

ಕಣ್ಣುಗಳು ಪ್ರಕೃತಿಯ ಅತ್ಯುತ್ತಮ ಕೊಡುಗೆಯಾಗಿದೆ, ಆದ್ದರಿಂದ ಕಣ್ಣುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಬೀಸಿಲಿನ ಬೇಗೆಗೆ ದೇಹ ಮಾತ್ರವಲ್ಲ ಕಣ್ಣಿಗಳು ಬಳಲುತ್ತವೆ. ಪ್ರಸ್ತುತ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಎದುರಿಸುತ್ತಿರುವ ಸಮಸ್ಯೆ ಎಂದರೆ ಡ್ರೈ ಐ ಸಿಂಡ್ರೋಮ. ಆಹಾರದಲ್ಲಿ ಪೋಷಕಾಂಶಗಳ ಕೊರತೆ ಮತ್ತು ಅನುಚಿತ ಜೀವನಶೈಲಿಯಿಂದ ಈ ಸಮಸ್ಯೆ ಎದುರಾಗಬಹದು. ಡ್ರೈ ಐ ಸಿಂಡ್ರೋಮ ಬರಲು ಕಾರಣ ಏನು..? ಅದರ ನಿವಾರಣೆಗೆ ಬಳಸಬಹುದಾದ ಮನೆಮದ್ದಿನ ಮಾಹಿತಿ ಇಲ್ಲಿ ನೀಡಲಾಗಿದೆ.
ಡ್ರೈ ಐ ಸಿಂಡ್ರೋಮಗೆ ಕಾರಣಗಳೇನು :
1. ಕಂಪ್ಯೂಟರ್ ಮುಂದೆ ಕುಳಿತು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದು.
2. ಕಾಂಟ್ಯಾಕ್ಟ್ ಲೆನ್ಸ್‌ಗಳ ದೀರ್ಘಾವಧಿಯ ಬಳಕೆ.
3. ದೀರ್ಘಕಾಲ ಎಸಿಯಲ್ಲಿ ಕುಳಿತುಕೊಳ್ಳುವುದು.
4. ಮಾಲಿನ್ಯ.
5. ಅಧಿಕ ರಕ್ತದೊತ್ತಡ ಮತ್ತು ಖಿನ್ನತೆಯನ್ನು ನಿವಾರಿಸಲು ಔಷಧಿಗಳ ಸೇವನೆ.
6. ವಿಟಮಿನ್ ಎ ಕೊರತೆ.
ಡ್ರೈ ಐಸ್ ಸಿಂಡ್ರೋಮ್ ನಿವಾರಣೆಗೆ ಮನೆಮದ್ದು :
1. ಅಲೋವೆರಾ ಜೆಲ್ ಬಳಕೆ : ಅಲೋವೆರಾ ಜೆಲ್ ಅನ್ನು ನೀರಿನಲ್ಲಿ ಮಿಶ್ರಣ ಮಾಡಿ, ನಂತರ ಅದರಿಂದ ಕಣ್ಣನ್ನು ಮುಚ್ಚಿ ತೊಳೆಯುವುದು.
2. ಆಲೂಗೆಡ್ಡೆ ಚೂರು ಅತ್ಯಂತ ಪರಿಣಾಮಕಾರಿ ಮದ್ದು : ಆಲೂಗಡ್ಡೆಯನ್ನು ಎರಡು ಭಾಗಗಳಾಗಿ ಕತ್ತರಿಸಿ ರೆಫ್ರಿಜರೇಟರ್ನಲ್ಲಿ ಇಡಿ. ತಣ್ಣಗಾದ ಬಳಿಕ ಅದನ್ನು ತೆಗೆದುಕೊಂಡು 15-20 ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇರಿಸಿ.
3. ಆಮ್ಲಾ ಜ್ಯೂಸ್ ಕುಡಿಯಿರಿ : ಒಂದು ಚಮಚ ಜೇನುತುಪ್ಪದಲ್ಲಿ ಆಮ್ಲಾ ರಸವನ್ನು ಬೆರೆಸಿ ಕುಡಿಯಿರಿ. ಇದನ್ನು ಕುಡಿಯುವುದರಿಂದ ಕಣ್ಣುಗಳ ಶುಷ್ಕತೆ ದೂರವಾಗುತ್ತದೆ ಮತ್ತು ಇತರ ಸಾಂಕ್ರಾಮಿಕ ರೋಗಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ/
4. ಸೌತೆಕಾಯಿ ಸ್ಲೈಸ್ : ಎರಡು ಚಿಕ್ಕ ಸೌತೆಕಾಯಿಯ ತುಂಡುಗಳನ್ನು ಕಣ್ಣುಗಳ ಮೇಲೆ 10-15 ನಿಮಿಷಗಳ ಕಾಲ ಇರಿಸಿ, ಇದು ಕಣ್ಣುಗಳಿಗೆ ತಂಪು ನೀಡುತ್ತದೆ.