ ಪರಿಶೀಲನೆ ಮಾಡಿದಾಗ  ಮಾಸ್ಕ್​ಮ್ಯಾನ್ ತೋರಿಸಿದ ಎಲ್ಲ ಕಡೆಯೂ ಮೂಳೆಗಳು ಏನು ಸಿಕ್ಕಿರಲಿಲ್ಲ. ಇದಾದ ಮೇಲೆ ತನಿಖೆ ಚುರುಕು ಪಡೆಯುತ್ತಿದ್ದಂತೆ ವಿದೇಶಗಳಿಂದ ಫಂಡಿಂಗ್ ಆಗಿರುವ ಆರೋಪಗಳು ಕೇಳಿ ಬಂದಿದ್ದವು.

ಕಾನೂನು ಬಾಹಿರವಾಗಿ ಹಣ ಬಂದಿರುವ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು, ಕಳೆದ 5 ವರ್ಷಗಳ ಟ್ರಾನ್ಸ್​ಕ್ಷನ್ ನೀಡುವಂತೆ ಕೆಲ ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ. ವಿದೇಶದಿಂದ ಹಣ ಬಂದಿರುವ ಕುರಿತು ಮಾಹಿತಿ ಹಾಗೂ ಅದಕ್ಕೆ ಸಂಬಂಧಿಸಿದ ಪ್ರತಿಗಳು, ವಿದೇಶದಿಂದ ಹಣ ಬಂದರೆ ಅದಕ್ಕೆ ಕಾರಣವೇನು ಎಂಬುದನ್ನು ತಿಳಿಸುವಂತೆ ಬ್ಯಾಂಕ್​ ಗಳಿಗೆ ಇಡಿ ಅಧಿಕಾರಿಗಳು ಪತ್ರದ ಮೂಲಕ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಕೋಮು ಸಾಮರಸ್ಯವನ್ನು ಕದಡುವ ಮತ್ತು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತರುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ರಚಿಸಿ ಪ್ರಸಾರ ಮಾಡಿದ ಆರೋಪದ ಮೇಲೆ ಮಟ್ಟಣ್ಣವರ್ ಮತ್ತು ತಿಮರೋಡಿ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯ ಪಟ್ಟಣವಾದ ಧರ್ಮಸ್ಥಳದ ವಿರುದ್ಧದ ಪಿತೂರಿ ಮತ್ತು ಅಪಪ್ರಚಾರವನ್ನು ಖಂಡಿಸಿ ಕರ್ನಾಟಕ ಬಿಜೆಪಿ ಸೋಮವಾರ "ಧರ್ಮಸ್ಥಳ ಚಲೋ" ರ‍್ಯಾಲಿಯನ್ನು ನಡೆಸಿತು.

( The sources  PTI )

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net