

Hair Growth: ಮನುಷ್ಯನಿಗೆ ಅಂದ ಎಂದರೆ ಕೇಶರಾಶಿ! ಯಾರಿಗೆ ತಾನೇ ತಮ್ಮ ಕೂದಲಿನ ಬಗ್ಗೆ ಕಾಳಜಿ ಇರೋದಿಲ್ಲ ಹೇಳಿ? ವಾರದಲ್ಲಿ ಒಂದು ಬಾರಿ ಅಥವಾ ಎರಡು ಬಾರಿ ತಲೆಗೆ ಕೊಬ್ಬರಿ ಎಣ್ಣೆ, ಹರಳೆಣ್ಣೆಯಿಂದ ಮಸಾಜ್ ಮಾಡಿ, ಕೂದಲ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕೆಲವರಿಗೆ ಕೂದಲು ಉದುರುತ್ತಿದೆ ಎಂಬ ಚಿಂತೆ ಕಾಡಿದರೆ, ಇನ್ನು ಕೆಲವರಿಗೆ ಉದ್ದನೆಯ, ದಟ್ಟವಾದ ಕೇಶರಾಶಿ ನನಗಿಲ್ಲವೇ ಎಂಬ ಕೊರಗು ಕಾಡುತ್ತದೆ. ಇದು ವಿಪರ್ಯಾಸವೇ ಸರಿ.
ಹೊಟ್ಟು, ಬಿಳಿ ಕೂದಲು ಹೀಗೆ ನಾನಾ ಸಮಸ್ಯೆಯಿಂದ ಬಳಲುವ ಅನೇಕ ಮಂದಿ, ತಮ್ಮ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಕೂದಲಿಗೆ ಸಂಬಂಧಿಸಿದಂತೆ ಸಿಗುವ ಹೊಸ ಹೊಸ ಉತ್ಪನ್ನಗಳನ್ನು ಪ್ರಯೋಗಿಸಿ, ಇರುವ ಕೂದಲನ್ನು ಹಾಳು ಮಾಡಿಕೊಳ್ಳುವುದರ ಜತೆಗೆ ಕೂದಲ ಬೆಳವಣಿಗೆಗೆ ಸಂಪೂರ್ಣವಾಗಿ ಕತ್ತರಿ ಹಾಕಿಕೊಳ್ಳುತ್ತಾರೆ. ಇಂತಹ ಎಡವಟ್ಟು ಮಾಡಿಕೊಳ್ಳುವ ಬದಲಿಗೆ ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಲು ಮನೆಯಲ್ಲೇ ಸಿಗುವ ಈ ಎರಡು ಪದಾರ್ಥಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.
ಎಲ್ಲರಿಗೂ ತಿಳಿದಿರುವಂತೆ ನೆಲ್ಲಿಕಾಯಿಯಲ್ಲಿ (ಆಮ್ಲ) ಸಾಕಷ್ಟು ಪ್ರಯೋಜನಕಾರಿ ಅಂಶಗಳು ಅಡಗಿದ್ದು, ಕೂದಲಿನ ಆರೋಗ್ಯಕ್ಕಂತು ಹೇಳಿ ಮಾಡಿಸಿದ ಮನೆ ಔಷಧ. ನಿಮ್ಮ ಕೂದಲು ದಟ್ಟವಾಗಿ, ಸೊಂಪಾಗಿ ಬೆಳೆಯಲು ಕೊಬ್ಬರಿ ಎಣ್ಣೆಗೆ ನೆಲ್ಲಿಕಾಯಿಯ ಪುಡಿಯನ್ನು ಮಿಶ್ರಿಸಿ, ಕೂದಲಿಗೆ ಒಳ್ಳೆಯ ಮಸಾಜ್ ಮಾಡಿದರೆ ಬುಡದಿಂದ ಕೂದಲು ಉದ್ದವಾಗಿ, ಸೊಂಪಾಗಿ ಬೆಳೆಯಲು ವೇಗವಾಗಿ ಸಹಾಯ ಮಾಡುತ್ತದೆ. ಇದರಿಂದ ಕಳೆದು ಹೋದ ಕೂದಲು ಮತ್ತೆ ಚಿಗುರೊಡೆಯುವ ಮೂಲಕ ನಿಮ್ಮ ಕೇಶರಾಶಿಗೆ ಹೊಸ ಕಳೆಯನ್ನೇ ನೀಡುತ್ತದೆ.