ಸಾರ್ವಜನಿಕ ಪ್ರದೇಶಗಳಲ್ಲಿ ಪ್ಯಾನಿಕ್​ ಅಟ್ಯಾಕ್​ ಸಂಭವಿಸಿದರೆ ಅವುಗಳಿಂದ ಹೊರ ಬರಲು ಹೀಗೆ ಮಾಡಿ | panic attack

untitled-design-2025-08-29t175001599-68b19afd5f941
Published on

panic attack : ಪ್ರಥಮ ಚಿಕಿತ್ಸೆ ಎಂಬುದನ್ನು ನಾವು ಸಾಮಾನ್ಯವಾಗಿ ಶಾಲೆಯಲ್ಲಿ ಕಲಿತಿರುವಂತಹ ಒಂದು ಪಾಠವಾಗಿರುತ್ತದೆ. ಚಿಕ್ಕ ಗಾಯಗಳಿಗೆ ಯಾವ ರೀತಿಯಾಗಿ ಪ್ರಾಥಮಿಕ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ನಾವು ತಿಳಿದಿದ್ದೇವೆ. ಯಾವುದಾದರೂ ಪ್ಯಾನಿಕ್​ ಅಟ್ಯಾಕ್​ ಆದಾಗ ಯಾವ ರೀತಿಯಲ್ಲಿ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂಬುದು ಎಷ್ಟು ಜನರಿಗೆ ತಿಳಿದಿದೆ? ಮನಸ್ಸಿಗೆ ಪ್ರಥಮ ಚಿಕಿತ್ಸೆ ನೀಡಬಹುದೇ? ಎಂಬ ಹಲವಾರು ಪ್ರಶ್ನಡೆಗಳು ಇಮದು ನಮ್ಮಲ್ಲಿ ಹುದುಗಿಹೋಗಿವೆ. ಅಂದಹಾಗೆ ಪ್ಯಾನಿಕ್​ ಅಟ್ಯಾಕ್​ ಹಾಗೂ ಆತಂಕ ಯಾವ ರೀತಿಯಲ್ಲಿ ಇರುತ್ತದೆ ಎಂದು ತಿಳಿಯಿರಿ.

ಆತಂಕ v/s ಪ್ಯಾನಿಕ್​ ಅಟ್ಯಾಕ್​

ಒತ್ತಡ, ಆತಂಕ, ಗಾಬರಿ, ಖಿನ್ನತೆ ಈ ಪದಗಳು ನಮ್ಮ ದೈನಂದಿನ ಜೀವನದಲ್ಲಿ ಒಂದು ಭಾಗವಾಗಿವೆ. ಆದರೂ, ಇವುಗಳು ವಿಭಿನ್ನ ಅರ್ಥಗಳನ್ನು ಹೊಂದಿದ್ದರೂ ಹೆಚ್ಚಾಗಿ ಪರಸ್ಪರ ಬದಲಾವಣೆಯಾಗುತ್ತದೆ. ಇತ್ತೀಚಿನ ಅಧ್ಯಾಯನಗಳು ಕೋವಿಡ್​ ನಂತರ ಭಾರತದಲ್ಲಿ ಶೇ. 35ಕ್ಕಿಂತ ಹೆಚ್ಚು ಜನರು ಆತಂಕ್ಕೀಡಾಗಿದ್ದಾರೆ ಎಂದು ತೋರಿಸುತ್ತಿವೆ. ಇದು ಜಾಗತಿಕವಾಗಿ ಪ್ರವೃತ್ತಿಯನ್ನು ಬಿಂಬಿಸುತ್ತಿದೆ.

ಪ್ಯಾನಿಕ್ ಅಟ್ಯಾಕ್‌ಗಳು ಹೇಗೆ ಗೋಚರಿಸುತ್ತವೆ

ಪ್ಯಾನಿಕ್ ಅಟ್ಯಾಕ್‌ಗಳು ತೀವ್ರವಾದ ಆತಂಕ, ಭಯ ಅಥವಾ ಅಸ್ವಸ್ಥತೆಯಿಂದ ಕೂಡಿರುತ್ತವೆ. ಇವು ಇದ್ದಕ್ಕಿದ್ದಂತೆ ಮನುಷ್ಯನಲ್ಲಿ 10-15 ನಿಮಿಷಗಳಲ್ಲಿ ಗರಿಷ್ಠ ತೀವ್ರತೆಯನ್ನು ತಲುಪುತ್ತವೆ. ಹಾಗೇ ಇವುಗಳು ತುಂಬಾ ಹೊತ್ತು ಆ ವ್ಯಕ್ತಿಯಲ್ಲಿಯೇ ಉಳಿದುಕೊಳ್ಳಬಹುದು.

ಸಾಮಾನ್ಯ ಲಕ್ಷಣಗಳು

ಒಂದು ವ್ಯಕ್ತಿಯು ಪ್ಯಾನಿಕ್​ ಅಟ್ಯಾಕ್​ ಅನುಭವವನ್ನು ಹೊಂದುವುದಾದರೆ ಉಸಿರಾಟದ ತೊಂದರೆ, ಬೆವರುವುದು, ನಡಗುವುದು, ವಾಕರಿಕೆ, ತಲೆ ತಿರುಗುವುದು, ಅತಿಯಾದ ಎದೆ ಬಡಿತ, ಎದೆಯಲ್ಲಿ ಅಸ್ವಸ್ಥತೆಯನ್ನು ಹೊಂದುವ ಸಮಸ್ಯೆಗಳನ್ನು ಅನುಭವಿಸುತ್ತಾನೆ. ಈ ಲಕ್ಷಣಗಳು ಹೆಚ್ಚಾದಲ್ಲಿ ಹೃದಯಘಾತ ಹಾಗೂ ಅಸ್ತಮ ಉಂಟಾಗುತ್ತದೆ. ಇವುಗಳಿಂದ ವ್ಯಕ್ತಿಯ ಸ್ಥಿತಿ ಹದಗೆಡಲು ಪ್ರಾರಂಭಿಸುತ್ತದೆ. ಈ ರೀತಿಯ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರ ಬಳಿ ಹೋಗುವುದು ಉತ್ತಮ ಮಾರ್ಗ.

ಪ್ಯಾನಿಕ್​ ಅಟ್ಯಾಕ್​ನ್ನು ನಿಭಾಯಿಸುವುದು ಹೇಗೆ?

* ಮೊದಲು ಆತಂಕಗೊಂಡ ವ್ಯಕ್ತಿಯನ್ನು ಶಾಂತಗೊಳಿಸಿ ಮೃದು ಧ್ವನಿಯಲ್ಲಿ ಮಾತನಾಡಿ

* ಆ ವ್ಯಕ್ತಿಯನ್ನು ಜನಸಂದಣಿ ಅಥವಾ ಅನಗತ್ಯ ಗಮನದಿಂದ ದೂರವಿಟ್ಟು, ಶಾಂತ ಸ್ಥಳಕ್ಕೆ ಕರೆದೊಯ್ದು ಸಮಾಧಾನಗೊಳಿಸಿ.

* ಅವರ ಉಸಿರಾಟವನ್ನು ನಿಧಾನಗೊಳಿಸಲು ಸಹಾಯ ಮಾಡಿ. ಸ್ಥಿರ ಉಸಿರಾಟವನ್ನು ಪ್ರೋತ್ಸಾಹಿಸಿ.

* ಈ ಎಲ್ಲಾ ಅಂಶಗಳನ್ನು ಆ ವ್ಯಕ್ತಿಗೆ ಮಾಡುವುದರಿಂದ ಅತಿಯಾದ ಭಾವನೆಗಳು ಕಡಿಮೆಯಾಗುತ್ತವೆ. ಮೊದಲಿನ ಸ್ಥಿತಿಗೆ ತಲುಪಲು ಸಹಾಯವಾಗುತ್ತದೆ.

* ಯಾವುದೇ ರೀತಿಯಲ್ಲೂ ಭಯಗೊಳಿಸುವಂತಹ ಕಾರ್ಯವನ್ನು ಆ ವ್ಯಕ್ತಿ ಎದುರು ಮಾಡಬೇಡಿ. ಇವುಗಳಿಂದ ಅವರು ಭಯಪಡಬಹುದು.

ಮಾನಸಿಕ ಆರೋಗ್ಯಕ್ಕೆ ಪ್ರಥಮ ಚಿಕಿತ್ಸೆ ನೀಡುವುದು ಹೇಗೆ?

ಪ್ಯಾನಿಕ್ ಅಟ್ಯಾಕ್ ಅಥವಾ ಹೆಚ್ಚಿದ ಆತಂಕವನ್ನು ಅನುಭವಿಸುತ್ತಿರುವವರು ಯಾರನ್ನಾದರೂ ಗುರುತಿಸಿದರೆ ಅವರನ್ನು ಹೇಗೆ ಅದರಿಂದ ಹೊರ ತರಬೇಕು ಎಂದು ಗಮನಿಸಿ.

* ಭಾವನಾತ್ಮಕವಾಗಿ ತೊಂದರೆ ಅನುಭವಿಸುತ್ತಿದ್ದರೆ ಅವರಿಗೆ 2 ನಿಮಿಷಗಳ ಧೈರ್ಯವನ್ನು ನೀಡಿ. ಹಾಗೇ ಇನ್ನಿತರ ಭಯ, ಆತಂಕದಂತಹ ಗುಣಗಳನ್ನು ಹೊಂದಿದ್ದರೆ ಅವರಿಗೆ ವಿಷಯವನ್ನು ಮುಕ್ತವಾಗಿ ಮನಸ್ಸಿನಿಂದ ಹೊರಹಾಕಲು ಹೇಳಿ.

* ಆ ವ್ಯಕ್ತಿಗೆ ಸಂಪೂರ್ಣ ಗಮನವನ್ನು ನೀಡಿ ಹಾಗೆಯೇ, ನೀವು ಇವಾಗ ಚೆನ್ನಾಗಿದ್ದೀರಿ, ಯವುದೇ ರೀತಿಯಲ್ಲೂ ಸಮಸ್ಯೆಗಳನ್ನು ಅನುಭವಿಸುತ್ತಿಲ್ಲ. ನಾವು ನೋಡಿದ್ದೇವೆ. ಎಂದು ಧನಾತ್ಮಕ ಹೇಳಿಕೆಗಳನ್ನು ನೀಡುವುದರಿಂದ ಅವರು ಆತಂಕ, ಭಯಗಳಂದ ಹೊರ ಬರಲು ಸಾಧ್ಯವಾಗುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net